Udayavni Special

ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ


Team Udayavani, Apr 13, 2021, 5:10 AM IST

ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ

ದೀಪವನ್ನು ಸೂರ್ಯ ಮತ್ತು ಅಗ್ನಿಯ ಸಂಕೇತವೆಂದು ವ್ಯಾಖ್ಯಾನಿಸಲಾಗಿದ್ದು, . ದೀಪವು ಮಂಗಳಕರವಾದುದು. ಮಾನವನು ಅನ್ವೇಷಿಸಿದ ಅನೇಕ ಅದ್ಭುತಗಳಲ್ಲಿ ಅಗ್ನಿಯೂ ಒಂದು. ದೀಪವು ಬೆಳಕಿನ ಜತೆಗೆ ಜೀವಗಳಿಗೆ ರಕ್ಷಣೆಯನ್ನು ನೀಡಿದ ಮತ್ತು ನೀಡುತ್ತಿರುವುದರಿಂದ ದೀಪಕ್ಕೆ ಮನುಷ್ಯ ದೈವತ್ವದ ಸ್ಥಾನವನ್ನು ನೀಡಿದ್ದಾನೆ. ಭಾರ ತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ವಿಶೇಷವಾದ ಸ್ಥಾನಮಾನವಿದೆ. ವೇದಗಳ ಪ್ರಕಾರ ಇಂದ್ರನು ಪ್ರಮುಖ ದೇವತೆಯಾದರೆ ಅನಂತರದ ಸ್ಥಾನ ಅಗ್ನಿಗೇ. ದೀಪದ ಕಲ್ಪನೆ ಬಂದಂದಿನಿಂದ ನಾಗರಿಕತೆಯು ಹೊಸತಾದ ಶಕ್ತಿಯನ್ನು ಪಡೆಯಿತು. ದೀಪದ ಬೆಳಕೇ ಮನುಷ್ಯ ನಿಗೆ ಜ್ಞಾನದ ಮೂಲವಾಗಿದ್ದು, ಇದನ್ನು ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರವಾ ದದ್ದೆಂದು ಭಾವಿಸಲಾಗಿದೆ. ದೀಪದ ಮಹಿಮೆಯನ್ನು ಅರಿತ ಮಾನವ ಅದನ್ನು ವಿವಿಧ ರೂಪಗಳಲ್ಲಿ ಸುಂದರಗೊಳಿಸಲು ಪ್ರಯತ್ನಿಸಿದ ಎನ್ನಬಹುದು.

ದೀಪ ಎಂದರೆ ಶಾಂತಿ, ಸಮೃದ್ಧಿ, ಬೆಳಕು, ಆರೋಗ್ಯ, ಸಂಪತ್ತು, ಮತ್ತು ಪ್ರಖರತೆಯ ಪ್ರತಿರೂಪ. ದೀಪವು ನಮ್ಮ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆಯ ಸಂಕೇತ. ಇಂತಹ ದೀಪವನ್ನು ಬೆಳಗಿಸುವುದರಿಂದ ನಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ, ಶಾಂತಿ ಯನ್ನು ದೊರೆಯುತ್ತದೆ. ದೀಪವನ್ನು ಬೆಳಗಿಸುವುದರ ಹಿಂದೆ ಒಂದು ಆಳ ವಾದ ತಣ್ತೀ ಅಡಗಿದೆ. ನಮ್ಮ ಕಷ್ಟ ಮತ್ತು ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚು ತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗ ಲಾಡಿಸಲು ದೀಪಲಕ್ಷ್ಮಿಯನ್ನು ಬೆಳಗಿಸಿ, ಪ್ರಾರ್ಥಿಸುತ್ತೇವೆ.

ದೀಪವನ್ನು ಬೆಳಗುವುದೆಂದರೆ ನಮ್ಮನ್ನು ನಾವು, ನಮ್ಮ ಆತ್ಮವನ್ನು ಬೆಳಗಿಕೊಂಡಂತೆ. ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮನುಷ್ಯನ ಮನಸ್ಸಿಗೆ ಹೋಲಿಸಲಾಗಿದೆ. ದೀಪವನ್ನು ಹಚ್ಚಿದಾಗ ನಮ್ಮ ಮನಸ್ಸಿನಲ್ಲಿ ನಮ್ಮ ಬದುಕಿನ ಪ್ರಾಮುಖ್ಯದ ಅರಿವುಂಟಾಗುತ್ತದೆ. ಇದು ನಮಗೆ ಬೌದ್ಧಿಕವಾದ ಜ್ಞಾನ ವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಬಡವ-ಬಲ್ಲಿದ, ಜಾತಿ ಮತ್ತು ಪಕ್ಷಗಳ ಭೇದವಿಲ್ಲದೇ ದೀಪವು ಅರಮನೆ ಅಥವಾ ಗುಡಿಸಲೆಂಬ ಭೇದವಿಲ್ಲದೇ ಸಮಾನವಾಗಿಯೇ ಬೆಳಗುತ್ತದೆ. ಮನುಷ್ಯನೂ ಯಾವುದೇ ಭೇದಭಾವವಿಲ್ಲದೆ ಬದುಕಿ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂಬ ಸಂದೇಶವನ್ನು ದೀಪವು ನೀಡುತ್ತದೆ.

ಜ್ಞಾನದ ಸಂಕೇತವಾದ ದೀಪವು, ಕತ್ತಲೆಯಂತಿರುವ ಅಜ್ಞಾನವನ್ನು ಹೋಗ ಲಾಡಿಸುವ ಬೆಳಕು. ದೀಪಗಳನ್ನು ಮನೆಗಳಲ್ಲಿ ಬೆಳಗುವದರಿಂದ ನಮ್ಮ ಮನಸ್ಸುಗಳಲ್ಲಿ ತುಂಬಿರುವ ಅಜ್ಞಾನ ವೆಂಬ ಕತ್ತಲೆ(ತಮ)ಯು ದೂರ ಸರಿ ಯುತ್ತದೆ. ದೀಪ ಜೀವನದ ಪ್ರತೀ ಕ್ಷಣದಲ್ಲೂ ಆವರಿಸಿಕೊಂಡಿದ್ದು, ನಿತ್ಯ ದೀಪಗಳನ್ನು ಬೆಳಗುವುದರಿಂದ ನಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

“ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ..’ ಎಂಬ ಶ್ಲೋಕವೇ ಹೇಳುವಂತೆ ಮನದೊಳಗೆ ತುಂಬಿರುವ ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನವೆಂಬ ಕತ್ತಲಿನಿಂದ ಜ್ಞಾನ ಎಂಬ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಂದಾದೀಪವು ನಮ್ಮನ್ನು ನಡೆಸುತ್ತದೆ ಎಂಬ ನಂಬಿಕೆ ಯಿದೆ. ಜೀವನವೆಂಬ ನೌಕೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ಸಣ್ಣ ಸಣ್ಣ ಜ್ಯೋತಿಗಳು, ನಾವು ನಮ್ಮೊಳಗೆ ಇರುವ ಜ್ಞಾನವೆಂಬ ಜ್ಯೋತಿಗಳನ್ನು ಬೆಳಗು ವುದರಿಂದ ಮನಸ್ಸಿನಲ್ಲಿರುವಂತಹ ಅಜ್ಞಾನ, ಕಷ್ಟ, ನೋವುಗಳು ದೂರವಾಗಿ ಜ್ಞಾನ ಮತ್ತು ನೆಮ್ಮದಿಯ ಬೆಳಕು ಎಲ್ಲೆಡೆ ಪಸರಿಸುವಂತಾಗುತ್ತದೆ.

ಮನೆಯಲ್ಲಿ ದೀಪವನ್ನು ಹಚ್ಚುವು ದರಿಂದ ಆ ಪರಿಸರದಲ್ಲಿ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕವಾದ ಚಿಂತನೆಗಳು ಹೆಚ್ಚುತ್ತದೆ ಎಂಬುದು ವೈಜ್ಞಾನಿಕವಾ ಗಿಯೂ ಸಾಬೀತಾಗಿದೆ. “ದೀಪದಿಂದ ದೀಪವ ಹಚ್ಚಬೇಕು ಮಾನವ’ ಎಂಬ ಕವಿವಾಣಿಯಂತೆ ಹೊಸವರ್ಷದ ಮೊದಲ ದಿನವಾದ ಯುಗಾದಿಯಂದು ನಮ್ಮಲ್ಲಿರುವ ಉತ್ತಮ ಜ್ಞಾನವನ್ನು ಇತರರಿಗೂ ಹಂಚಿ ಎಲ್ಲೆಡೆ ಜ್ಞಾನದ ಜ್ಯೋತಿಯು ಪ್ರಜ್ವಲಿಸುವಂತೆ ಮಾಡುವ ಸಂಕಲ್ಪ ಮಾಡೋಣ.

- ಸಂತೋಷ್‌ ರಾವ್‌, ಪೆರ್ಮುಡ

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!

Arathi won the battle

ಸಮರ ಗೆದ್ದ ಆರತಿ

desiswara

ಮೌನದ ಹಿಂದಿನ ಕಾರಣ ತಿಳಿದುಬಿಡೋಣ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

anivasi kannadiga

ಅವನ ಕಣ್ಣಲ್ಲಿ ನನ್ನೂರಿನ ಬೆಳಕು

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.