
ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿ
Team Udayavani, Mar 7, 2019, 1:19 AM IST

ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಪಕ್ಷದ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ, ಜೆಡಿಎಸ್‌ಗೆ ಕ್ಷೇತ್ರ ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮುಂಚೆಯೇ, ಸುಮಲತಾ, ತಮ್ಮ ಅಧಿಕೃತ ನಿರ್ಧಾರ ತಿಳಿಸುವುದಕ್ಕೆ ಮುಂಚೆಯೇ ಅಂಬರೀಶ್ ಅಭಿಮಾನಿಗಳು, ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಪಕ್ಷೇತರ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಅಂಬರೀಶ್, ದರ್ಶನ್ ಅಭಿಮಾನಿಗಳು ಸ್ವಾಗತ ಕೋರುವ ಫ್ಲೆಕ್ಸ್‌ನಲ್ಲಿ, “ಪಕ್ಷೇತರ ಅಭ್ಯರ್ಥಿ ಸುಮಲತಾ’ ಎಂದು ಬಿಂಬಿಸಿದ್ದಾರೆ. ಸುಮಲತಾ ಜೊತೆ ಅಂಬರೀಶ್, ದರ್ಶನ್ ಹಾಗೂ ಅವರ ಅಭಿಮಾನಿಗಳ ಭಾವಚಿತ್ರಗಳು ರಾರಾಜಿಸುತ್ತಿವೆ. ಈ ಮಧ್ಯೆ, ಮಂಡ್ಯ ಸಮೀಪದ ಬೇವಿನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, “ಟಿಕೆಟ್ ಕೊಡೋದಿಲ್ಲ ಎಂದು ಕಾಂಗ್ರೆಸ್‌ನಿಂದ ನನಗೆ ಇನ್ನೂ ಅಧಿಕೃತ ಸಂದೇಶ ಬಂದಿಲ್ಲ. ಪಕ್ಷದ ಅಂತಿಮ ನಿರ್ಧಾರ ಬರುವವರೆಗೂ ಕಾಯುತ್ತೇನೆ. ನಂತರ, 2-3 ದಿನಗಳಲ್ಲಿ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ. ಜನ ನನ್ನ ಪರ ಇ¨ªಾರೆ ಎಂಬ ಭರವಸೆ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಬಂದಿದ್ದೀನಿ ಎಂದರು.
ಟಾಪ್ ನ್ಯೂಸ್
