Udayavni Special

ಉಗ್ರರ ಮೇಲೆ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್

ಎಲ್‌ಒಸಿಯಾಚೆಗಿನ ಉಗ್ರ ನೆಲೆ ಧ್ವಂಸ ; ದಾಳಿ ಚಿತ್ರೀಕರಿಸಿ ವೀಡಿಯೋ ಬಿಡುಗಡೆ

Team Udayavani, Apr 12, 2020, 6:00 AM IST

Surgical-Strike

ಹೊಸದಿಲ್ಲಿ/ಜಮ್ಮು: ಗಡಿಯಲ್ಲಿ ಉಗ್ರರ ವಿರುದ್ಧದ ಆಪರೇಷನ್‌ “ರಂಡೋರಿ ಬೆಹಕ್‌’ ಕಾರ್ಯಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಿಶೇಷ ಪಡೆಯ ಐವರು ಕಮಾಂಡೋಗಳನ್ನು ಹತ್ಯೆ ಮಾಡಿದ್ದ ಪಾಕಿಸ್ಥಾನಿ ಉಗ್ರರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಗೆ ಸನಿಹದಲ್ಲಿದ್ದ ಪಾಕ್‌ ಆಕ್ರಮಿತ ಕಾಶ್ಮೀರ ನೆಲದಲ್ಲಿ ದಾಳಿ ನಡೆಸಿ ಉಗ್ರರ ಅಡಗು ದಾಣಗಳನ್ನು ಧ್ವಂಸಗೊಳಿಸಿದೆ.

ಕಮಾಂಡೋಗಳ ಸಾವಿಗೆ ಪ್ರತೀಕಾರ ತೀರಿಸಿ ಕೊಳ್ಳಲು ಕಾಯುತ್ತಿದ್ದ ಭಾರತೀಯ ಸೇನೆಯನ್ನು ಪಾಕ್‌ ಶುಕ್ರವಾರ ರಾತ್ರಿ ಕೆಣಕಿ ಚೆಕ್‌ಪೋಸ್ಟ್‌ಗಳ ಕಡೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿದ ಸೇನೆಯು ವಾಯು ದಾಳಿ ನಡೆಸಿ, ಎಲ್‌ಒಸಿ ಆಚೆ ಬದಿಯ ಉಗ್ರರ ಅಡಗುದಾಣಗಳನ್ನು ಧ್ವಂಸ ಗೊಳಿಸಿದೆ. ದಾಳಿಯನ್ನು ಡ್ರೋನ್‌ ಮೂಲಕ ಚಿತ್ರೀಕರಿಸಲಾಗಿದ್ದು ಅದರ ವೀಡಿಯೋ ಗಳನ್ನು ಬಿಡುಗಡೆ ಮಾಡಲಾಗಿದೆ.

ಬೊಫೋರ್ಸ್‌ ಹೊವಿಟ್ಜರ್‌, 105 ಎಂಎಂ ಫೀಲ್ಡ್‌ ಗನ್‌ಗಳನ್ನು ಈ ದಾಳಿಗಾಗಿ ಬಳಕೆ ಮಾಡಲಾಗಿದೆ. ದಾಳಿಯಿಂದ ಎಲ್‌ಒಸಿಯ ಆಚೆಗಿನ ವಲಯದಲ್ಲಿ ಭಾರೀ ಹಾನಿಯಾಗಿದೆ. ದೇಶದ ಸೇನಾ ಪಡೆಯಲ್ಲಿ ಸಾವುನೋವು ಸಂಭವಿಸಿಲ್ಲ ಎಂದು ಸೇನೆ ಖಚಿತಪಡಿಸಿದೆ.

ನಿಲ್ಲದ ಫೈರಿಂಗ್‌
ತನ್ನ ಕೇಂದ್ರಗಳು ನಾಶಗೊಂಡರೂ ಬುದ್ಧಿ ಕಲಿಯದ ಪಾಕ್‌ ಶನಿವಾರ ಪೂಂಛ… ಜಿಲ್ಲೆ ವ್ಯಾಪ್ತಿಯ ಎಲ್‌ಒಸಿ ವಲಯದಿಂದ ಗುಂಡು ಹಾರಿಸಿದೆ. ಇದಕ್ಕೆ ಮುನ್ನ ಬಾಲಾಕೋಟ್‌ ಮತ್ತು ಮೆಂಧರ್‌ ಸೆಕ್ಟರ್‌ಗಳಲ್ಲಿ ಪಾಕ್‌ ಫೈರಿಂಗ್‌ನಿಂದಾಗಿ ಹಲವಾರು ಮನೆಗಳು ಧ್ವಂಸಗೊಂಡಿವೆ. ಕಿರ್ನಿ ಮತ್ತು ಕಸ್ಬಾ ವಲಯದಲ್ಲಿ ಕೂಡ ಗುಂಡಿನ ಚಕಮಕಿ ನಡೆದಿದೆ.

ಎನ್‌ಕೌಂಟರ್‌
ಕುಲ್ಗಾಂವ್‌ ವಲಯದಲ್ಲಿ ಸೇನಾ ಪಡೆ ಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್‌ ನಡೆದಿದೆ. ಆದರೆ ಉಗ್ರರು ಪರಾರಿ ಯಾಗಿದ್ದಾರೆ. ಸ್ಥಳದಿಂದ ಸುಧಾರಿತ ಸ್ಫೋಟಕಗಳ ತಯಾರಿಗೆ ಬೇಕಾದ ಅಪಾರ ಪ್ರಮಾಣದ ವಸ್ತುಗಳು, ಲೈಟ್‌ ಮೆಷಿನ್‌ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ.

ಮತ್ತೂಂದು ಬೆಳವಣಿಗೆಯಲ್ಲಿ ಜೈಶ್‌-ಎ- ಮೊಹಮ್ಮದ್‌ ಉಗ್ರ ಸಂಘಟನೆಗಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಬಂಧಿಸಲಾಗಿದೆ.

ಏನೇನು ಧ್ವಂಸ?
– ಉಗ್ರರ ಅಡಗುದಾಣಗಳು ಮತ್ತು ಲಾಂಚ್‌ಪ್ಯಾಡ್‌ಗಳು
– ಗಡಿಯತ್ತ ಗುರಿಯಿಡಲು ಉಗ್ರರು ಮಾಡಿಕೊಂಡ ಅಡಗುದಾಣಗಳು
– ಮದ್ದು ಗುಂಡುಗಳ ಸಂಗ್ರಹಾಗಾರಗಳು

ಕುಪ್ವಾರಾದ ಕೇರನ್‌ ಸೆಕ್ಟರ್‌ ನಲ್ಲಿ ಪಾಕ್‌ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಸೂಕ್ತ ಪ್ರತೀಕಾರ ಕೈಗೊಳ್ಳ ಲಾಗಿದೆ. ಶತ್ರುಗಳಿಗೆ ಅಪಾರ ನಷ್ಟ ಉಂಟು ಮಾಡಲಾಗಿದೆ.
– ಸೇನಾ ವಕ್ತಾರ

ಟಾಪ್ ನ್ಯೂಸ್

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

\172.17.1.5ImageDirUdayavaniDaily15-06-21Daily_NewsRACQET

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಸರಕಾರಿ ಕೆಲಸಕ್ಕೆ ಗೈರಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

d್ಗಹಜಹಗ್ದಸದ್ಗ

ಸಾವಿನಲ್ಲೂ ಸಾರ್ಥಕತೆ : ನಟ ಸಂಚಾರಿ ವಿಜಯ್ ಅಂಗಾಂಗ ದಾನ ಪ್ರಕ್ರಿಯೆ ಆರಂಭ

cats

ರಾಷ್ಟ್ರೀಯ ನಾಯಕರ ಮುಂದೆ ಮುಖ್ಯಮಂತ್ರಿ ಬದಲಾವಣೆ ವಿಷಯವೇ ಇಲ್ಲ : ಸಚಿವ ಜೋಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಸಿಕೆ; ಶೇ.0.01ರಷ್ಟು ಮಂದಿಗೆ ಮಾತ್ರ ಪ್ರತಿಕೂಲ ಪರಿಣಾಮ

ಲಸಿಕೆ; ಶೇ.0.01ರಷ್ಟು ಮಂದಿಗೆ ಮಾತ್ರ ಪ್ರತಿಕೂಲ ಪರಿಣಾಮ

“ರಾಮನ ಹೆಸರಲ್ಲಿ ಅವ್ಯವಹಾರವಾಗಿಲ್ಲ’ : ಉತ್ತರ ಪ್ರದೇಶ ಡಿಸಿಎಂ ದಿನೇಶ್‌ ಶರ್ಮಾ ಸ್ಪಷ್ಟನೆ

“ರಾಮನ ಹೆಸರಲ್ಲಿ ಅವ್ಯವಹಾರವಾಗಿಲ್ಲ’ : ಉತ್ತರ ಪ್ರದೇಶ ಡಿಸಿಎಂ ದಿನೇಶ್‌ ಶರ್ಮಾ ಸ್ಪಷ್ಟನೆ

aims-delhi-tuesday-begin-screening-children-in-the-age-group-of-6-12-years-for-the-clinical-trials-of-covaxin

6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕಾ ಪ್ರಯೋಗ : ಏಮ್ಸ್

ಡಿಮ್ಯಾಟ್‌ ಖಾತೆಗಳ ಸ್ಥಗಿತವಿಲ್ಲ: ಅದಾನಿ ಗ್ರೂಪ್‌ ಸ್ಪಷ್ಟನೆ

ಡಿಮ್ಯಾಟ್‌ ಖಾತೆಗಳ ಸ್ಥಗಿತವಿಲ್ಲ: ಅದಾನಿ ಗ್ರೂಪ್‌ ಸ್ಪಷ್ಟನೆ

Goa Heavy Rain, Red Alert

ಭಾರಿ ಮಳೆ : ಗೋವಾ ರಾಜ್ಯಾದ್ಯಂತ ರೆಡ್ ಅಲರ್ಟ ಘೋಷಣೆ..!

MUST WATCH

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

udayavani youtube

ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ

udayavani youtube

ಮಂಗಳೂರಿನೆಲ್ಲಡೆ ಧಾರಾಕಾರ ಮಳೆ

udayavani youtube

ಉದಯವಾಣಿ ಜೊತೆ ಸಂಚಾರಿ ವಿಜಯ್ ಕೊನೆಯ ಸಂದರ್ಶನ

udayavani youtube

ತುಂಗಾ ಜಲಾಯಶದ 21 ಕ್ರಸ್ಟ್ ಗೇಟ್ ಗಳ ತೆರವು: 2020 ಕ್ಯೂಸೆಕ್ಸ್ ನೀರು ಬಿಡುಗಡೆ

ಹೊಸ ಸೇರ್ಪಡೆ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

\172.17.1.5ImageDirUdayavaniDaily15-06-21Daily_NewsRACQET

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

14-21

ತಗದ ಕೊರೊನಾ ಸೋಂಕು; ತೆರೆಯದ ಬೀಗ

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.