
ಜಗ್ಗೇಶ್ ಅಭಿನಯದ ತೋತಾಪುರಿ ಹಾಡಿಗೆ 200 ಮಿಲಿಯನ್ ಖುಷಿ
ಮತ್ತೊಂದು ಖುಷಿಯ ವಿಚಾರ ತೋತಾಪುರಿ ಟೀಂನಿಂದ ಹೊರಬಿದ್ದಿದೆ...
Team Udayavani, Aug 19, 2022, 12:12 PM IST

“ನೀರ್ ದೋಸೆ’ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ “ತೋತಾಪುರಿ’ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಇದಾಗಿದ್ದು, ಕಾಮಿಡಿ ಜೊತೆಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಮೂಲಕ ಝಲಕ್ ತೋರಿಸಿದ್ದಾರೆ. ಇದಕ್ಕೆ ಸಖತ್ ರೆಸ್ಪಾನ್ಸ್ ಪಡೆದುಕೊಂಡ ಖುಷಿ ಚಿತ್ರತಂಡಕ್ಕಿದೆ.
ಇದರ ಜತೆಗೆ ಮತ್ತೊಂದು ಖುಷಿಯ ವಿಚಾರ ತೋತಾಪುರಿ ಟೀಂನಿಂದ ಹೊರಬಿದ್ದಿದೆ. ಈ ಸಿನಿಮಾದ “ಬಾಗ್ಲು ತೆಗಿ ಮೇರಿ ಜಾನ್…’ ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ-ವಿದೇಶದವರೂ ಈ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ ತೋತಾಪುರಿ ಹಾಡಿನದ್ದೇ ಕಲರವ. ಹಾಡನ್ನು ರೀ ಕ್ರಿಯೇಟ್ ಮಾಡಿದವರೆಷ್ಟೋ, ರೀಲ್ಸ್, ಡಾನ್ಸ್ ಮಾಡಿದವರು ಸಾವಿರಾರು ಮಂದಿ. ಇವೆಲ್ಲದರ ಜತೆಗೆ “ಬಾಗ್ಲು ತೆಗಿ ಮೇರಿ ಜಾನ್’ 200 ಮಿಲಿಯನ್ ಹಿಟ್ಸ್ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್ ಸೋಸಲೆ ಹಾಗೂ ಅನನ್ಯ ಭಟ್ ದನಿಗೂಡಿಸಿದ್ದಾರೆ. ಕಲರ್‌ಫುಲ್ ಸೆಟ್‌ನಲ್ಲಿ ನೂರಾರು ಡಾನ್ಸರ್ ಗಳೊಂದಿಗೆ ಶೂಟ್ ಮಾಡಿರುವ ಈ ಹಾಡು ಮೋನಿಫಿಕ್ಸ್ ಆಡಿಯೋಸ್ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ.
ತೋತಾಪುರಿ ಎರಡು ಭಾಗಗಳಲ್ಲಿ ತೆರೆ ಕಾಣಲಿದ್ದು, ಮೊದಲಿಗೆ ಭಾಗ 1 ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮೋನಿಫಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ಡಿಸೆಂಬರ್‌ನಲ್ಲಿ “ಕಾಣೆಯಾಗಿದ್ದಾಳೆ ಹುಡುಕಿಕೊಟ್ಟವರಿಗೆ ಬಹುಮಾನ”

Sandalwood: 2 ಕೋಟಿಗೂ ಅಧಿಕ ವೀಕ್ಷಣೆ ಕಂಡ ʻಕಾಂತಾರ ಚಾಪ್ಟರ್ 1ʼ ಫಸ್ಟ್‌ಲುಕ್ ಟೀಸರ್

Sandalwood; ಸ್ಟಾರ್ ಸಿನಿಮಾಗಳ ಎದುರು ‘ಕಾಟೇರ’ ಸಡ್ಡು

Sandalwood; ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾದ ‘ದಿ ಜಡ್ಜ್ ಮೆಂಟ್’

Bangalore: ಚಿತ್ರೀಕರಣದ ವೇಳೆ ಅವಘಡ; ನಟ ಮಂಡ್ಯ ರಮೇಶ್‌ಗೆ ತೀವ್ರಗಾಯ
MUST WATCH
ಹೊಸ ಸೇರ್ಪಡೆ

Drought: 223 ತಾಲೂಕುಗಳ ರೈತರಿಗೆ ತಲಾ 2 ಸಾವಿರ ರೂ.ಬರ ಪರಿಹಾರ- ಸಿಎಂ

Yakshagana: ಶ್ರೀ ಕ್ಷೇತ್ರ ಧರ್ಮಸ್ಥಳಯಕ್ಷಗಾನ ಮೇಳ: ನಾಳೆಯಿಂದ ತಿರುಗಾಟ

Mangalore: ಫೆ. 11-15: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಮನುಷ್ಯನ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು : ಪೇಜಾವರ ಶ್ರೀ

Hockey; 5 ರಾಷ್ಟ್ರಗಳ ಹಾಕಿ: ಹರ್ಮನ್‌ಪ್ರೀತ್ ಸಿಂಗ್ ನಾಯಕ