Team Udayavani
ಮೊರಾದಾಬಾದ್(ಉತ್ತರಪ್ರದೇಶ): ವ್ಯಕ್ತಿಯೊಬ್ಬ ವಿಷಕಾರಿ ಹಾವಿಗೆ ಮುತ್ತಿಕ್ಕಲು ದುಸ್ಸಾಹಸ ತೋರಿದ್ದು, ಕಡಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಮ್ರೋಹಾ ಜಿಲ್ಲೆಯ ಹೈಬತ್‌ಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ರೀಲ್ ಮಾಡುವ ವೇಳೆ 50 ವರ್ಷದ ರೈತ ಜಿತೇಂದ್ರ ಕುಮಾರ್ ಹಾವನ್ನು ಹಾವನ್ನುಕುತ್ತಿಗೆಗೆ ಸುತ್ತಿಕೊಂಡು ಚುಂಬಿಸಲು ಪ್ರಯತ್ನಿಸುತ್ತಿದ್ದಾಗ ನಾಲಿಗೆಗೆ ಕಚ್ಚಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಆನ್‌ಲೈನ್ ವೀಕ್ಷಕರ ಮೆಚ್ಚಿಸುವ ಆಶಯದೊಂದಿಗೆ, ಕುಮಾರ್ ಹಾವಿನೊಂದಿಗೆ ಪೋಸ್ ನೀಡಿದ್ದು, ಈ ವೇಳೆ ಹಲವಾರ ಸಾಹಸವನ್ನು ಚಿತ್ರೀಕರಿಸಿದ್ದಾರೆ. ಸ್ಥಳೀಯರ ಪ್ರಕಾರ, ಕುಮಾರ್ ಮದ್ಯದ ಅಮಲಿನಲ್ಲಿದ್ದು, ಧೂಮಪಾನವನ್ನೂ ಮಾಡುತ್ತಿದ್ದರು.
ಹಾವು ಕಚ್ಚಿದ ನಂತರ ಕುಮಾರ್ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಯ ನಂತರ ಮೊರಾದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಿತಿ ಇನ್ನೂ ಗಂಭೀರವಾಗಿದೆ.
ये कला दिखा रहे थे तभी सांप ने डस लिया. अब ये जिंदगी और मौत के बीच ICU में जंग लड़ रहे हैं. ये अपने गांव में अक्सर इस तरह की कलाकारी किया करते थे. लेकिन इस बार इन्हें सांप को Kiss करना महंगा पड़ गया. घटना यूपी अमरोहा की है. pic.twitter.com/15ZMYyz3c9
— Priya singh (@priyarajputlive) June 14, 2025
20 hours ago
Yesterday
5 days ago
6 days ago
6 days ago
7 days ago
8 days ago
8 days ago
9 days ago
10 days ago