ಪ್ರತಿ ಡಾಟ್ ಎಸೆತಕ್ಕೆ 500 ಗಿಡ: ಪರಿಸರ ಸಂರಕ್ಷಣೆಗಾಗಿ BCCI ಯಿಂದ ವಿನೂತನ ಕ್ರಮ
Team Udayavani, May 25, 2023, 7:50 AM IST
ಚೆನ್ನೈ: ಗುಜರಾತ್ ಮತ್ತು ಚೆನ್ನೈ ನಡುವೆ ಮಂಗಳವಾರ ನಡೆದ ಪ್ಲೇ ಆಫ್ನ ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಸ್ಕೋರುಪಟ್ಟಿಯಲ್ಲಿ ಪ್ರತಿ ಬಾರಿ ಡಾಟ್ ಎಸೆತ ಹಾಕಿ ದಾಗ ಸೊನ್ನೆಯ ಬದಲು ಮರದ ಚಿತ್ರ ಇರುವು ದನ್ನು ವೀಕ್ಷಕರು ಗಮನಿಸಿರಬಹುದು. ಇದೊಂದು ಒಳ್ಳೆಯ ಉದ್ದೇಶಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತೆಗೆದುಕೊಂಡ ಯೋಜನೆಯಾಗಿದೆ.
ಪರಿಸರ ಸಂರಕ್ಷಣೆಗಾಗಿ ಬಿಸಿಸಿಐ ಈ ಐಪಿಎಲ್ನ ಪ್ಲೇ ಆಫ್ನ ಎಲ್ಲ ಪಂದ್ಯಗಳ ಡಾಟ್ ಎಸೆತಗಳನ್ನು ಲೆಕ್ಕ ಮಾಡಿ ಗಿಡಗಳನ್ನು ನೆಡುವ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಪ್ರತಿ ಯೊಂದು ಡಾಟ್ ಎಸೆತಕ್ಕೆ 500 ಗಿಡ ನೆಡುವುದು ಯೋಜನೆಯಾಗಿದೆ.
ಗುಜರಾತ್ ಮತ್ತು ಚೆನ್ನೈ ನಡುವಣ ಪಂದ್ಯದಲ್ಲಿ ಒಟ್ಟಾರೆ 82 ಡಾಟ್ ಎಸೆತಗಳನ್ನು ಹಾಕಲಾಗಿದೆ. ಹೀಗಾಗಿ ಬಿಸಿಸಿಐಯ ಯೋಜನೆಯಂತೆ 41 ಸಾವಿರ ಗಿಡಗಳನ್ನು ನೆಡಬೇಕಾಗುತ್ತದೆ. ಈ ಯೋಜನೆ ಪ್ಲೇ ಆಫ್ನ ಎಲ್ಲ ಪಂದ್ಯಗಳಿಗೂ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ