
ನಟ ಶಾರುಖ್ ಖಾನ್ ಐಶಾರಾಮಿ ಬಂಗಲೆ ಪ್ರವೇಶಿಸಲು ಯತ್ನ; ಇಬ್ಬರು ಯುವಕರ ಬಂಧನ
ಬಚ್ಚನ್ ಅವರ ಭದ್ರತೆಯನ್ನು ಉಲ್ಲಂಘಿಸಿ ಬಚ್ಚನ್ ಅವರ ಜಲ್ಸಾ ಬಂಗಲೆ ಪ್ರವೇಶಿಸಲು ಯತ್ನಿಸಿದ್ದ ಘಟನೆ ನಡೆದಿತ್ತು.
Team Udayavani, Mar 3, 2023, 12:30 PM IST

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ “ಮನ್ನತ್” ಬಂಗಲೆಗೆ ನುಗ್ಗಿರುವ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ರಾತ್ರಿ (ಮಾರ್ಚ್ 03) ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಭಯೋತ್ಪಾದನೆ ಬೆಂಬಲಿಸುವ ಸಂಘಟನೆಗಳ ಮತ ನಮಗೆ ಬೇಕಾಗಿಲ್ಲ: ಕೆಎಸ್ ಈಶ್ವರಪ್ಪ
ಪಶ್ಚಿಮ ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡ್ ಪ್ರದೇಶದಲ್ಲಿರುವ ಶಾರುಖ್ ಐಶಾರಾಮಿ ಬಂಗಲೆಗೆ ಇಬ್ಬರು ಅತಿಕ್ರಮವಾಗಿ ಪ್ರವೇಶಿಸಿದ್ದು, ಇಬ್ಬರು ಆರೋಪಿಗಳು ಗುಜರಾತ್ ನ ಸೂರತ್ ಮೂಲದವರು ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ 9.30ರ ಸುಮಾರಿಗೆ ಇಬ್ಬರು ಯುವಕರು ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಮೂರನೇ ಮಹಡಿ ಬಳಿ ತಲುಪಿದ್ದ ಸಂದರ್ಭದಲ್ಲಿ ಖಾನ್ ಅವರ ಭದ್ರತಾ ಸಿಬಂದಿಗಳು ಅವರನ್ನು ಸೆರೆಹಿಡಿದಿರುವುದಾಗಿ ವರದಿ ವಿವರಿಸಿದೆ.
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಶಾರುಖ್ ಬಂಗಲೆ ಪ್ರವೇಶಿಸಿದ ಇಬ್ಬರು ಯುವಕರನ್ನು ಭದ್ರತಾ ಸಿಬಂದಿಗಳು ನಮಗೆ ಒಪ್ಪಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಅವರು, ತಾವಿಬ್ಬರು ಪಠಾಣ್ ನಟನನ್ನು ಭೇಟಿಯಾಗಲು ಗುಜರಾತ್ ನಿಂದ ಆಗಮಿಸಿರುವುದಾಗಿ ತಿಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಇನ್ನಷ್ಟೇ ಪೂರ್ಣ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಪರ್ ಸ್ಟಾರ್ ನಟರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿರುವುದು ಇದೇ ಮೊದಲ ಪ್ರಕರಣವಲ್ಲ, 2016ರ ಆಗಸ್ಟ್ ನಲ್ಲಿ 23 ವರ್ಷದ ಯುವಕನೊಬ್ಬ ಅಮಿತಾಬ್ ಬಚ್ಚನ್ ಅವರ ಭದ್ರತೆಯನ್ನು ಉಲ್ಲಂಘಿಸಿ ಬಚ್ಚನ್ ಅವರ ಜಲ್ಸಾ ಬಂಗಲೆ ಪ್ರವೇಶಿಸಲು ಯತ್ನಿಸಿದ್ದ ಘಟನೆ ನಡೆದಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ
MUST WATCH
ಹೊಸ ಸೇರ್ಪಡೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ

Daily Horoscope: ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ, ಮಂಗಲ ಕಾರ್ಯದ ಸಿದ್ಧತೆ

LABತಪ್ಪಲಿದೆ ಜಿಲ್ಲಾಸ್ಪತ್ರೆ ಅಲೆದಾಟ: ರೋಗ ಪರೀಕ್ಷೆಗೆ ತಾಲೂಕು ಆಸ್ಪತ್ರೆಗಳಲ್ಲೂ ಪ್ರಯೋಗಾಲಯ

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!