ಶಾಲಾ ತಾರಸಿಯಲ್ಲೇ ಕೃಷಿ ಮಾಡಿ ಸೈ ಎನಿಸಿದ ವಿದ್ಯಾರ್ಥಿಗಳು!

ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿಗಳು ಅದೆಷ್ಟು ಪೌಷ್ಠಿಕತೆ, ಗುಣಮಟ್ಟದಿಂದ ಕೂಡಿರುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಅನುದಾನಿತ ಭಾರತ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾವೇ ಶಾಲೆಯ ತಾರಸಿಯಲ್ಲಿ ಸಾವಯವ ತರಕಾರಿ ಕೃಷಿ ಮಾಡಿ, ಬೆಳೆದ ಈ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿ ಉಳಿದ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.ಈ ಶಾಲಾ ವಿದ್ಯಾರ್ಥಿಗಳು ಅದು ಯಾವ ರೀತಿಯಲ್ಲಿ ಯಾವೆಲ್ಲ ತರಕಾರಿಗಳನ್ನು ಬೆಳೆಯುತ್ತಿದ್ದಾರೆ ಈ ಬಗೆಗಿನ ಕುತೂಹಲಕಾರಿಯಾದ ವಿವರಗಳನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಿ.
Latest Additions