ಆಯುಷ್ ಪದವಿ: ಸೀಟು ಹಂಚಿಕೆ ಪ್ರಕಟ
Team Udayavani, Feb 7, 2023, 11:47 PM IST
ಕುಂದಾಪುರ : ಆಯುಷ್ ಪದವಿ ಕಾಲೇಜಿನ ದಾಖಲಾತಿಗೆ ಸಂಬಂಧಿಸಿದಂತೆ ಸರಕಾರವು ಕೊನೆಗೂ ಸೀಟು ಹಂಚಿಕೆ ಮಾಡಿ, ಶುಲ್ಕವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. 8-9 ತಿಂಗಳಿನಿಂದ ಈ ಶೈಕ್ಷಣಿಕ ಸಾಲಿನ ಬಿಎಎಂಎಸ್ (ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ಕೋರ್ಸ್) ಪದವಿ ಕಾಲೇಜುಗಳ ಆರಂಭಕ್ಕಾಗಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.
2022-23ನೇ ಸಾಲಿನ ರಾಜ್ಯದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಆಯುರ್ವೇದ ಮತ್ತು ಯುನಾನಿ ವೈದ್ಯಕೀಯ ಮಹಾವಿದ್ಯಾಲಯಗಳ ಪದವಿ ಕೋರ್ಸ್‌ಗಳಿಗೆ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಶುಲ್ಕವನ್ನು ಸಹ ನಿಗದಿಗೊಳಿಸಲಾಗಿದೆ.
ಕಳೆದ ಶೈಕ್ಷಣಿಕ ಸಾಲಿನ ಪಿಯುಸಿ ಫಲಿತಾಂಶ ಪ್ರಕಟಗೊಂಡು 8-9 ತಿಂಗಳು ಕಳೆದಿದ್ದು, ಬಿಎಎಂಎಸ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದಿದ್ದರು. ರಾಜ್ಯ ಸರಕಾರ ಹಾಗೂ ಖಾಸಗಿ ಆಯುಷ್ ಕಾಲೇಜುಗಳ ನಡುವಿನ ಬಿಕ್ಕಟ್ಟಿನಿಂದಾಗಿ ದಾಖಲಾತಿ ಪ್ರಕ್ರಿಯೆಯೇ ಆರಂಭವಾಗಿರಲಿಲ್ಲ.
ಸೀಟು ಹಂಚಿಕೆ ವಿವರ
ಸರಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ ಆಯುರ್ವೇದ ಮತ್ತು ಯುನಾನಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ಪೈಕಿ ಶೇ. 15 ಆಲ್ ಇಂಡಿಯಾ ಕೋಟಾ, ಉಳಿದಂತೆ ರಾಜ್ಯ ಸರಕಾರ ಹಾಗೂ ಆಡಳಿತ ಮಂಡಳಿಯ ಕೋಟಾಗಳನ್ನು ಹಂಚಿಕೆ ಮಾಡಲಾಗಿದೆ. ಇದರಂತೆ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಶೇ. 85ರಷ್ಟು, ಖಾಸಗಿ ಕಾಲೇಜುಗಳ ಶೇ. 100ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಹಂಚಿಕೆ ಮಾಡಲಾಗಿದೆ. ಇನ್ನು ಸರಕಾರಿ, ಅನುದಾನಿತ ಕಾಲೇಜುಗಳ ಶೇ. 15ರ ಆಲ್ ಇಂಡಿಯಾ ಕೋಟಾದಲ್ಲಿ ಆಯುಷ್ ಮಂತ್ರಾಲಯದ ಮೂಲಕ, ಖಾಸಗಿ ಕಾಲೇಜುಗಳ ಶೇ.15 ರ ಸೀಟುಗಳನ್ನು ರಾಜ್ಯ ಕೌನ್ಸಿಲಿಂಗ್ ಏಜೆನ್ಸಿ ಮೂಲಕ ಹಂಚಿಕೆ ಮಾಡುವಂತೆ ಆಯುಷ್ ಮಂತ್ರಾಲಯ ಸೂಚಿಸಿದೆ.
ಇನ್ನು ರಾಜ್ಯ ಖಾಸಗಿ ಮಹಾವಿದ್ಯಾಲಯಗಳ ಫೆಡರೇಷನ್ ಹಾಗೂ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಆಡಳಿತ ಮಂಡಳಿ ಕೋಟಾಗೆ ನಿಗದಿಪಡಿಸಿರುವ ಶುಲ್ಕವನ್ನು ಪರಿಷ್ಕರಿಸಿ, ವಾರ್ಷಿಕ 6 ಲಕ್ಷ ರೂ.ಗೆ ಏರಿಸಲು ಕೋರಿದ್ದರು. ಆದರೆ ಕೊರೊನಾ ಕಾರಣಕ್ಕೆ ಆಡಳಿತ ಮಂಡಳಿ ಹಾಗೂ ಎನ್‌ಆರ್‌ಐ ಕೋಟಾ ಸೀಟುಗಳ ಶುಲ್ಕವನ್ನು ಕಳೆದ ವರ್ಷ ನಿಗದಿಪಡಿಸಿದ್ದನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ.
ಉದಯವಾಣಿ ವರದಿ
ಆಯುಷ್ ಪದವಿ ಕಾಲೇಜು ಆರಂಭವಾಗದಿರುವ ಬಗ್ಗೆ, ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುತ್ತಿರುವ ಕುರಿತಂತೆ “ಉದಯವಾಣಿ’ಯು ಜ. 21ರಂದು ಮುಖಪುಟದಲ್ಲಿ “ಸರಕಾರ – ಖಾಸಗಿ ಬಿಕ್ಕಟ್ಟು; ವಿದ್ಯಾರ್ಥಿಗಳಿಗೆ ಇಕ್ಕಟ್ಟು’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಅವರು ಸಭೆ ನಡೆಸಿ, ಶೀಘ್ರ ತ್ವರಿತ ಕ್ರಮಕೈಗೊಳ್ಳಲು ಸಂಬಂಧಪಟ್ಟ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ
ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್
ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?
ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು
ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ