ಡೆಲ್ಟಾಗೆ ಮೂರು ಬ್ರಹ್ಮಾಸ್ತ್ರ : ಕೊವ್ಯಾಕ್ಸಿನ್‌, ಫೈಜರ್‌, ಜಾನ್ಸನ್‌ ಲಸಿಕೆ ಪರಿಣಾಮಕಾರಿ

Team Udayavani, Jul 4, 2021, 7:30 AM IST

ಡೆಲ್ಟಾಗೆ ಮೂರು ಬ್ರಹ್ಮಾಸ್ತ್ರ : ಕೊವ್ಯಾಕ್ಸಿನ್‌, ಫೈಜರ್‌, ಜಾನ್ಸನ್‌ ಲಸಿಕೆ ಪರಿಣಾಮಕಾರಿ

ಹೊಸದಿಲ್ಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಹೊಸತಾಗಿ ವ್ಯವಸ್ಥೆಗೆ ಸವಾಲಾಗಿರುವ ಕೊರೊನಾದ ಡೆಲ್ಟಾ ರೂಪಾಂತರಿ ವಿರುದ್ಧ ಹೋರಾಡಲು ಮೂರು ಲಸಿಕೆಗಳಿಗೆ ಸಾಧ್ಯವಿದೆ ಎಂಬ ಅಂಶ ಅಧ್ಯಯನಗ ಳಿಂದ ದೃಢಪಟ್ಟಿದೆ. ಹೈದರಾಬಾದ್‌ನ ಭಾರತ್‌ ಬಯೋಟೆಕ್‌, ಐಸಿಎಂಆರ್‌ ಸಹಯೋಗದಲ್ಲಿ ಸಿದ್ಧಪಡಿ ಸುತ್ತಿರುವ ಕೊವ್ಯಾಕ್ಸಿನ್‌ ಲಸಿಕೆಯ ಮೂರನೇ ಹಂತದ ಪ್ರಯೋ ಗದ ವರದಿ ಶನಿವಾರ ಬಿಡುಗಡೆಯಾಗಿದೆ. ಈ ಪೈಕಿ ಮಹತ್ವಪೂರ್ಣ ಅಂಶವೆಂದರೆ ಡೆಲ್ಟಾ ರೂಪಾಂತರಿ ವಿರುದ್ಧ ಶೇ.65.2ರಷ್ಟು ಪ್ರಮಾಣದಲ್ಲಿ ಫ‌ಲಕಾರಿಯಾ ಗುತ್ತದೆ. ಜತೆಗೆ ಲಕ್ಷಣ ರಹಿತ ಕೊರೊನಾ ಸೋಂಕಿನ ವಿರುದ್ಧ ಶೇ.93.4ರಷ್ಟು ಸೆಣಸುತ್ತದೆ ಎಂದು ದೃಢ ಪಟ್ಟಿದೆ. ಒಟ್ಟಾರೆ ಫ‌ಲಿತಾಂಶದ ಬಗ್ಗೆ ನೋಡುವು ದಾದರೆ ಶೇ.77.8ರಷ್ಟು ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ ಎಂದು ಅಧ್ಯಯನ ದಿಂದ ದೃಢಪಟ್ಟ ಅಂಶಗಳನ್ನು ಉಲ್ಲೇಖೀಸಿ ಭಾರತ್‌ ಬಯೋಟೆಕ್‌ ಹೇಳಿಕೊಂಡಿದೆ.

ಇನ್ನೊಂದೆಡೆ, ಅಮೆರಿಕದ ಎರಡು ಔಷಧೋದ್ಯಮ ಸಂಸ್ಥೆಗಳಾಗಿರುವ ಫೈಜರ್‌ ಮತ್ತು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆಯ ಲಸಿಕೆಗಳು ಕೂಡ ಡೆಲ್ಟಾ ರೂಪಾಂತರಿ ವಿರುದ್ಧ ಹೋರಾಡಲು ಶಕ್ತವಾಗಿವೆ. ಈ ಬಗ್ಗೆ ಅಧ್ಯಯನದಿಂದ ದೃಢಪಟ್ಟಿದೆ ಎಂದು ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಶೋಧನ ಮಂಡಳಿ ಅಧ್ಯಕ್ಷ ಪ್ರೊ| ಗ್ಲೆಂಡಾ ಗ್ರೇ ಹೇಳಿದ್ದಾರೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಬೀಟಾ ರೂಪಾಂತರಿಗಿಂತ ಡೆಲ್ಟಾ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದಿದ್ದಾರೆ. ವಿಟ್ವಾಟರ್‌ಸ್ಯಾಂಡ್‌ ವಿವಿಯ ಪ್ರಾಧ್ಯಾಪಕ ಪ್ರೊ| ಪೆನ್ನಿ ಮೂರ್‌ “ದೇಶದಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳು ಡೆಲ್ಟಾ ವಿರುದ್ಧ ಹೋರಾಡುತ್ತಿವೆ’ ಎಂದಿದ್ದಾರೆ.

5 ಲಕ್ಷಕ್ಕಿಂತ ಕಡಿಮೆ: ಬರೋಬ್ಬರಿ 97 ದಿನಗಳ ಬಳಿಕ ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕು ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಶುಕ್ರವಾರದಿಂದ ಶನಿವಾರದ ಅವಧಿಯಲ್ಲಿ 4,95,533ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ 44, 111 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದರೆ, 738 ಮಂದಿ ಜೀವ ಕಳೆದುಕೊಂಡಿದ್ದಾರೆ. 86 ದಿನಗಳಿಗೆ ಹೋಲಿಕೆ ಮಾಡಿದರೆ ದಿನವಹಿ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.97.06ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.2.35ಕ್ಕೆ ಇಳಿಕೆಯಾಗಿದೆ.

ರಕ್ತನಾಳಕ್ಕೆ ಲಸಿಕೆ ಕೊಟ್ಟರೆ ರಕ್ತ ಹೆಪ್ಪು!
ಹೊಸದಿಲ್ಲಿ: ಕೊರೊನಾ ಲಸಿಕೆ ಚುಚ್ಚುಮದ್ದನ್ನು ಸರಿಯಾದ ಕ್ರಮದಲ್ಲಿ ನೀಡದೇ ಹೋದರೂ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವ ಸ್ಥಿತಿ ಉಂಟಾಗುತ್ತದೆ ಎಂಬ ಹೊಸ ವಿಚಾರವನ್ನು ಜರ್ಮನಿಯ ತಜ್ಞರು ಪತ್ತೆ ಹಚ್ಚಿದ್ದಾರೆ. ಮ್ಯೂನಿಚ್‌ ವಿಶ್ವವಿದ್ಯಾನಿಲಯದಲ್ಲಿ ಇಲಿಗಳ ಮೇಲೆ ಮಾಡಲಾಗಿರುವ ಪ್ರಯೋಗದಲ್ಲಿ ಇದು ಸಾಬೀತಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಲಸಿಕೆಯನ್ನು ಕೈ ತೋಳುಗಳ ಮಾಂಸಖಂಡಗಳಿಗೆ ನೀಡಬೇಕು. ಮಾಂಸಖಂಡಗಳೊಳಗೆ ಚುಚ್ಚುಮದ್ದಿನ ಸೂಜಿ ಹೋಗಿ ತಲುಪದಿದ್ದಾಗ ಅಥವಾ ರಕ್ತ ನಾಳಗಳಿಗೆ ಲಸಿಕೆ ನೀಡಿದಾಗ ಅಂಥವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುತ್ತದೆ. ಚುಚ್ಚುಮದ್ದು ನೀಡುವ ಬಗ್ಗೆ ಸರಿಯಾದ ತರಬೇತಿ ಹೊಂದಿರದ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಇಂಥ ಅವಘಡ‌ ಸಂಭವಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಇತ್ತೀಚೆಗೆ, ಆಸ್ಟ್ರಾಜೆನೆಕಾ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಹಾಗೂ ಸು#ಟ್ನಿಕ್‌ ಲಸಿಕೆಗಳನ್ನು ಪಡೆದ ಕೆಲವ ರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡಿದ್ದು, ಅವರಲ್ಲಿ ಹಲವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ, ತಜ್ಞರು ಸಂಶೋಧನೆಗೆ ಇಳಿದಿದ್ದರು.

ಬರಲಿದೆ ಇನ್ನೊಂದು ಭೀಕರ ವೈರಸ್‌: ಬಫೆಟ್‌
ಜಗತ್ತಿಗೆ ಕೊರೊನಾ ಅಪಾಯ ಇನ್ನು ಮುಕ್ತಾಯ ವಾಗಿಲ್ಲ. ಅದಕ್ಕಿಂತ ಭೀಕರವಾಗಿರುವ ವೈರಸ್‌ ಅಪ್ಪಳಿಸಲಿದೆ ಎಂದು ಅಮೆರಿಕದ ಸಿರಿವಂತ ಉದ್ಯಮಿ, ಬರ್ಕ್‌ಶೈರ್‌ ಹ್ಯಾಥವೇ ಸಿಇಒ ವಾರೆನ್‌ ಬಫೆಟ್‌ ಎಚ್ಚರಿಕೆ ನೀಡಿದ್ದಾರೆ. “ಸಿಎನ್‌ಬಿಸಿ’ ಚಾನೆಲ್‌ಗೆ
ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಪಂಚದ ವ್ಯವಸ್ಥೆಗೆ ಸಾಧ್ಯವಿದೆ. ಆದರೆ ತಾವು ನಿರೀಕ್ಷಿಸಿದಂತೆ ಇರುವ ಅತ್ಯಂತ ಕಠಿನ ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಿಲ್ಲದಂಥ ಸ್ಥಿತಿ ಎದುರಾಗ ಬಹುದು ಎಂದಿದ್ದಾರೆ. ಕೊರೊನಾದಿಂದ ಸಣ್ಣಸಣ್ಣ ಉದ್ಯಮಗಳು ನಲುಗಿಹೋಗಿವೆ. ಆದರೆ ಇಲ್ಲೂ ಅಸಾಮಾನ್ಯ ಪರಿಸ್ಥಿತಿಯಿದೆ. ಕೆಲವು ಉದ್ಯಮಗಳು ಬಹಳ ಲಾಭ ಮಾಡಿಕೊಂಡಿವೆ. ಇವೆಲ್ಲದರ ಮಧ್ಯೆ ಉಳಿದ ಕಂಪೆನಿಗಳ ನೆರವಿಗೆ ನಾನು ನಿಲ್ಲುತ್ತಿದ್ದೇನೆಂದು ಬಫೆಟ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.