ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ದಾಳಿ: APMC ಅಧಿಕಾರಿಯ ಬಂಧನ
Team Udayavani, Dec 1, 2020, 6:16 PM IST
ಶಿವಮೊಗ್ಗ : ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶಿವಮೊಗ್ಗ ಎಪಿಎಂಸಿಯಲ್ಲಿ ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೊಬ್ಬರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಎಪಿಎಂಸಿಯ ಸಹಾಯಕ ನಿರ್ದೇಶಕರ ಕಚೇರಿಯ ಸೂಪರಿಂಡೆಂಟ್ ಆಗಿರುವ ಸಾಮ್ಯಾ ನಾಯ್ಕ ಬಂಧಿತರು. ವ್ಯಕ್ತಿಯೊಬ್ಬರಿಂದ ಐದು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ.
ಎಪಿಎಂಸಿ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲು ಸೂಪರಿಂಡೆಂಟ್ ಸಾಮ್ಯಾ ನಾಯ್ಕ ಅವರು 10 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಉಮಾ ಮಹೇಶ್ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ:ವಾಟ್ಸಾಪ್ ಹೇಗೆ ಹ್ಯಾಕ್ ಆಗುತ್ತದೆ ಗೊತ್ತಾ? ಏನಿದು ನಿಗೂಢ OTP ಸ್ಕ್ಯಾಮ್…
ಸಾಮ‍್ಯಾ ನಾಯ್ಕ ಅವರನ್ನು ಬಂಧಿಸಲಾಗಿದ್ದು, ಹಣವನ್ನು ವಶಕ್ಕೆ ಪಡೆಯಲಾಗಿದ್ದು ಎಸಿಬಿ ಅಧಿಕಾರಿಗಳಿಂದ ವಿಚಾರಣೆ ನಡೆಯುತ್ತಿದೆ. ಡಿವೈಎಸ್ಪಿ ಜೆ.ಲೋಕೇಶ್ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್ ಎನ್.ವೀರೇಂದ್ರ, ಸಿಬ್ಬಂದಿಗಳಾದ ಕೆ.ವಸಂತ, ನಾಗರಾಜ್, ರಘು ನಾಯ್ಕ, ಸುರೇಂದ್ರ, ಶ್ರೀನಿವಾಸ್, ಹರೀಶ್ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿಎಂ ವಿರುದ್ದ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ: ವಿನಯ್ ಕುಲಕರ್ಣಿ
ಮೂಡಿಗೆರೆ : ಪೊಲೀಸರೆದುರೇ ಕೈ-ಕೈ ಮಿಲಾಯಿಸಿದ ಬಿಜೆಪಿಯ ಎರಡು ಬಣ
ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಇಲ್ಲಿದೆ ಐಪಿಎಲ್ -2023 ಕಮೆಂಟೇಟರ್ ಗಳ ಪಟ್ಟಿ: ಬಿಗ್ ಬಾಸ್ ವಿನ್ನರ್ ಈಗ ವೀಕ್ಷಕ ವಿವರಣೆಗಾರ
ದಾಖಲೆಗಳನ್ನು ತೋರಿಸಲಿ; ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು