2 ತಿಂಗಳಲ್ಲಿ 4ನೇ ಬಾರಿ ವಿಮಾನ ಇಂಧನ ಬೆಲೆಯೇರಿಕೆ!
Team Udayavani, Feb 16, 2022, 9:25 PM IST
ನವದೆಹಲಿ: ಕಳೆದ ಎರಡು ತಿಂಗಳಲ್ಲಿ ನಾಲ್ಕನೇ ಬಾರಿಗೆ ವಿಮಾನಗಳ ಇಂಧನ ಬೆಲೆಯನ್ನು ಏರಿಸಲಾಗಿದೆ! ಈ ಬಾರಿಯಂತೂ ಜೆಟ್ ಇಂಧನ (ಏವಿಯೇಷನ್ ಟರ್ಬೈನ್ ಫ್ಯೂಯೆಲ್) ಬೆಲೆಯನ್ನು ಒಂದು ಕಿ.ಲೀ.ಗೆ ಶೇ.5.2 ಏರಿಸಲಾಗಿದೆ.
ಅಂದರೆ 4,481.63 ರೂ. ಬೆಲೆಯೇರಿಕೆಯಾಗಿದೆ. ಒಟ್ಟಾರೆ ಒಂದು ಕಿ.ಲೀ.ಗೆ ಬೆಲೆ ಇದೀಗ 90,519.79 ರೂ. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಕಚ್ಚಾತೈಲಗಳ ಬೆಲೆಯೇರಿಕೆಯಾಗಿರುವುದು.
ವಿಶೇಷವೆಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮಾತ್ರ ಯಾವುದೇ ವ್ಯತ್ಯಯವಾಗಿಲ್ಲ.
ಸತತ 103ನೇ ದಿನವೂ ಈ ಬೆಲೆಗಳು ಯಥಾಸ್ಥಿತಿಯಲ್ಲೇ ಮುಂದುವರಿದಿವೆ. ಇದಕ್ಕೆ ಕಾರಣ ಉತ್ತರಪ್ರದೇಶ, ಪಂಜಾಬ್ನಲ್ಲಿ ವಿಧಾನಸಭೆ ನಡೆಯುತ್ತಿರುವುದು ಎಂದು ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!