
ಕಳುವಾದ 3 ಸಾವಿರ ಪೋನ್!: ಪತ್ತೆಗೆ ವೀಶೇಷ ಕಾರ್ಯಾಚರಣೆ
Team Udayavani, Jun 8, 2023, 7:17 AM IST

ಲಕ್ನೋ: ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್‌ಗ್ಳ ಕಳ್ಳತನ ಹೆಚ್ಚುತ್ತಿದ್ದು, ಕಳೆದ ಕೆಲ ವರ್ಷಗಳಿಂದ ನೋಯ್ಡಾದಲ್ಲಿ 3 ಸಾವಿರಕ್ಕೂ ಅಧಿಕ ಮೊಬೈಲ್‌ಫೋನ್‌ಗಳು ಕಳುವಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಹೊಸತಾಗಿ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿರುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯ ನೋಯ್ಡಾದಲ್ಲಿರುವ 9 ಪೊಲೀಸ್ ಠಾಣೆಗಳಲ್ಲೂ ಕಳೆದ ಕೆಲ ವರ್ಷಗಳಿಂದ ಮೊಬೈಲ್ ಕಳುವಾಗಿರುವ ದೂರುಗಳನ್ನು ಸ್ವೀಕರಿಸುತ್ತಲೇ ಇದ್ದೇವೆ. ಅಂದಾಜಿನ ಪ್ರಕಾರ ಈಗಾಗಲೇ 3 ಸಾವಿರ ಫೋನ್‌ಗಳು ಕಳುವಾಗಿವೆ. ಅಂಥ ಎಷ್ಟೋ ಮೊಬೈಲ್‌ಗಳನ್ನು ಅಪರಾಧ ಚಟುವಟಿಕೆಗಳಲ್ಲಿಯೂ ಕಳ್ಳರು ಬಳಕೆ ಮಾಡುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕೃತ್ಯಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಐಪಿಎಸ್ ಅಧಿಕಾರಿ ಶಕ್ತಿ ಮೋಜನ್ ಅವಾಸ್ತಿ ಹೇಳಿದ್ದಾರೆ.
ಟಾಪ್ ನ್ಯೂಸ್
