ಪ್ರಚಾರಮಯ, ಕ್ಷೇತ್ರಗಳೆಲ್ಲಾ ಪ್ರಚಾರಮಯ


Team Udayavani, Apr 16, 2019, 3:00 AM IST

pracharamaya

ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಉಳಿದಿರುವುದು ಇನ್ನೊಂದೇ ದಿನ. ಹೀಗಾಗಿ, ರಾಜಕೀಯ ಪಕ್ಷಗಳ ನಾಯಕರು ಮತದಾರರ ಮನ ಸೆಳೆಯಲು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ತಂತ್ರ* ಪ್ರತಿತಂತ್ರ, ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಮತದಾರರ ಮನ ಗೆಲ್ಲಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಕ್ಷೇತ್ರಗಳ ತುಂಬೆಲ್ಲಾ ಪ್ರಚಾರದ್ದೇ ಭರಾಟೆ. ರಾಜ್ಯದ ವಿವಿಧೆಡೆ ಸೋಮವಾರ ನಡೆದ ಚುನಾವಣಾ ಪ್ರಚಾರ ಝಲಕ್‌ ಇಲ್ಲಿದೆ.

ಮಂಡ್ಯದ “ಜಾಗ್ವಾರ್‌’ ನಿಖಿಲ್‌ರನ್ನು ಗೆಲ್ಲಿಸಿ: ಚಂದ್ರಬಾಬು ನಾಯ್ಡು
ಪಾಂಡವಪುರ: ಸುಮಲತಾ ರಂಗಪ್ರವೇಶದಿಂದ ಹೈವೋಲ್ಟೆಜ್‌ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಈ ಹಿಂದೆ “ನಾಯ್ಡು’ ಪದ ಸಾಕಷ್ಟು ಸದ್ದು ಮಾಡಿತ್ತು. ಸುಮಲತಾ ಮೂಲತ:ನಾಯ್ಡು. ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನ್‌ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ಸಹ ನಾಯ್ಡು.

ಹೀಗಾಗಿ, ಸುಮಲತಾಗೆ ಮತ ಹಾಕುವ ಮೂಲಕ ಮಂಡ್ಯವನ್ನು “ನಾಯ್ಡುಮಯ’ ಮಾಡಬೇಡಿ ಎಂದು ಜೆಡಿಎಸ್‌ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿಕೆ ನೀಡಿದಾಗ ಅದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸ್ವತ: ಸುಮಲತಾ, “ನಾನು ಅಂಬರೀಶ್‌ ಪತ್ನಿ, ಮಂಡ್ಯ ಗೌಡ್ತಿ’ ಎಂದಿದ್ದರು.

ಆದರೆ, ಜೆಡಿಎಸ್‌, ಸೋಮವಾರ ನಿಖಿಲ್‌ ಪರ ಪ್ರಚಾರಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕರೆ ತಂದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪಾಂಡವಪುರದಲ್ಲಿ ನಿಖಿಲ ಪರ ಪ್ರಚಾರ ನಡೆಸಿದ ನಾಯ್ಡು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಚುನಾವಣೆ ಬಳಿಕ ನರೇಂದ್ರ ಮೋದಿ ಗುಜರಾತ್‌ಗೆ ವಾಪಸ್‌ ಹೋಗುವುದು ಸತ್ಯ ಎಂದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಚಂದ್ರಬಾಬು ನಾಯ್ಡು, ತೆಲುಗು ಹಾಗೂ ಕನ್ನಡ ಜನರ ನಡುವೆ ಉತ್ತಮ ಬಾಂಧವ್ಯವಿದೆ. ನಮ್ಮ ನಾಯಕ ಎನ್‌ಟಿಆರ್‌ಗೆ ಡಾ.ರಾಜ್‌ಕುಮಾರ್‌ ಎಂದರೆ ಹೆಚ್ಚು ಪ್ರೀತಿ. ಬೆಂಗಳೂರು, ಮೈಸೂರು ಎಂದರೆ ತೆಲುಗಿನವರಿಗೆ ಬಹಳ ಅಚ್ಚುಮೆಚ್ಚು.

ದೇವೇಗೌಡರನ್ನು ಕಂಡರೆ ನನಗೆ ಅಪಾರ ಗೌರವವಿದೆ. ಅವರು ಪ್ರಧಾನಿ ಹುದ್ದೆಗೇರಿದ ಏಕೈಕ ಕನ್ನಡಿಗ ಎಂಬ ಹೆಮ್ಮೆ ಇದೆ. ಆಗಲೂ ನಾನು ಅವರನ್ನು ಬೆಂಬಲಿಸಿದ್ದೆ. ಈಗಲೂ ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದರು. ಮಂಡ್ಯದ ಜಾಗ್ವಾರ್‌ ನಿಖಿಲ್‌ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ನಾಯ್ಡು ಟೀಕಿಸುವವರು ಚಂದ್ರಬಾಬು ನಾಯ್ಡುವನ್ನು ಕರೆತಂದಿದ್ಧೇಕೆ: ಸುಮಲತಾ
ಕೆ.ಆರ್‌.ನಗರದಲ್ಲಿ ಪ್ರಚಾರ ನಡೆಸಿದ ಸುಮಲತಾ, ಮಂಡ್ಯ ಜನತೆಯ ಸ್ವಾಭಿಮಾನ ಎತ್ತಿ ಹಿಡಿಯಲು ತಮಗೆ ಮತ ನೀಡುವಂತೆ ಮನವಿ ಮಾಡಿದರು.

* ಜೆಡಿಎಸ್‌ ಮುಖಂಡರು ನಾಯ್ಡು ಸಮಾಜದವರ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಟೀಕಿಸಿದ್ದಾರೆ. ಈಗ ಚಂದ್ರಬಾಬು ನಾಯ್ಡು ಅವರನ್ನು ಕರೆಸಿ ಚುನಾವಣಾ ಪ್ರಚಾರ ಮಾಡಿಸುತ್ತಿದ್ದಾರೆ. ಇದೆಂತಹ ಕ್ಷುಲ್ಲಕ ರಾಜಕೀಯ.

* ಕಾಂಗ್ರೆಸ್‌* ಜೆಡಿಎಸ್‌ ಮೈತ್ರಿ ಕೂಟ, 150 ಕೋಟಿ ರೂ.ಖರ್ಚು ಮಾಡಿ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದೆ. ಆದರೆ, ಮಂಡ್ಯದ ಜನತೆ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು.

* ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎದುರಾಳಿಗಳ ಚುನಾವಣಾ ಕುತಂತ್ರಗಳು ಬಹಿರಂಗವಾಗಿವೆ. ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಆಯ್ಕೆಯಾಗುವವರು ಜನಸೇವೆ ಮಾಡುತ್ತಾರೋ ಅಥವಾ ಹಣ ಮಾಡಲು ಮುಂದಾಗುತ್ತಾರೋ ಎಂಬುದನ್ನು ನೀವೇ ನಿರ್ಧರಿಸಿ.

* ಜನ ಬೆಂಬಲ ಇರುವವರೆಗೂ ಯಾರಿಂದಲೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ.

* ನನ್ನ ಬಗ್ಗೆ ಜೆಡಿಎಸ್‌ ಮುಖಂಡರು ಕೀಳು ಪದಗಳನ್ನು ಬಳಸಿ ಟೀಕೆ ಮಾಡುತ್ತಿರುವುದು ಸಮಸ್ತ ಮಹಿಳಾ ವರ್ಗಕ್ಕೆ ಮಾಡುತ್ತಿರುವ ಅವಮಾನ. ಅವರು ಬಳಸುತ್ತಿರುವ ಭಾಷೆಯಿಂದ ನನ್ನ ಮನಸ್ಸಿಗೆ ನೋವಾಗಿದೆ.

ನಮ್ಮನ್ನು 500, 100ಕ್ಕೆ ಮಾರಿಕೊಂಡರೆ ಹೆಂಗ್ರಣ್ಣ?: ದರ್ಶನ್‌
ಸುಮಲತಾ ಪರ ಪ್ರಚಾರ ಮುಂದುವರಿಸಿದ ದರ್ಶನ್‌, ಸೋಮವಾರ ಪಾಂಡವಪುರ ಹಾಗೂ ಭಾರತೀನಗರ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದರು. ಹರಳಹಳ್ಳಿ ಗ್ರಾಮದಲ್ಲಿ ಅಭಿಮಾನಿಯೊಬ್ಬ ಎರಡು ಪಾರಿವಾಳಗಳನ್ನು ನೀಡಿದ. ಅಭಿಮಾನಿಗೆ ಕೃತಜ್ಞತೆ ಸಲ್ಲಿಸಿದ ದರ್ಶನ್‌, ಆ ಪಾರಿವಾಳಗಳನ್ನು ಹಾರಿ ಬಿಟ್ಟು, ತಾವು ಪ್ರಾಣಿ, ಪಕ್ಷಿ ಪ್ರಿಯ ಎಂಬುದನ್ನು ತೋರಿಸಿಕೊಟ್ಟರು. ಜೆಡಿಎಸ್‌ ವಿರುದ್ಧ ಅವರು ನಡೆಸಿದ ವಾಗ್ಧಾಳಿ ಹೀಗಿತ್ತು:

* ಕೆಲವರು ಅಭಿಮಾನಕ್ಕಾಗಿ ಜನ ಸೇರುತ್ತಾರೆ ಎಂದು ಟೀಕೆ ಮಾಡುತ್ತಿದ್ದಾರೆ. ನನ್ನ ಮೇಲೆ ಇಟ್ಟಿರುವ ಅಭಿಮಾನ ಮತಗಳಾಗಿ ಪರಿವರ್ತನೆಯಾಗಿ ಸುಮಲತಾ ಅವರನ್ನು ಗೆಲ್ಲಿಸಬೇಕು.

* ಮೂವರು ಸುಮಲತಾರನ್ನು ಕಣಕ್ಕಿಳಿಸಿ ಗೊಂದಲ ಸೃಷ್ಟಿ ಮಾಡಿರುವವರಿಗೆ ಉತ್ತರ ನೀಡಬೇಕು.

* ವಿರೋಧ ಪಕ್ಷದವರು ಅಮ್ಮನನ್ನು ಸೋಲಿಸಲು ಏನೆಲ್ಲ ತಂತ್ರಗಾರಿಕೆ ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ. ಅವರ ಈ ಕುತಂತ್ರಕ್ಕೆ ಪ್ರತಿತಂತ್ರದಂತೆ ಸುಮಲತಾರನ್ನು ಪ್ರಚಂಡ ಬಹುಮತದಿಂದ ಆರಿಸಿ.

* ಒಂದು ಜೋಡೆತ್ತಿಗೆ 1 ಲಕ್ಷ ರೂ. ನೀಡುತ್ತೇವೆ. ಅದೇ ಒಂದು ಹಾಲು ಕರೆಯುವ ಹಸುವಿಗೆ 40 ರಿಂದ 50 ಸಾವಿರ ನೀಡುತ್ತೇವೆ. ಒಂದು ಬಂಡೂರು ಕುರಿಗೆ ಕನಿಷ್ಟ 10ರಿಂದ 15 ಸಾವಿರ ನೀಡುತ್ತೇವೆ. ಆದರೆ, ಒಂದು ನಾಯಿಗೆ 5 ಸಾವಿರ ನೀಡುತ್ತೇವೆ. ಪ್ರಾಣಿಗೆ ನೀಡುವ ಹಣಕ್ಕಿಂತ ಹೀನಾಯವಾಗಿ ನಮ್ಮ ಜನರು 500 ಅಥವಾ 1 ಸಾವಿರ ರೂ.ಗೆ ಮಾರಿಕೊಂಡರೆ ಹೆಂಗ್ರಣ್ಣ. ಒಂದು ಪ್ರಾಣಿಗಿರುವ ಬೆಲೆ ನಮಗೆ ಇಲ್ವ?.

* ಸುಮಲತಾ ಅವರು ಗೆದ್ದ ನಂತರ ಬಿಜೆಪಿ ಸೇರಲಿದ್ದಾರೆ ಎಂಬುದು ಸುಳ್ಳು ಸುದ್ದಿ.

ಸುಮಲತಾ ಪರ ಪ್ರಚಾರ ಮಾಡೋದು ತಪ್ಪಾ?
ಮಂಡ್ಯದ ವಿವಿಧೆಡೆ ಸೋಮವಾರವೂ ಸುಮಲತಾ ಪರ ಪ್ರಚಾರ ನಡೆಸಿದ ಯಶ್‌, ಸಿಎಂ ಹೇಳಿಕೆಗೆ ಖಡಕ್ಕಾಗಿಯೇ ತಿರುಗೇಟು ನೀಡಿದ್ದಾರೆ.

* ನಾನೆಂದೂ ಜೆಡಿಎಸ್‌ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ. ಸುಮ್‌ಸುಮ್ನೆ ನಾನು ಆಡದಿರುವ ಮಾತುಗಳನ್ನು ಆಡಿರುವುದಾಗಿ ಸುಳ್ಳು ಹೇಳಿದರೆ ನಾನು ಒಪ್ಪಿಕೊಳ್ಳುವುದಿಲ್ಲ.

* ಈ ವಿಚಾರದಲ್ಲಿ ಸಿಎಂಗೆ ಯಾರೋ ಚಾಡಿ ಹೇಳಿ ಮಿಸ್‌ಗೆçಡ್‌ ಮಾಡಿರಬಹುದು. ಅವರು ಈಗ ಬ್ಯುಸಿಯಾಗಿದ್ದು, ಕನ್‌ಫ್ಯೂಸ್‌ ಆಗಿರಬೇಕು. ಬಿಡುವಾದಾಗ ನೋಡಿ ಯೋಚಿಸಲಿ.

* ಜೆಡಿಎಸ್‌ ಪಕ್ಷದಲ್ಲೂ ಸಾಕಷ್ಟು ಜನ ನನ್ನ ಸ್ನೇಹಿತರಿದ್ದಾರೆ. ಆದರೆ, ಸಿನಿಮಾದವರು ಅಂತ ಹಗುರವಾಗಿ ಮಾತನಾಡಿದಾಗ ಮನಸ್ಸಿಗೆ ನೋವಾಗುತ್ತದೆ.

* ಇದು ರೌಡಿ ರಾಜ್ಯವಲ್ಲ. ಇದು ಪ್ರಜಾಪ್ರಭುತ್ವ. ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿ ಮಾತನಾಡಿದರೆ ವಾಪಸ್‌ ಮಾತನಾಡುವ ಶಕ್ತಿ ನಮಗೂ ಇದೆ.

* ಕಾರ್ಯಕರ್ತರು ಸುಮ್ಮನಿದ್ದಾರೆ ಎಂದರೆ ಏನರ್ಥ. ಅವರು ರಾಜ್ಯದ ಸಿಎಂ. ಅವರ ಘನತೆಗೆ ತಕ್ಕಂತೆ ಮಾತನಾಡಬೇಕು. ನಾವು ಸುಮಲತಾ ಪರವಾಗಿ ಪ್ರಚಾರ ಮಾಡೋದೇ ತಪ್ಪಾ.?.

ಯಶ್‌ಗೆ ಏನು ಬೇಕಾದರೂ ಮಾಡಬಹುದಿತ್ತು: ಸಿಎಂ
ಕೆ.ಆರ್‌.ಪೇಟೆ ಸುತ್ತಮುತ್ತ ಬಿರುಸಿನ ಪ್ರಚಾರ ನಡೆಸಿದ ಸಿಎಂ ಕುಮಾರಸ್ವಾಮಿ, ಸುಮಲತಾ ಹಾಗೂ ಯಶ್‌ ವಿರುದ್ಧ ನಡೆಸಿದ ವಾಗ್ಧಾಳಿ ಹೀಗಿತ್ತು.

* ಯಶ್‌ ಎಂಬುವನು ಯಾರ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಯೋಚಿಸಿ ಮಾತನಾಡಬೇಕು. ಜಿಲ್ಲೆಯಲ್ಲಿ ನನ್ನ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ, ಚುನಾವಣೆಯಲ್ಲಿ ಮುಖ್ಯಮಂತ್ರಿಯಾದ ನನಗೆ ತೊಂದರೆಯಾಗುತ್ತದೆ ಎಂದು ಸುಮ್ಮನಾಗಿದ್ದಾರೆ.

* ಚಲನಚಿತ್ರ ವಿತರಕನಾಗಿದ್ದ ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿಯಾಗಿರುವೆ.

* ಈಗ ನಾನು ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿರುವೆ. ಅವರನ್ನು ಕಾಪಾಡುವುದು ನಿಮ್ಮ ಕೈಯಲ್ಲಿದೆ.

* ಜನರು ಎದುರಿಸುತ್ತಿರುವ ಸಮಸ್ಯೆ, ಸಂಕಷ್ಟ ನೋಡಿ ನಾನು ಹಾಗೂ ನಮ್ಮ ತಂದೆ ಕಣ್ಣೀರಿಡುತ್ತಿದ್ದೇವೆ. ನಮ್ಮದು ಕಣ್ಣೀರ ನಾಟಕವಲ್ಲ.

* ನಾನು ಸಿಎಂ ಆದ ದಿನದಿಂದ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ. ನಾನು 120 ಸೀಟು ಗೆದ್ದಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದ್ದೆ. ಜನರ ಕಷ್ಟಗಳಿಗೆಲ್ಲಾ ಪರಿಹಾರ ಸೂಚಿಸುತ್ತಿದ್ದೆ.

* ರಾಜ್‌ಕುಮಾರ್‌ ನಿಧನರಾದಾಗ ನಮ್ಮ ಗಮನಕ್ಕೆ ತರದೆ ಮಾಧ್ಯಮಕ್ಕೆ ಘೋಷಣೆ ಮಾಡಿದರು. ಅಂದು ಯಾವುದೇ ಮುಂಜಾಗ್ರತೆ ಕೈಗೊಳ್ಳಲಾಗಲಿಲ್ಲ. ಹೀಗಾಗಿ, ಅಂತ್ಯಕ್ರಿಯೆ ವೇಳೆ ಗೊಂದಲವಾಯಿತು.

* ಅಂಬರೀಶ್‌ ನಿಧನರಾದಾಗ ನನ್ನ ಮಗ ನನಗೆ ವಿಷಯ ತಿಳಿಸಿದ. ಆಸ್ಪತ್ರೆಗೆ ಹೋದಾಗ ಅಲ್ಲಿ ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದರೆ ಮಗನೊಂದಿಗೆ ಬೇಡ ಎಂದಿದ್ದ ಮಹಾನ್‌ ತಾಯಿ ಇವತ್ತು ಕಣ್ಣೀರು ಹಾಕಿ ಜನರ ಮುಂದೆ ಬಂದಿದ್ದಾರೆ.

* ಅಂದು ಅಂಬರೀಶ್‌ ಮೃತದೇಹವನ್ನು ಮಂಡ್ಯಕ್ಕೆ ತರುವಾಗ ನಾನು ಸಿಎಂ ಆಗಿ ನಿರ್ಧಾರ ತೆಗೆದುಕೊಳ್ಳಲಿಲ್ಲ. ಬದಲಾಗಿ, ಅಂಬರೀಶ್‌ ಅಭಿಮಾನಿಯಾಗಿ ಮಾಡಿದೆ.

ನಿಖಿಲ್‌ ಗೆಲುವಿಗೆ 101 ಈಡುಗಾಯಿ: ಶ್ರೀರಂಗಪಟ್ಟಣದ ಗಂಜಾಂ ಶ್ರೀನಿಮಿಷಾಂಬ ದೇವಾಲಯಕ್ಕೆ ತೆರಳಿದ ಜೆಡಿಎಸ್‌ ಕಾರ್ಯಕರ್ತರು, ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಿಖಿಲ್‌ ಕುಮಾರಸ್ವಾಮಿ ಅಧಿಕ ಮತಗಳಿಂದ ಗೆಲ್ಲಬೇಕು ಎಂದು ಪ್ರಾರ್ಥಿಸಿ ದೇವಾಲಯದ ಮುಂದೆ ನಿಂತು 101 ಈಡುಗಾಯಿ ಹೊಡೆದರು.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.