ಕೋವಿಡ್‌ನಿಂದ ರದ್ದಾದ ವಿಮಾನದ ಟಿಕೆಟ್‌ ರೀಫ‌ಂಡ್‌; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Team Udayavani, Oct 1, 2020, 6:34 PM IST

631

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಹೇರಿದಾಗ ರದ್ದಾದ ವಿಮಾನದ ಟಿಕೆಟ್‌ಗಳ ಹಣವನ್ನು ಯಾವುದೇ ಕ್ಯಾನ್ಸಲ್‌ ಶುಲ್ಕ ಮುರಿದುಕೊಳ್ಳದೆ ವಾಪಸ್‌ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಅಶೋಕ್‌ ಭೂಷಣ್‌ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಈ ತೀರ್ಪನ್ನು ನೀಡಿದೆ. ಡೈರೆಕ್ಟರ್‌ ಜನರಲ್‌ ಆಫ್ ಸಿವಿಲ್‌ ಏವಿಯೇಷನ್‌ (ಡಿಜಿಸಿಎ) ಶಿಫಾರಸನ್ನು ಪರಿಗಣಿಸಲಾಗಿದೆ.

ಟಿಕೆಟ್‌ ಹಣ ಮರುಪಾವತಿಸಲು ಹಾಗೂ ಕ್ರೆಡಿಟ್‌ ಶೆಲ್‌ ಯೋಜನೆಗೆ (ಈಗಿನ ಟಿಕೆಟ್‌ ಹಣವನ್ನು ಮುಂದೆ ಪ್ರಯಾಣಕ್ಕೆ ಬಳಸಬಹುದು) ಮುಂದಿನ ವರ್ಷದ ಮಾರ್ಚ್‌ 31ರ ತನಕ ಅವಕಾಶ ಇದೆ. ಈ ತೀರ್ಪು ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಟಿಕೆಟ್‌ಗೆ ಅನ್ವಯವಾಗುತ್ತದೆ.

ಟ್ರಾವೆಲ್‌ ಏಜೆಂಟ್‌ಗಳ ಮೂಲಕ ಹಣ ಪಡೆಯುವುದು ಹೇಗೆ?
ಯಾರು ಟ್ರಾವೆಲ್‌ ಏಜೆಂಟ್‌ಗಳ ಮೂಲಕ ಟಿಕೆಟ್‌ ಖರೀದಿ ಮಾಡಿರುತ್ತಾರೋ ಅಂಥವರು ಆ ಏಜೆಂಟ್‌ ಖಾತೆಗೆ ಹಣ ಜಮೆ ಆದ ಮೇಲೆ ವಾಪಸ್‌ ಪಡೆಯಬಹುದು ಎಂದು ಕೋರ್ಟ್‌ ಹೇಳಿದೆ. ಮುಂದಿನ ವರ್ಷದ ಮಾರ್ಚ್‌ 31ರ ಒಳಗೆ ಪ್ರಯಾಣಿಕರಿಗೆ ಹಣವನ್ನು ಹಿಂತಿರುಗಿಸಬೇಕು ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ಲಾಕ್‌ ಡೌನ್‌ ಅವಧಿಯಲ್ಲಿ ಪ್ರಯಾಣ ಮಾಡುವುದಕ್ಕೆ ಅದೇ ಲಾಕ್‌ಡೌನ್‌ ಸಮಯದಲ್ಲಿ ಟಿಕೆಟ್‌ ಬುಕ್‌ ಮಾಡಿದ್ದಲ್ಲಿ ತತ್‌ಕ್ಷಣವೇ ಹಿಂತಿರುಗಿಸಬೇಕು. ಏರ್‌ಲೈನ್ಸ್‌ಗಳು ಅಂಥ ಟಿಕೆಟ್‌ಗಳನ್ನು ಬುಕ್‌ ಮಾಡುವಂತೆಯೇ ಇರಲಿಲ್ಲ, ಬುಕಿಂಗ್‌ ರದ್ದುಪಡಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳು ಆದೇಶದ 15 ದಿನಗಳಲ್ಲಿ ಮರುಪಾವತಿ ನೀಡಬೇಕು ಎಂದು ಕೋರ್ಟ್‌ ಹೇಳಿದೆ.

ಹಣಕಾಸಿನ ತೊಂದರೆಯಿಂದಾಗಿ ಯಾವುದೇ ವಿಮಾನಯಾನ ಸಂಸ್ಥೆಗಳು ಇದನ್ನು ಪಾಲಿಸಲು ಸಾಧ್ಯವಾಗದಿದ್ದರೆ, ಪ್ರಯಾಣಿಕರಿಂದ ನೇರವಾಗಿ ಬುಕಿಂಗ್‌ ಮಾಡುವಾಗ ಪ್ರಯಾಣಿಕರ ಹೆಸರಿನಲ್ಲಿ ಅವರು ಸಂಗ್ರಹಿಸಿದ ಶುಲ್ಕದ ಮೊತ್ತಕ್ಕೆ ಸಮನಾದ ಕ್ರೆಡಿಟ್‌ ಶೆಲ್‌ ಅನ್ನು ಒದಗಿಸಬೇಕು. ಅಥವಾ 2021ರ ಮಾರ್ಚ್‌ 31ರಂದು ಅಥವಾ ಅದಕ್ಕೂ ಮೊದಲು ಅದನ್ನು ಬಳಸಲು ನೆರವಾಗಬೇಕು ಎಂದು ಹೇಳಿದೆ.

ಅಂತಹ ಕ್ರೆಡಿಟ್‌ ಶೆಲ್‌ ಅನ್ನು 2021ರ ಮಾರ್ಚ್‌ 31ರ ವರೆಗೆ ತನ್ನ ಆಯ್ಕೆಯ ಯಾವುದೇ ಮಾರ್ಗದಲ್ಲಿ ಬಳಸಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕ್ರೆಡಿಟ್‌ ಶೆಲ್‌ ಅನ್ನು ಟಿಕೆಟ್‌ ಖರೀದಿಸಿದ ಸಂಬಂಧಪಟ್ಟ ಏಜೆಂಟರು ಮೂರನೇ ವ್ಯಕ್ತಿಯ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಟಾಪ್ ನ್ಯೂಸ್

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

TrainMangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

Mangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rbi

RD ಬಡ್ಡಿ ದರ ಶೇ. 6.7ಕ್ಕೆ ಏರಿಕೆ

madras hc

Sexual Assault: ತೀರ್ಪು ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

money

Rupee: 2,000 ನೋಟು: ಗಡುವು ವಿಸ್ತರಣೆ?

BANK MD

Tamil Nadu: ಕ್ಯಾಬ್‌ ಚಾಲಕನ ಖಾತೆಗೆ 9 ಸಾವಿರ ಕೋಟಿ: ಬ್ಯಾಂಕ್‌ ಎಂಡಿ ರಾಜೀನಾಮೆ

shashi taroor nirmala

Politics: ಶಶಿ ತರೂರ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಸ್ಪರ್ಧೆ?

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

rbi

RD ಬಡ್ಡಿ ದರ ಶೇ. 6.7ಕ್ಕೆ ಏರಿಕೆ

SIDDU IMP

Karnataka: ಏಳನೇ ವೇತನ ಆಯೋಗದ ಅಧ್ಯಕ್ಷ , ಸದಸ್ಯರ ಜತೆ ಸಿಎಂ ಸಭೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.