
ರಾಜ್ಯದಲ್ಲಿಂದು 2062 ಜನರಿಗೆ ಕೋವಿಡ್ ಸೋಂಕು ದೃಢ
ರಾಜಧಾನಿಯಲ್ಲಿ 1,148 ಮಂದಿಗೆ ಸೋಂಕು
Team Udayavani, Jul 8, 2020, 9:31 PM IST

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಅತಿ ಹೆಚ್ಚು ಕೋವಿಡ್ ವೈರಸ್ ಸೋಂಕು ಪ್ರಕರಣಗಳು 2,062 ಮತ್ತು ಸೋಂಕಿತರ ಸಾವು 54 ವರದಿಯಾಗಿವೆ.
ಇದರೊಂದಿಗೆ ದಾಖಲೆಯ 778 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 28,877ಕ್ಕೆ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡದವರ ಸಂಖ್ಯೆ 470ಕ್ಕೆ, ಗುಣಮುಖರಾದವರ ಸಂಖ್ಯೆ 11,876ಕ್ಕೆ ಏರಿಕೆಯಾಗಿದೆ. ಸದ್ಯ 16,527 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 452 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಂಗಳವಾರದ 1,498 ಪ್ರಕರಣಗಳೊಂದಿಗೆ ತಕ್ಕ ಮಟ್ಟಿಗೆ ಸಮಾಧಾನ ನೀಡಿದ್ದ ಸೋಂಕು ಮತ್ತೆ ಸ್ಫೋಟಗೊಂಡಿದೆ. ಕಳೆದ ಭಾನುವಾರ 1,925 ಮಂದಿಗೆ ಸೋಂಕು ತಗುಲಿತ್ತು, ಶನಿವಾರ 42 ಮಂದಿ ಸೋಂಕಿತರು ಸಾವಿಗೀಡಾಗಿದ್ದರು. ಆದರೆ, ಬುಧವಾರ ಹಿಂದಿನ ದಾಖಲೆಗಳನ್ನು ಅಳಿಸಿ ಬರೋಬ್ಬರಿಗೆ 2,062 ಮಂದಿಗೆ ಸೋಂಕು ದೃಢಪಟ್ಟಿದೆ. 54 ಸೋಂಕಿತರ ಸಾವು ವರದಿಯಾಗಿದೆ.
ಸೋಂಕು ಈ ಸ್ಫೋಟಕ್ಕೆ ಅತಿ ಹೆಚ್ಚು ಸೋಂಕು ಪರೀಕ್ಷೆ 19,134 ಆಗಿರುವುದು ಕಾರಣ ಎನ್ನಲಾಗುತ್ತಿದೆ. ಈ ಪ್ರಕಾರ ನೂರು ಮಂದಿಗೆ ಸೋಂಕು ಪರೀಕ್ಷೆ ಮಾಡಿದರೆ 11 ಮಂದಿಯಲ್ಲಿ ಸೋಂಕು ದೃಢವಾಗುತ್ತಿದೆ.
ರಾಜಧಾನಿಯಲ್ಲಿ 1,148 ಮಂದಿಗೆ ಸೋಂಕು
ಬುಧವಾರದ 2,062 ಸೋಂಕಿತರ ಪೈಕಿ ರಾಜಧಾನಿ ಬೆಂಗಳೂರಿನವರು 1,148 ಮಂದಿ ಇದ್ದು, ಯಾರೊಬ್ಬರದ್ದು, ಸೋಂಕಿನ ಹಿನ್ನೆಲೆ (ಹೇಗೆ, ಯಾರಿಂದ, ಯಾವ ಸಂಪರ್ಕದಿಂದ) ಪತ್ತೆಯಾಗಿಲ್ಲ. 24 ಸೋಂಕಿತರು ಸಾವಿಗೀಡಾಗಿದ್ದು, ಇದು ನಗರದಲ್ಲಿ ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ನಗರದ ಸೋಂಕು ಪ್ರಕರಣಗಳ ಸಂಖ್ಯೆ 12,509ಕ್ಕೆ, ಸಾವಿಗೀಡಾದವರ ಸಂಖ್ಯೆ 177ಕ್ಕೆ ಹೆಚ್ಚಳವಾಗಿದೆ. ಸೋಂಕು ಹೆಚ್ಚಳದಿಂದ ಸೋಂಕಿತರ ಆರೈಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಸಿಗೆ ಸಿದ್ಧಪಡಿಸಲು ಬಿಬಿಎಂಪಿ ಮುಂದಾಗಿದೆ.
ಉಳಿದಂತೆ ದಕ್ಷಿಣ ಕನ್ನಡ 183 ಮಂದಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯು 1500 ಗಡಿದಾಟಿದೆ. ಸದ್ಯ 1534 ಸೋಂಕು ಪ್ರಕರಣಗಳಿದ್ದು, 650 ಮಂದಿ ಗುಣಮುಖರಾಗಿದ್ದು, 23 ಸೋಂಕಿತರು ಮೃತಪಟ್ಟಿದ್ದಾರೆ.
ಒಂದೇ ದಿನ ಐಸಿಯುಗೆ 173 ಸೋಂಕಿತರು
ರಾಜ್ಯದ ವಿವಿಧೆಡೆ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಒಂದೇ ದಿನ 191 ಸೋಂಕಿತರು ತುರ್ತು ನಿಗಾ ಘಟಕ (ಐಸಿಯು)ಗೆ ಸ್ಥಳಾಂತರಗೊಂದಿದ್ದಾರೆ. ಮಂಗಳವಾರದ ಅಂತ್ಯಕ್ಕೆ 279 ಸೋಂಕಿತರು ಐಸಿಯುನಲ್ಲಿದ್ದರು. ಬುಧವಾರ 452ಕ್ಕೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿಯೇ 115 ಮಂದಿ ಸ್ಥಳಾಂತರಗೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 290, ಧಾರವಾಡದಲ್ಲಿ 21, ರಾಯಚೂರು 18, ಬಳ್ಳಾರಿ 14, ಕಲಬುರಗಿ 13, ಮೈಸೂರು, ಬೀದರ್ ತಲಾ 11, ಮಂಡ್ಯ 10 ಮಂದಿ ಐಸಿಯುನಲ್ಲಿದ್ದಾರೆ.
ಬುಧವಾರ ಜಿಲ್ಲಾವಾರು ಸೋಂಕಿತರು:
ಬೆಂಗಳೂರು 1,148, ದಕ್ಷಿಣ ಕನ್ನಡ 183, ದಾವಣಗೆರೆ 89, ಕಲಬುರಗಿ 66, ಬೆಳಗಾವಿ, ಮೈಸೂರು ತಲಾ 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ, ಹಾವೇರಿ ತಲಾ 31, ಬೀದರ್ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ, ತುಮಕೂರು ತಲಾ 24, ಚಿಕ್ಕಮಗಳೂರು 23, ಉಡುಪಿ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು, ಶಿವಮೊಗ್ಗ ತಲಾ 17, ಕೋಲಾರ 16, ಯಾದಗಿರಿ, ಕೊಪ್ಪಳ ತಲಾ 11, ಗದಗ 5, ವಿಜಯಪುರ 4, ಚಿತ್ರದುರ್ಗದಲ್ಲಿ 2. ಒಟ್ಟು -2062
ಬುಧವಾರ ಸೋಂಕಿತರ ಸಾವು
ಬೆಂಗಳೂರು 24, ಧಾರವಾಡ 6, ಬಳ್ಳಾರಿ 4, ಚಿಕ್ಕಬಳ್ಳಾಪುರ, ರಾಯಚೂರು ತಲಾ 3, ತುಮಕೂರು, ಮೈಸೂರು, ಧಾರವಾಡ, ವಿಜಯಪುರ ತಲಾ 2, ಹಾಸನ, ಕಲಬುರಗಿ, ಬೀದರ್, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರಲ್ಲಿ ತಲಾ ಒಬ್ಬರು ಸೋಂಕಿನಿಂದ ಬಲಿಯಾಗಿದ್ದಾರೆ. ಒಟ್ಟು -54.
ಇದನ್ನು ಓದಿ…
ಉಡುಪಿ ಜಿಲ್ಲೆಯಲ್ಲಿ 31 ಜನರಿಗೆ ಸೋಂಕು ದೃಢ! 1421ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಚಿಕ್ಕಬಳ್ಳಾಪುರ: ಒಂದೇ ದಿನ 32 ಹೊಸ ಪ್ರಕರಣ! ಜಿಲ್ಲೆಯಲ್ಲಿ 300ಕ್ಕೆ ಏರಿದ ಸೋಂಕಿತರ ಸಂಖ್ಯೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar ನೌಕಾನೆಲೆ :ಯುದ್ಧ ನೌಕೆಯ ರನ್ ವೇನಲ್ಲಿ ಯುದ್ಧ ವಿಮಾನ ಸಾಮರ್ಥ್ಯ ಪ್ರದರ್ಶನ

Tourism ಬೆಳವಣಿಗೆಗೆ ವಿಶೇಷ ಒತ್ತು:ಸಚಿವ ಎಚ್.ಕೆ.ಪಾಟೀಲ್

CM ಗರಂ; ಬಂದಿರೋರು ಹತ್ತತ್ತು ವೋಟ್ ಹಾಕ್ಸಿದ್ರೆ ನಿಮ್ ಮಂಜಣ್ಣ ಮಂತ್ರಿಯಾಗ್ತಿದ್ದ

Congress ಸರಕಾರದಿಂದ ಗುತ್ತಿಗೆದಾರರಿಗೆ LOC ಕೊಡಲು 5% ಫಿಕ್ಸ್!! : ಹೆಚ್ ಡಿಕೆ ಆರೋಪ

Siddaramaiah ಅವರಿಗೆ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿದ ಸುತ್ತೂರು ಶ್ರೀಗಳು