
Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ
ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.
Team Udayavani, Jun 1, 2023, 12:30 PM IST

ಉತ್ತರಾಖಂಡ್: ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆಯ ಭಾಗ ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣ ಸುಮಾರು 300ಕ್ಕೂ ಅಧಿಕ ಪ್ರಯಾಣಿಕರು ದಾರಿ ಮಧ್ಯೆ ಸಿಲುಕಿಕೊಂಡಿರುವ ಘಟನೆ ಉತ್ತರಾಖಂಡ್ ನ ಪಿಥೋರಾಗಢ್ ನಲ್ಲಿ ಗುರುವಾರ (ಜೂನ್ 01) ನಡೆದಿದೆ.
ಇದನ್ನೂ ಓದಿ:BOLLYWOOD: ದೇವಸ್ಥಾನಗಳಿಗೆ ಸಾರಾ ಆಲಿಖಾನ್ ಭೇಟಿ; ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ ನಟಿ
ಲಖನ್ ಪುರ್ ಸಮೀಪದ ಧಾರ್ಚುಲಾದಿಂದ 45 ಕಿಲೋ ಮೀಟರ್ ಎತ್ತರದ ಲಿಪುಲೇಖ್ -ತವಾಘಾಟ್ ನ ರಸ್ತೆ ಸುಮಾರು 100 ಮೀಟರ್ ನಷ್ಟು ಭೂ ಕುಸಿತದಿಂದ ಕುಸಿದು ಹೋಗಿದ್ದು, ಇದರಿಂದಾಗಿ ಧಾರ್ಚುಲಾ ಮತ್ತು ಗುಂಜಿ ಪ್ರದೇಶದ ನಡುವೆ ಸುಮಾರು 300 ಪ್ರಯಾಣಿಕರು ಪರದಾಡುವಂತಾಗಿದೆ ಎಂದು ವರದಿ ವಿವರಿಸಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಭಾರೀ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಎರಡು ದಿನಗಳ ಕಾರ್ಯಾಚರಣೆ ನಂತರ ಸಂಚಾರ ವ್ಯವಸ್ಥೆ ಸುಗಮವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲ ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರಾಗಢ್, ರುದ್ರಪ್ರಯಾಗ್, ತೆಹ್ರಿ ಗರ್ವಾಲ್, ಉದಮ್ ಸಿಂಗ್ ನಗರ್ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಗುಡುಗ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಬೇಕು ಎಂದು ಮನವಿ ಮಾಡಿಕೊಂಡಿರುವ ಪೊಲೀಸರು, ಭೂಕುಸಿತ ಸಂಭವಿಸುತ್ತಿರುವುದರಿಂದ ಅನಗತ್ಯ ಪ್ರಯಾಣ ಬೇಡ, ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

Cable TV service ಎಂಎಸ್‌ಒಗಳಿಗೆ 10 ವರ್ಷ ಲೈಸನ್ಸ್: ಕೇಂದ್ರ ಸರಕಾರ

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ