ವಕ್ರತುಂಡ ಮಹಾಕಾಯ; ಕರಾವಳಿಯ ಅತೀ ಹಳೆಯ ಆಯ್ದ ಸಾರ್ವಜನಿಕ ಗಣೇಶೋತ್ಸವಗಳ ವಿವರ ಇಲ್ಲಿದೆ


Team Udayavani, Aug 31, 2022, 6:35 AM IST

ವಕ್ರತುಂಡ ಮಹಾಕಾಯ; ಕರಾವಳಿಯ ಅತೀ ಹಳೆಯ ಆಯ್ದ ಸಾರ್ವಜನಿಕ ಗಣೇಶೋತ್ಸವಗಳ ವಿವರ ಇಲ್ಲಿದೆ

ಕರಾವಳಿಯಾದ್ಯಂತ ಸಾರ್ವಜನಿಕ ಗಣೇಶೋತ್ಸವವನ್ನು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಪೈಕಿ ತಾಲೂಕುವಾರು ಅತೀ ಹಳೆಯ ಆಯ್ದ ಗಣೇಶೋತ್ಸವಗಳ ಲಭ್ಯ ವಿವರ ಇಲ್ಲಿದೆ.

ಕಡಿಯಾಳಿ/ಉಡುಪಿ-1967
ಉಡುಪಿ: ಜಿಲ್ಲೆಯ ಅತೀ ಪುರಾತನ ಗಣೇಶೋತ್ಸವವೇ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ. ಇಲ್ಲಿ ಜಿಲ್ಲೆಯ ಅತೀ ಎತ್ತರದ ಗಣೇಶನ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಉಡುಪಿಯ ಭಾರತ್‌ ಪ್ರಸ್‌ನ ಮೇಲೆ 1967ರಲ್ಲಿ ಸಮಾನ ಮನಸ್ಕರಾದ ತೋನ್ಸೆ ದೇವದಾಸ ಪೈ, ಗುಜ್ಜಾಡಿ ನರಸಿಂಹ ನಾಯಕ್‌, ಸೋಮಶೇಖರ ಭಟ್‌, ಪಿ. ವಸಂತ ಭಟ್‌ ಈ ಗಣೇಶೋತ್ಸವನ್ನು ಆರಂಭಿಸಿದರು. ಪಿ. ವಸಂತ ಭಟ್‌ ಅಂದಿನಿಂದ ಇಂದಿನವರೆಗೂ ಸಮಿತಿಯಲ್ಲಿದ್ದು, ಪ್ರಸ್ತುತ ಅಧ್ಯಕ್ಷರಾಗಿ ದ್ದಾ ರೆ. ಸಂಘ ಪರಿವಾರದಿಂದ ಈ ಗಣೇಶೋತ್ಸವನ್ನು ನಡೆಸ ಲಾಗುತ್ತದೆ. ಭಾರತ್‌ ಪ್ರಸ್‌ನಲ್ಲಿ ಆರಂಭವಾದ ಗಣೇಶೋತ್ಸವ ಕಲ್ಪನಾ ಟಾಕೀಸ್‌, ನಾರಾಯಣ ಗುರು ಮಂದಿರ, ಗೀತಾಂಜಲಿ ಟಾಕೀಸ್‌, ತಾಲೂಕು ಕಚೇರಿ, ಶಾರದಾ ಮಂಟಪವಾಗಿ ಕಳೆದ 38 ವರ್ಷದಿಂದ ಕಡಿಯಾಳಿಯ ಮಹಿಷಮರ್ದಿನಿ ದೇವಸ್ಥಾನದ ಆವರಣದಲ್ಲಿ ಆಚರಿಸಲಾಗುತ್ತಿದೆ.

ಬಾರಕೂರು/ಬ್ರಹ್ಮಾವರ- 1968
ಬ್ರಹ್ಮಾವರ: ಬಾರಕೂರು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ 55ನೇ ವರ್ಷದ ಶ್ರೀ ಗಣೇಶೋತ್ಸವ ಸಂಭ್ರಮ. ಬ್ರಹ್ಮಾವರ ತಾಲೂಕಿನ ಹಿರಿಯ ಗಣಪನೆನ್ನುವ ಗೌರವ. ಮಂಗಳೂರು ಶ್ರೀ ಗಣೇಶ್‌ ಬೀಡಿ ವರ್ಕ್ಸ್ ಮೈಸೂರು ಇವರ ಸಹಕಾರದಿಂದ 1968ರಲ್ಲಿ ಪ್ರಾರಂಭಗೊಂಡಿತ್ತು. ಸಂಘಟನೆ, ಧಾರ್ಮಿಕ ಪ್ರಜ್ಞೆ ಮುಖ್ಯ ಉದ್ದೇಶವಾಗಿತ್ತು. 2012ರಲ್ಲಿ ಶಾಶ್ವತ ಶ್ರೀ ಗಣೇಶ ಗುಡಿ ನಿರ್ಮಾಣಗೊಂಡಿತು. 2016ರಲ್ಲಿ 50ನೇ ವರ್ಷದ ಸವಿನೆನಪಿಗಾಗಿ ಶ್ರೀ ಗಣೇಶ್‌ ಬೀಡಿ ವರ್ಕ್ಸ್ನ ಗೋವಿಂದ ರಾವ್‌ ಅವರ ಸ್ಮರಣಾರ್ಥ ಶ್ರೀ ಪಟ್ಟಾಭಿರಾಮಚಂದ್ರ ಸಭಾಭವನ ನಿರ್ಮಾಣಗೊಂಡಿತು. 2017ರ ಸುವರ್ಣ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಶುಭ ಕೋರಿದ್ದರು. ಎನ್‌. ನಾಗೇಶ್‌ ಕಾಮತ್‌ ಸ್ಥಾಪಕ ಅಧ್ಯಕ್ಷರಾಗಿದ್ದು, ಎಂ. ವೆಂಕಟರಮಣ ಭಂಡಾರ್‌ಕಾರ್‌ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಉಪ್ಪುಂದ/ಬೈಂದೂರು- 1974
ಉಪ್ಪುಂದ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಉಪ್ಪುಂದ ಇದರ ವತಿಯಿಂದ 49ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯು ತ್ತದೆ. 1974ರಲ್ಲಿ ಸಮಿತಿ ಸ್ಥಾಪನೆಯಾಗಿದ್ದು ಮಹಾಬಲೇಶ್ವರ ಮಯ್ಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸಂದೇಶ ಭಟ್‌ ಅಧ್ಯಕ್ಷರಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸ್ಥಳೀಯರನ್ನು ನಾಟಕ, ಭಜನೆ, ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ತೊಡಗಿಸುವಂತೆ ಮಾಡಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಶಾಲೆಗಳ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.

ಸಾಣೂರು /ಕಾರ್ಕಳ-1990
ಕಾರ್ಕಳ: ಸಾಣೂರಿನ ಸಾರ್ವಜನಿಕ ಗಣೇಶೋತ್ಸವವು ಸಾಣೂರು ಸಮಾಜ ಮಂದಿರ ವಠಾರದಲ್ಲಿ 1990ರಲ್ಲಿ ಪ್ರಾರಂಭ ಗೊಂಡಿತು. ಪುರುಷೋತ್ತಮ್‌ ಗೌಡ ಸ್ಥಾಪಕಾಧ್ಯಕ್ಷರು. ಪ್ರಸ್ತುತ ವಿಶ್ವನಾಥ್‌ ಶೆಟ್ಟಿ ಭಾಮಿನಿ ಏರ್ನಡ್ಕ ಗುತ್ತು ಸಮಿತಿಯ ಅಧ್ಯಕ್ಷರು. 1990ರಿಂದ 1995ರ ವರೆಗೆ ನರಸಿಂಹ ಕಾಮತ್‌ ವಿಗ್ರಹ ರಚಿಸುತ್ತಿದ್ದರು. ಅನಂತರದ ವರ್ಷಗಳಲ್ಲಿ ಸುಭಾಸ್‌ ಶೆಣೈ, ಪ್ರಸ್ತುತ ಸಂತೋಷ ಆಚಾರ್ಯ ವಿಗ್ರಹವನ್ನು ರಚಿಸುತ್ತಿದ್ದಾರೆ.

ರಾಮಕ್ಷತ್ರಿಯ ಸಂಘ/ಕುಂದಾಪುರ-1965
ಕುಂದಾಪುರ: ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಮಕ್ಷತ್ರಿಯರ ಸಂಘ ಹಾಗೂ ರಾಮಕ್ಷತ್ರಿಯ ಯುವಕ ಮಂಡಳಿ ವತಿಯಿಂದ 57ನೇ ವರ್ಷದ ಗಣೇಶೋತ್ಸವ ವನ್ನು ಆಚರಿಸಲಾಗುತ್ತಿದೆ. ಕುಂದಾಪುರ ಭಾಗದ ಹಿರಿಯ ಆಚರಣೆಯಾಗಿದೆ. 1965ರಲ್ಲಿ ಡಿ.ಕೆ. ರತ್ನಾಕರ್‌ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಪ್ರಸ್ತುತ ಶ್ರೀನಿವಾಸ್‌ ಅಧ್ಯಕ್ಷರಾಗಿದ್ದಾರೆ. 50ನೇ ವರ್ಷಾಚರಣೆ ವೇಳೆ ರಾಧಾಕೃಷ್ಣ ಅಧ್ಯಕ್ಷರಾಗಿದ್ದರು.

ಬೆಳ್ಳೆ-ಕಟ್ಟಿಂಗೇರಿ/ಕಾಪು-1979
ಶಿರ್ವ: ಮೂಡುಬೆಳ್ಳೆಯ ಹಿರಿಯರಾದ ಮುಕುಂದ ಪುರಾಣಿಕ್‌, ಡಾ| ಎಚ್‌.ಬಿ. ಶೆಟ್ಟಿ, ಡಾ| ಕೆ.ಆರ್‌. ಕೊರಡ್ಕಲ್‌, ಪಂಡಿತ್‌ ಎಸ್‌.ಕೆ. ಸುವರ್ಣ, ಪಿ.ಡಿ. ಕಾಮತ್‌, ನಾರಾಯಣ ಪ್ರಭು ಸೇರಿ 1979ರಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರು. ಇದೇ ಸಮಿತಿ ಮುಂದೆ ಸರ್ವೋದಯ ನ್ಯಾಸ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ನಿರ್ಮಿಸಿದ ಗೀತಾ ಮಂದಿರದಲ್ಲಿ ನಿರಂತರವಾಗಿ ಸಾರ್ವಜನಿಕ ಗಣೇಶೋತ್ಸವ ನಡೆದುಕೊಂಡು ಬರುತ್ತಿದೆ. ಪ್ರಸ್ತುತ 43ನೇ ವರ್ಷದ ಗಣೇಶೋತ್ಸವ. ಈ ವರ್ಷ ಅಧ್ಯಕ್ಷರಾಗಿ ಸಂತೋಷ್‌ ಕುಮಾರ್‌ ಮೂಡುಬೆಳ್ಳೆ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಸರಗೋಡು-1956
ಕಾಸರಗೋಡು: 1956ರಲ್ಲಿ ಹಿರಿಯರಲ್ಲಿ ಕೆಲವರು ಸೇರಿ ಸಾರ್ವಜನಿಕ ನೆಲೆಯಲ್ಲಿ ಶ್ರೀ ಗಣೇಶೋತ್ಸವವನ್ನು ಆಚರಿಸಲು ಬ್ಯಾಂಕ್‌ ರಸ್ತೆಯ ವಿವೇಕಾನಂದ ವಾಚನಾಲಯದಲ್ಲಿ ಸಭೆ ಸೇರಿ ನಿರ್ಧಾರ ತಳೆದರು. ಅಂದಿನ ದಿನಗಳಲ್ಲಿ 3 ದಿನ, ಆ ಬಳಿಕ 5 ದಿನಗಳಿಗೆ ವಿಸ್ತರಿಸಲಾಯಿತು. ಸ್ಥಳೀಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿ ಮೇರೆಗೆ ತೃತೀಯ ದೇಗುಲದ ಪ್ರಾಂಗಣದಲ್ಲಿ ಆಚರಿಸುವ ಸಂಪ್ರದಾಯ ಆರಂಭವಾಗಿ ಈಗ 67 ನೇ ವರ್ಷದ ಸಂಭ್ರಮದಲ್ಲಿದೆ.

ಹೊಸ ಮಾರಿಗುಡಿ/ಕಾಪು- 1979
ಕಾಪು: 1979ರಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಗಣೇಶೋತ್ಸವ ಸಮಿತಿಯು ತಾಲೂಕಿನ ಹಿರಿಯ ಸಮಿತಿ. ಭಾಸ್ಕರ ರಾವ್‌, ರತ್ನಾಕರ ಶೆಣೈ, ಗೋವಿಂದ್ರಾಯ ಪ್ರಭು, ಗೋಪಿ ಕಾಂತ್‌ ಬೇಕಲ್‌, ಮಾಧವ ಆರ್‌.ಪಾಲನ್‌ಗಣೇಶೋತ್ಸವವನ್ನು ಪ್ರಾರಂಭಿಸಿದ್ದರು. ಪ್ರಸ್ತುತ 43ನೇ ವರ್ಷಾಚರಣೆ. ಕಾರ್ಯ ಕ್ರಮವು 28 ವರ್ಷಗಳಿಂದ ಹೊಸ ಮಾರಿಗುಡಿ ದೇವಸ್ಥಾನದ ಬಳಿಯ ಕೈಲಾಸ ಮಂಟಪದಲ್ಲಿ ನಡೆಯುತ್ತಿದೆ. ಭಾಸ್ಕರ್‌ ರಾವ್‌ ಸ್ಥಾಪಕಾಧ್ಯಕ್ಷರು. ಪ್ರಸ್ತುತ ಎಂ. ಶಶಿಧರ ಶೆಟ್ಟಿ ಗೌರವಾಧ್ಯಕ್ಷರು, ಮಾಧವ ಆರ್‌. ಪಾಲನ್‌ಅಧ್ಯಕ್ಷರು.

ರಾಮಮಂದಿರ/ಹೆಬ್ರಿ-1975
ಹೆಬ್ರಿ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೆಬ್ರಿ ಇದರ ಆಶ್ರಯದಲ್ಲಿ 1975ರಲ್ಲಿ ಹೆಬ್ರಿಯ ರಾಮ ಮಂದಿರದಲ್ಲಿ ಸ್ಥಾಪಕ ಅಧ್ಯಕ್ಷ ಅಮರನಾಥ್‌ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಾರ್ವಜನಿಕ ಗಣೇಶೊತ್ಸವಕ್ಕೆ ಈಗ 47ವರ್ಷದ ಸಂಭ್ರಮ. ಪ್ರಸ್ತುತ ಜನಾರ್ದನ್‌ ಅಧ್ಯಕ್ಷರಾಗಿದ್ದಾರೆ.

ಕಿಲ್ಲೆ ಮೈದಾನ /ಪುತ್ತೂರು-1957
ಪುತ್ತೂರು: ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ 7 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಗಣೇಶೋತ್ಸವಕ್ಕೆ ಈ ಬಾರಿ 65ನೇ ವರ್ಷ. 1957ರಲ್ಲಿ ಹನುಮಂತ ಮಲ್ಯರ ನೇತೃತ್ವದಲ್ಲಿ ಆರಂಭಗೊಂಡಿತ್ತು. ವಿಗ್ರಹವನ್ನು ವೈಭವದ ಶೋಭಾಯಾತ್ರಾ ಮೆರವಣಿಗೆಯೊಂದಿಗೆ ಮಂಜಲ್ಪಡು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇಲ್ಲಿನ ಶ್ರೀ ಮಹಾಗಣೇಶೋತ್ಸವದ ಸಂದರ್ಭದಲ್ಲಿ ನಡೆಯುವ ಅನ್ನದಾನ ಅತ್ಯಂತ ವೈಶಿಷ್ಟéವನ್ನು ಪಡೆದಿದೆ. ಮತ್ತೂಂದು ವಿಶೇಷತೆ ಶೋಭಾಯಾತ್ರೆಯ ದಿನ ನಡೆಯುವ ದೈವದ ನೇಮ. ಕಿಲ್ಲೆ ಮೈದಾನದ ಸ್ಥಳಕ್ಕೆ ಸಂಬಂಧಿಸಿದ ರಕ್ತೇಶ್ವರಿ ಮತ್ತು ಕಾರೆಕ್ಕಾಡು ಪಂಜುರ್ಲಿ ದೈವಗಳಿಗೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಮೊದಲು ಮೂಲ ಸ್ಥಾನದಲ್ಲಿ ಅಗೆಲು ಸಮರ್ಪಿಸಿ ಬಳಿಕ ಮೈದಾನದ ಮುಂದೆ ಕಟ್ಟುಕಟ್ಟಳೆಗಳ ನೇಮ ನಡೆಯುತ್ತದೆ. ದೈವಗಳ ನೇತೃತ್ವದಲ್ಲಿ ಮೆರವಣಿಗೆ ನಡೆದು ವಿಗ್ರಹ ವಿಸರ್ಜನೆ ಇಲ್ಲಿನ ಸಂಪ್ರದಾಯ.

ಕಂಬಳಬೆಟ್ಟು /ವಿಟ್ಲ- 1971
ವಿಟ್ಲ: ಕಂಬಳಬೆಟ್ಟು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯು 50 ವರ್ಷಗಳಿಂದ ಗಣೇಶೋತ್ಸವವನ್ನು ಕಂಬಳಬೆಟ್ಟು ಧರ್ಮನಗರ ಶ್ರೀ ದುರ್ಗಾ ಮಂದಿರದಲ್ಲಿ ನಡೆಸಿಕೊಂಡು ಬರುತ್ತಿದೆ. ಈ ಭಾಗದ ಹಿಂದೂ ಮನೆಯವರು ಗಣೇಶ ಚತುರ್ಥಿಯಂದು ತಮ್ಮ ತಮ್ಮ ಮನೆಗಳಲ್ಲಿ ನೈವೇದ್ಯ ತಯಾರಿಸಿ ಸಾಮೂಹಿಕವಾಗಿ ಶ್ರೀ ದೇವರಿಗೆ ಅರ್ಪಿಸಿ ಅದನ್ನು ಮತ್ತೆ ಪ್ರಸಾದ ರೂಪದಲ್ಲಿ ಎಲ್ಲರೂ ಸ್ವೀಕರಿಸುವುದು 25 ವರ್ಷಗಳಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ದಿ| ಕೆ.ವಿ. ತಿರುಮಲೇಶ್ವರ ಭಟ್ಟರು ಪ್ರಥಮ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ರಾಘವ ಪೂಜಾರಿ ಮಂಜಪಾಲು ಅಧ್ಯಕ್ಷರಾಗಿದ್ದಾರೆ.

ಕಿನ್ನಿಗೋಳಿ/ಮೂಲ್ಕಿ- 1974
ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯಲ್ಲಿ 47 ವರ್ಷಗಳ ಹಿಂದೆ ಗಣಪತಿ ಹಬ್ಬ ಆರಂಭವಾಯಿತು. ಗಣಪತಿ ದೇವರಿಗೆ ರಂಗ ಪೂಜೆ, ವಿಶೇಷ ಸೇವೆ ಜತೆಗೆ 108 ಕಾಯಿಯ ಗಣಹೋಮ ಇತ್ಯಾದಿಗಳು ನಡೆಯುತ್ತವೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದೆ. ಈಗ ಸುರೇಶ್‌ ಪದ್ಮನೂರು ಸಮಿತಿಯ ಅಧ್ಯಕ್ಷರು. ಕಟೀಲು ದೇವಸ್ಥಾನದ ನಂದಿನಿ ನದಿಯ ತನಕ ಸಾಗುವ ವೈಭವದ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಸೇರಿಕೊಳ್ಳುತ್ತಾರೆ.

ಬೆಳ್ತಂಗಡಿ ಪೇಟೆ/ಬೆಳ್ತಂಗಡಿ- 1961
ಬೆಳ್ತಂಗಡಿ: ತಾಲೂಕಿನ ಅತೀ ಹಿರಿಯ 61ನೇ ವರ್ಷದ ಸಾರ್ವಜನಿಕ ಗಣೇಶೋತ್ಸವು ಬೆಳ್ತಂಗಡಿಯಲ್ಲಿ ಆಚರಿಸಲ್ಪಡುತ್ತಿದೆ. 1961ರಲ್ಲಿ ಬೆಳ್ತಂಗಡಿ ಪೇಟೆಯ ಶಾಂತಿ ನಿವಾಸ ಹೊಟೇಲ್‌ನಲ್ಲಿ ಆರಂಭ ಗೊಂಡಿತ್ತು. ಬಳಿಕ ಸಾರ್ವಜನಿಕವಾಗಿ ಪೂಜಿಸಲ್ಪಟ್ಟಿತು. ಕ್ರಮೇಣ ಮಹಿಳಾ ಮಂಡಲದಲ್ಲಿ ನಡೆದು ಮುಂದಕ್ಕೆ ಬೆಳ್ತಂಗಡಿ ಕಲಾಭವನದಲ್ಲಿ ಪೂಜಿಸಲ್ಪ ಟ್ಟಿತು. ಆರಂಭದಲ್ಲಿ ಸ್ಥಾಪಕಾಧ್ಯಕ್ಷರಾಗಿ ರಾಮ ನಾಯ್ಕ, ಬಳಿಕ ಮುರಳೀಧರ್‌ ರಾವ್‌ ಸುಧೀರ್ಘ‌ ಅಧ್ಯಕ್ಷತೆಯಲ್ಲಿ ನಡೆದು ಬಂದಿದೆ. ಪ್ರಸಕ್ತ ಕನ್ನಾಜೆ ಚಂದ್ರಶೇಖರ್‌ ಆಚಾರ್ಯ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್‌ ಪೂಂಜ ಗೌರವ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.

ಸಂಘನಿಕೇತನ/ಮಂಗಳೂರು- 1948
ಮಂಗಳೂರು: “ಸಂಘದ ಗಣಪತಿ’ ಎಂದೇ ಜನಜನಿತವಾಗಿರುವ ಮಂಗಳೂರಿನ ಸಂಘನಿಕೇತನದ ಕೇಶವ ಸ್ಮತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ ಅಮೃತ ಮಹೋತ್ಸವದ ಸಂಭ್ರಮ. 1948ರಲ್ಲಿ ಬಜಿಲಕೇರಿಯಲ್ಲಿ ಮಿಜಾರು ಗೋವಿಂದ ಪೈ ಅವರಿಗೆ ಸೇರಿದ ಸ್ಥಳದಲ್ಲಿ ಆರಂಭಗೊಂಡ ಸಂಘದ ಗಣೇಶೋತ್ಸವ ನಾಲ್ಕು ವರ್ಷಗಳ ಅನಂತರ ಪ್ರತಾಪನಗರದಲ್ಲಿ ಆರಂಭವಾದ ಸಂಘನಿಕೇತನದಲ್ಲಿ ಮುಂದುವರಿಯಿತು. ಇಲ್ಲಿನ ಗಣೇಶೋತ್ಸವಕ್ಕೆಂದೇ ಭಕ್ತರು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಕೊಂಚಾಡಿ ತಾರಾನಾಥ ಶೆಣೈ ಅವರು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಪ್ರಸ್ತುತ ಕೆ. ಪ್ರವೀಣ್‌ ಕುಮಾರ್‌ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸಮಾಜ ಮಂದಿರ/ಮೂಡುಬಿದಿರೆ- 1963
ಸಮಾಜಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಡೆಸುವ ಉತ್ಸವ “ಮೂಡುಬಿದಿರೆ ಗಣೇಶೋತ್ಸವ’ ಎಂದೇ ಪ್ರಸಿದ್ಧ.ಇಂದಿಗೂ ವೈದ್ಯಕೀಯ ಸೇವೆಯಲ್ಲಿ ನಿರತರಾದ 90ರ ಹರೆಯದ ಡಾ| ಪದ್ಮನಾಭ ಉಡುಪರು ಸಂಸ್ಥಾಪಕ ಅಧ್ಯಕ್ಷರು. ಕಾರ್ಯದರ್ಶಿಯಾಗಿ ಸಹಕಾರಿ ಕಾಳಿಂಗ ಪೈ ಸುದೀರ್ಘ‌ ಕಾಲ ಸೇವೆ ಸಲ್ಲಿಸಿದ್ದರೆ, 37 ವರ್ಷಗಳಿಂದ ಉದ್ಯಮಿ ನಾರಾಯಣ ಪಿ.ಎಂ. ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳ್ಳಿ ಹಬ್ಬದ ಬಳಿಕ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರು 2019ರವರೆಗೂ ಅಧ್ಯಕ್ಷರಾಗಿದ್ದು, ಪ್ರಸ್ತುತ ಉದ್ಯಮಿ ಕೆ. ಶ್ರೀಪತಿ ಭಟ್‌ ಅಧ್ಯಕ್ಷರು. ಈಗ ಸಮಿತಿ “ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್‌ ಎಂದು ಆಗಿದ್ದು, ಸಾಮಾಜಿಕ ಸೇವೆಯಲ್ಲೂ ತೊಡಗಿಕೊಂಡಿದೆ. ಬೋರ್ಡ್‌ ಶಾಲೆ ಎಂದೇ ಹೆಸರಾದ ಈಗಿನ ಮೈನ್‌ ಶಾಲೆಯಲ್ಲಿ
ಗಣೇಶೋತ್ಸವ ಆರಂಭಗೊಂಡಿತ್ತು.

ಕೋಟೆಕಾರು/ಉಳ್ಳಾಲ-1970
ಉಳ್ಳಾಲ: ಕೋಟೆಕಾರಿನಲ್ಲಿ 52 ವರ್ಷಗಳ ಹಿಂದೆ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವ. ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನದ ವಠಾರದಲ್ಲಿ ಆರಂಭಗೊಂಡ ಸಮಾಜಸೇವಾ ಸಂಘ ಬಳಿಕ ಕೋಟೆಕಾರು ಶಾಲೆಯಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ತುರ್ತು ಪರಿಸ್ಥಿತಿ ಸಂದರ್ಭ ಕೆಲ ಕಾರಣಗಳಿಂದ ಸ್ಥಳೀಯ ಶ್ರೀ ಕ್ಷೇತ್ರ ಶೃಂಗೇರಿಯ ಕೋಟೆಕಾರಿನಲ್ಲಿರುವ ಶಂಕರಮಠಕ್ಕೆ ಸ್ಥಳಾಂತರಗೊಂಡಿತು.ಈಗ ಕೋಟೆಕಾರು ಬೀರಿಯಲ್ಲಿ ಶ್ರೀ ಸಾರ್ವಜನಿಕ ಗಣೇಶ ಸೇವಾ ಸಮಿತಿ ಆಚರಣೆ ಮುಂದುವರಿಸಿದೆ.

ದೇವತಾ ಆರಾಧನಾ ಸಮಿತಿ/ಸುಳ್ಯ- 1968
ಸುಳ್ಯ: ಸುಳ್ಯದ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾ ರಾಧನಾ ಸಮಿತಿ ಸುಳ್ಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ 54ನೇ ವರ್ಷದ ಸಂಭ್ರಮದಲ್ಲಿದೆ. 1968ರಲ್ಲಿ ಇಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆರಂಭಿಸ ಲಾಗಿತ್ತು. ಸಮಾಜ, ಸಂಘಟನೆ ಮತ್ತು ಧರ್ಮ ಜಾಗೃತಿಗಾಗಿ ಎಂಬ ಆಶಯದೊಂದಿಗೆ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇವಲ ಮನೋರಂಜನೆಗೆ ಮೀಸಲಿಡದೆ ಸಂಸ್ಕೃತಿಯನ್ನು, ಪ್ರತಿಭೆಗಳನ್ನು ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಮೂರ್ತಿಯನ್ನು ಭವ್ಯ ಶೋಭಾಯಾತ್ರೆಯೊಂದಿಗೆ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳಿಸಲಾ ಗುತ್ತದೆ. ಪ್ರಸ್ತುತ ಕೆ. ಸೋಮನಾಥ ದೇವತಾರಾಧನಾ ಸಮಿತಿ ಅಧ್ಯಕ್ಷರು.

ಗಣೇಶೋತ್ಸವ ಸಮಿತಿ/ಕಡಬ- 1974
ಕಡಬ: 55 ವರ್ಷಗಳ ಹಿಂದೆ ಕಡಬದ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಊರ ಹವ್ಯಾಸಿ ಯಕ್ಷಗಾನ ಕಲಾವಿದರು ಸೇರಿಕೊಂಡು ನಡೆಸುತ್ತಿದ್ದ ಶ್ರೀಗಣೇಶ ಯಕ್ಷಗಾನ ಮಂಡಳಿಯ ಸದಸ್ಯರ ಉತ್ಸಾಹದಿಂದಾಗಿ ಕಡಬದಲ್ಲಿ ಆರಂಭಗೊಂಡ ಚೌತಿ ಹಬ್ಬವು 1974ರಲ್ಲಿ ಶ್ರೀ ಗಣೇಶ ಯಕ್ಷಗಾನ ಮಂಡಳಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುತುವರ್ಜಿಯ ಮೂಲಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಚನೆಯೊಂದಿಗೆ ವ್ಯವಸ್ಥಿತ ಗಣೇಶೋತ್ಸವವಾಗಿ ಮುನ್ನೆಲೆಗೆ ಬಂತು. ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಪಾಂಡುರಂಗ ಪೈ ಇದ್ದರು. ಈಗ ಸೀತಾರಾಮ ಗೌಡ ಎ. ಸಮಿತಿಯ ಅಧ್ಯಕ್ಷರು. 3 ದಿನಗಳ ಕಾಲ ನಡೆಯುವ ಉತ್ಸವವು ಗಣಪನ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕೊಂಡೊಯ್ದು ಹೊಸಮಠದ ಗುಂಡ್ಯ ಹೊಳೆಯಲ್ಲಿ ಜಲಸ್ತಂಭನಗೊಳಿಸುವ ಮೂಲಕ ಸಮಾಪನಗೊಳ್ಳುತ್ತದೆ.

ಬಪ್ಪನಾಡು /ಮೂಲ್ಕಿ- 1975
ಮೂಲ್ಕಿ: 1975ರಲ್ಲಿ ದಿ| ಬೋಳ ಸುರೇಂದ್ರ ಕಾಮತ್‌ ಮೂಲಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ಥಾಪನೆಯಾಗಿ, ಅವರೇ ಸ್ಥಾಪಕ ಅಧ್ಯಕ್ಷ ರಾಗಿ ವಿಜೃಂಭಣೆಯಿಂದ ಗಣೇಶೋತ್ಸವ ಆರಂಭವಾಯಿತು. ಈ ಗಣಪನಿಗೆ ಈ ವರ್ಷ 48ರ ಸಂಭ್ರಮ. ಇಲ್ಲಿ ಜನ ಸೇರಲು ಹಾಗೂ ಸಮಾರಂಭ ನಡೆಸಲು ಸ್ಥಳದ ಅಭಾವ ಕಂಡಾಗ ಆಗ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತೆ ಮೊಕೇ¤ಸರರಾಗಿದ್ದ ಡಾ| ಹರಿಕೃಷ್ಣ ಪುನರೂರು ಅವರ ಮಾರ್ಗದರ್ಶನದಲ್ಲಿ ದೇಗುಲದ ಆಡಳಿತೆಯ ಸಹಕಾರದೊಂದಿಗೆ ದೇಗುಲದ ವಠಾರದಲ್ಲಿ ಈ ಉತ್ಸವ ಆರಂಭವಾಗಿತ್ತು. ಸಮಿತಿಯ ಅಧ್ಯಕ್ಷರಾಗಿ ಎಂ. ಚಂದ್ರಶೇಖರ ಸುವರ್ಣ ಕಾರ್ಯನಿರ್ವಹಿಸುತ್ತಿದ್ದು ಈ ಗಣಪತಿ ಉತ್ಸವ ಈಗ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿದೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.