Calendar

Updated: 10:11 PM IST

Wednesday 13 Aug, 2025

image
Home
translate

UV English

Visit UV Englisharrow_outward

translate
image

UV English

language switch
search

Get App

android

Android

apps

iOS

home_btn

ಮುಖಪುಟ

home_btn

ಸುದ್ದಿ ವಿಭಾಗ

home_btn

ದಿನ ಭವಿಷ್ಯ

home_btn

ಹೊಂಗಿರಣ

home_btn

Search

back buttonBig 40Aug 22, 2022, 9:32 AM ISTAug 22, 2022, 9:32 AM IST

ಗುಜರಾತ್: ಜೀವವೈವಿಧ್ಯದ ಮಹತ್ವ ಸಾರುವ GZRRC ಮೃಗಾಲಯ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಮೃಗಾಲಯವನ್ನು ನಿರ್ವಹಿಸುವಲ್ಲಿ GZRRC ಅನುಭವ ಮತ್ತು ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿತ್ತು.

ಗುಜರಾತ್: ಜೀವವೈವಿಧ್ಯದ ಮಹತ್ವ ಸಾರುವ GZRRC ಮೃಗಾಲಯ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ
sudhi_img1

Team Udayavani

ನವದೆಹಲಿ:ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿ ಭಾಗವಾಗಿರುವ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ (GZRRC) ಮೃಗಾಲಯ ಸ್ಥಾಪನೆ ಮತ್ತು ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಭಾರತದ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಗುಜರಾತ್ ನಲ್ಲಿ ಮೃಗಾಲಯದ ಸ್ಥಾಪನೆಯನ್ನು ಪ್ರಶ್ನಿಸಿ ಕಾರ್ಯಕರ್ತರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು GZRRCಯ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯ ಬಗ್ಗೆ ವಿಚಾರಣೆ ನಡೆಸಲು SIT ತನಿಖೆಗೊಪ್ಪಿಸುವಂತೆ ಮತ್ತು ಭಾರತ ಮತ್ತು ವಿದೇಶದಿಂದ ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸುವಂತೆ ಕೋರಿದ್ದರು. ಅರ್ಜಿಯು ಭಾರತದೊಳಗೆ ಮತ್ತು ಹಡಗಿನಿಂದ GZRRCಗೆ ಪ್ರಾಣಿಗಳನ್ನು ಸ್ಥಳಾಂತರಿಸುವುದನ್ನು ಮತ್ತು ಮೃಗಾಲಯವನ್ನು ನಿರ್ವಹಿಸುವಲ್ಲಿ GZRRC ಅನುಭವ ಮತ್ತು ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿತ್ತು.

GZRRC ತನ್ನ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನ್ಯಾಯಾಲಯವು ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಮತ್ತು GZRRC ವಿರುದ್ಧ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಪೀಠ ವಜಾಗೊಳಿಸಿದೆ.

GZRRC ನ್ಯಾಯಾಲಯದ ಮುಂದೆ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದಿರುವ ಜೂಲಾಜಿಕಲ್ ಪಾರ್ಕ್ ಅನ್ನು ಸ್ಥಾಪಿಸುವುದಾಗಿ ಸ್ಪಷ್ಟಪಡಿಸಿದೆ, ಮೂಲಭೂತವಾಗಿ ಶೈಕ್ಷಣಿಕ ಉದ್ದೇಶಗಳಿಗಾಗಿ. ಅದರ ಉಳಿದ ಸೌಲಭ್ಯಗಳು ಪ್ರಾಣಿಗಳ ಕಲ್ಯಾಣ, ರಕ್ಷಣೆ ಮತ್ತು ಪುನರ್ವಸತಿ ಮತ್ತು ಸಂರಕ್ಷಣೆಯ ಉದ್ದೇಶದಿಂದ ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಕ್ಷಣೆಯ ಅಗತ್ಯವಿರುವ ಪ್ರಾಣಿಗಳ ಕಲ್ಯಾಣಕ್ಕಾಗಿ ರಕ್ಷಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ವಿವರಣೆ ನೀಡಿದೆ.

GZRRC ತನ್ನ ಮೂಲಸೌಕರ್ಯ, ಕಾರ್ಯನಿರ್ವಹಣೆ, ಪಶುವೈದ್ಯರು, ಕ್ಯುರೇಟರ್‌ಗಳು, ಜೀವಶಾಸ್ತ್ರಜ್ಞರು, ಪ್ರಾಣಿಶಾಸ್ತ್ರಜ್ಞರು ಮತ್ತು ಇತರ ತಜ್ಞರು ತೊಡಗಿಸಿಕೊಂಡಿರುವ ಬಗ್ಗೆ GZRRCನ ಸ್ಪಷ್ಟನೆ ಮತ್ತು ಅದು ಕಾನೂನಿನ ಪರಿಭಾಷೆಯಲ್ಲಿ ಕಟ್ಟುನಿಟ್ಟಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

GZRRC ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ನ್ಯಾಯಾಲಯವು ತನ್ನ ಸಹಮತ ವ್ಯಕ್ತಪಡಿಸಿದೆ ಮತ್ತು ಕಾರ್ಯಾಚರಣೆಗಳು, ಪ್ರಾಣಿಗಳನ್ನು ಸ್ಥಳಾಂತರಿಸಲು GZRRCಗೆ ನೀಡಲಾದ ಅನುಮತಿ ಮತ್ತು ಅದರ ಪರಿಣಾಮದ ಚಟುವಟಿಕೆಗಳು ಕಾನೂನು ಮತ್ತು ಅಧಿಕೃತವಾಗಿದೆ ಎಂದು ತಿಳಿಸಿದೆ. ಇದು ಆದಾಯದ ಮುಖ್ಯ ಉದ್ದೇಶವನ್ನು ಹೊಂದಿರುವ ಲಾಭೋದ್ದೇಶವಿಲ್ಲದ ಪ್ರಾಣಿಗಳ ಕಲ್ಯಾಣ ಸಂಸ್ಥೆಯಾಗಿದೆ ಎಂದು ನ್ಯಾಯಾಲಯವು GZRRCಯ ಸಲ್ಲಿಕೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ಇದಲ್ಲದೆ, GZRRC ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ವಾದ ಅಥವಾ ಸಾಕ್ಷ್ಯಾಧಾರ ಸಮರ್ಪಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. GZRRCಯ ಕಾರ್ಯಚಟುವಟಿಕೆಯನ್ನು ಪ್ರಶ್ನಿಸಲು ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಾಲಯವು ಹೇಳಿದೆ.

ಮಾಧ್ಯಮ ಪ್ರಕಟಣೆಯಲ್ಲಿ, GZRRC ಮುಖ್ಯಸ್ಥ  ಧನರಾಜ್ ನತ್ವಾನಿ ಅವರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. “ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಸಂತಸವಾಗಿದೆ. ನಾವು ಪ್ರಾಣಿ ಕಲ್ಯಾಣಕ್ಕಾಗಿ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. GZRRC ಪ್ರಾಣಿಗಳ ಕಲ್ಯಾಣ, ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣೆ ಮತ್ತು ವಿಶ್ವ ದರ್ಜೆಯ ಒದಗಿಸಲು ಬದ್ಧವಾಗಿದೆ ”ಎಂದು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿ ಈ ವಿಭಾಗದಿಂದ

21 days ago

ಗೀತಾರ್ಥ ಚಿಂತನೆ-328:  ಕಾಮ ಮೊದಲ, ಕ್ರೋಧ ಎರಡನೆಯ ಹಂತ

ಗೀತಾರ್ಥ ಚಿಂತನೆ-328: ಕಾಮ ಮೊದಲ, ಕ್ರೋಧ ಎರಡನೆಯ ಹಂತ

22 days ago

ಆನೆ ಕಾಡಿಗಟ್ಟುವ ಕಾರ್ಯಾಚರಣೆಗೆ ಅಡ್ಡಿ; ಪೆರಿಯಶಾಂತಿ ಬಳಿಯ ಅನಧಿಕೃತ ಗೂಡಂಗಡಿ ತೆರವು

ಆನೆ ಕಾಡಿಗಟ್ಟುವ ಕಾರ್ಯಾಚರಣೆಗೆ ಅಡ್ಡಿ; ಪೆರಿಯಶಾಂತಿ ಬಳಿಯ ಅನಧಿಕೃತ ಗೂಡಂಗಡಿ ತೆರವು

22 days ago

Mangaluru: ರೋಶನ್‌ ಸಲ್ಡಾನ್ಹಾ 10 ಕೋ.ರೂ. ವಂಚನೆ ಪ್ರಕರಣದ ತನಿಖೆ ಸಿಐಡಿಗೆ ವರ್ಗ

Mangaluru: ರೋಶನ್‌ ಸಲ್ಡಾನ್ಹಾ 10 ಕೋ.ರೂ. ವಂಚನೆ ಪ್ರಕರಣದ ತನಿಖೆ ಸಿಐಡಿಗೆ ವರ್ಗ

22 days ago

ಗೀತಾರ್ಥ ಚಿಂತನೆ- 327: ಸಂಸ್ಕಾರ ಬಲದಿಂದ ಒಳ್ಳೆಯ-ಕೆಟ್ಟ ಕೆಲಸಗಳಿಗೆ ಪ್ರೇರಣೆ

ಗೀತಾರ್ಥ ಚಿಂತನೆ- 327: ಸಂಸ್ಕಾರ ಬಲದಿಂದ ಒಳ್ಳೆಯ-ಕೆಟ್ಟ ಕೆಲಸಗಳಿಗೆ ಪ್ರೇರಣೆ

22 days ago

ನ್ಯಾಯಾಲಯದಲ್ಲಿ ರಾಜಕೀಯ ಆಟ ಬೇಡ: ಒಂದೇ ದಿನ 4 ಕೇಸಲ್ಲಿ ಸುಪ್ರೀಂಕೋರ್ಟ್‌ ಅಭಿಮತ!

ನ್ಯಾಯಾಲಯದಲ್ಲಿ ರಾಜಕೀಯ ಆಟ ಬೇಡ: ಒಂದೇ ದಿನ 4 ಕೇಸಲ್ಲಿ ಸುಪ್ರೀಂಕೋರ್ಟ್‌ ಅಭಿಮತ!

22 days ago

ಬಂಟ್ವಾಳದ ಪಿಎಸ್‌ಐ ಆತ್ಮಹ*ತ್ಯೆ ಪ್ರಕರಣ: ಮೃತದೇಹ ಹುಟ್ಟೂರಿಗೆ ರವಾನೆ

ಬಂಟ್ವಾಳದ ಪಿಎಸ್‌ಐ ಆತ್ಮಹ*ತ್ಯೆ ಪ್ರಕರಣ: ಮೃತದೇಹ ಹುಟ್ಟೂರಿಗೆ ರವಾನೆ

22 days ago

Bantwal: ನಕಲಿ ದಾಖಲೆ ಮೂಲಕ ಸಾಲವಿರುವ ಕಾರಿನ ದಾಖಲೆ ವರ್ಗಾವಣೆ: ದೂರು

Bantwal: ನಕಲಿ ದಾಖಲೆ ಮೂಲಕ ಸಾಲವಿರುವ ಕಾರಿನ ದಾಖಲೆ ವರ್ಗಾವಣೆ: ದೂರು

22 days ago

ಡಿಸಿಇಟಿ: ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಡಿಸಿಇಟಿ: ಶುಲ್ಕ ಪಾವತಿ ದಿನಾಂಕ ವಿಸ್ತರಣೆ

22 days ago

ಮಡಿಕೇರಿ: ಬೆಳಗಾವಿ ಮೂಲದ ಯುವಕನ ಮೃತದೇಹ ಪತ್ತೆ

ಮಡಿಕೇರಿ: ಬೆಳಗಾವಿ ಮೂಲದ ಯುವಕನ ಮೃತದೇಹ ಪತ್ತೆ

23 days ago

ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನ್ಕರ್‌ ದಿಢೀರ್‌ ರಾಜೀನಾಮೆ!

ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನ್ಕರ್‌ ದಿಢೀರ್‌ ರಾಜೀನಾಮೆ!