
Apple iPhone 15: ಹರ್ಷ- ಆ್ಯಪಲ್ 15 ಶ್ರೇಣಿಯ ಐಫೋನ್ ಬಿಡುಗಡೆ
ನೂತನ ಐಫೋನ್ 15 ಶ್ರೇಣಿಯು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ
Team Udayavani, Sep 22, 2023, 11:54 AM IST

ಉಡುಪಿ: ಡಿಜಿಟಲ್ ಹಾಗೂ ಗೃಹೋಪಕರಣಗಳ ಅತೀ ದೊಡ್ಡ ಮಳಿಗೆ ಹರ್ಷದಲ್ಲಿ ವಿಶ್ವಾದ್ಯಂತ ಟ್ರೆಂಡ್ ಸೃಷ್ಟಿಸಿರುವ 15
ಶ್ರೇಣಿಯ ಐಫೋನ್ ಸೆ. 22ರಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಮುಂಗಡ ಕಾದಿರಿಸಿರುವ ಗ್ರಾಹಕರಿಗೆ ಹರ್ಷ ಮಳಿಗೆಯಲ್ಲಿ ಸೆ. 22ರಂದೇ ಹಸ್ತಾಂತರಿಸಲಾಗುವುದು.
ಆ್ಯಪಲ್ ತನ್ನ ಪ್ರತೀ ಶ್ರೇಣಿಯ ಐಫೋನ್ ಬಿಡುಗಡೆ ಸಮಯದಲ್ಲೂ ಹೊಸ ತಂತ್ರಜ್ಞಾನದೊಂದಿಗೆ ಹೊಸ ಫೀಚರ್‌ಗಳನ್ನು ಪರಿಚಯಿಸುವಂತೆ ಈ ಬಾರಿಯೂ ನೂತನ ಐಫೋನ್ 15 ಶ್ರೇಣಿಯು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಿ ಉತ್ಪಾದಿಸಲಾಗಿರುವ ಹೊಸ ಶ್ರೇಣಿಯ ಐಫೋನ್ ಪೂರೈಕೆಗೆ ಮುಂಚೆಯೇ ಭಾರೀ ಬೇಡಿಕೆ ಕಂಡಿದೆ. 6.1ರಿಂದ 6.7 ಇಂಚಿನ ಡಿಸ್ಪ್ಲೇ, 512 ಜಿಬಿ ವರೆಗಿನ ಮೆಮೋರಿ, ಡೈನಾಮಿಕ್ ಐಲ್ಯಾಂಡ್, ಅ16 ಚಿಪ್, ಯುಎಸ್‌ಬಿ-ಸಿ ಪೋರ್ಟ್, 48 ಮೆಗಾ ಪಿಕ್ಸೆಲ್ ಮೈನ್ ಕೆಮರಾ, 5ಜಿ ತಂತ್ರಜ್ಞಾನದೊಂದಿಗೆ ಗುಲಾಬಿ, ಹಳದಿ, ಹಸುರು, ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.
ವಿಶೇಷ ಕೊಡುಗೆ
ಎಚ್‌ಡಿಎಫ್ ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದಲ್ಲಿ 5 ಸಾವಿರ ರೂ. ವರೆಗಿನ ಕ್ಯಾಶ್ ಬ್ಯಾಕ್, ಹಳೆಯ ಐಫೋನ್
ವಿನಿಮಯದೊಂದಿಗೆ 6 ಸಾವಿರ ರೂ. ವರೆಗಿನ ವಿಶೇಷ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ಇನ್ನೂ ಹಲವು ಆಕರ್ಷಕ ಕೊಡುಗೆಗಳು ಹರ್ಷದಲ್ಲಿ ಲಭ್ಯವಿವೆ. ಈಗಾಗಲೇ ಹಲವು ಗ್ರಾಹಕರು ಹೊಸ ಶ್ರೇಣಿಯ ಐಫೋನ್‌ಗಳನ್ನು ಮುಂಗಡ ಕಾದಿರಿಸುತ್ತಿದ್ದು, ವಿಶೇಷ ಲಾಂಚ್ ಕೊಡುಗೆಯೊಂದಿಗೆ ಖರೀದಿಸಲು ಗ್ರಾಹಕರು ಸಮೀಪದ ಹರ್ಷ ಮಳಿಗೆಯನ್ನು ಭೇಟಿ ಮಾಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಭಾರತದಲ್ಲಿ ಬೆಲೆ ಎಷ್ಟು?
ಭಾರತದಲ್ಲಿಯೂ iPhone 15 ಇಂದಿನಿಂದ ಲಭ್ಯವಿದ್ದು, ಆರಂಭಿಕ ಬೆಲೆ 79,900 ರೂಪಾಯಿ. ಐಫೋನ್ 15 ಪ್ಲಸ್ ಶ್ರೇಣಿಯ ಬೆಲೆ 89,900 ರೂಪಾಯಿ. ಐಫೋನ್ 15 ಪ್ರೊ. ಬೆಲೆ 1,34,900 ರೂಪಾಯಿ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ 1,59,900 ರೂಪಾಯಿ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್ ರಿಯಾಲಿಟಿ ಕನ್ನಡಕ

Alert: ವಿವಸ್ತ್ರಗೊಳಿಸುವ ಆ್ಯಪ್‌ಸಂಖ್ಯೆ ಹೆಚ್ಚಳ- ಆತಂಕ

Kawasaki: ಭಾರತದ ಮಾರುಕಟ್ಟೆಗೆ “W 175 ಸ್ಟ್ರೀಟ್” ಪರಿಚಯಿಸಿದ ಕವಾಸಕಿ

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

US Market: ಟೆಸ್ಲಾದ “ಸೈಬರ್ ಟ್ರಕ್ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!