ಬಿಜೆಪಿಗರಿಂದ ರಾಜಕೀಯ ಪ್ರವಾಸೋದ್ಯಮ: ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಹರಿಪ್ರಸಾದ್
Team Udayavani, Feb 8, 2023, 7:15 AM IST
ಉಡುಪಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮೊದಲಾದವರು ಇತ್ತೀಚೆಗೆ ರಾಜ್ಯ ಪ್ರವಾಸ ಮಾಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಆತ್ರಾಡಿ – ಹಿರಿಯಡಕದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ ಕರಾವಳಿ ಪ್ರಜಾಧ್ವನಿ ಯಾತ್ರೆ ಸಮಾ ವೇಶದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೊರೊನಾ ಸಂದರ್ಭ 4 ಲಕ್ಷ ಮಂದಿ ಪ್ರಾಣ ಕಳೆದುಕೊಂ ಡಿದ್ದರು. ಲಕ್ಷಾಂತರ ಮಂದಿ ಕಷ್ಟದಲ್ಲಿ ಸಿಲುಕಿದ್ದರೂ ರಾಷ್ಟ್ರ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ, ಗಾಳಿ, ಪ್ರವಾಹದಿಂದ ಅಪಾರ ನಷ್ಟ ಉಂಟಾಗಿದ್ದರೂ ಕನಿಷ್ಠ ವೈಮಾನಿಕ ಸಮೀಕ್ಷೆಯನ್ನೂ ಮಾಡದೆ ಈಗ ರಾಜ್ಯದಲ್ಲಿ ರಾಜಕೀಯ ಪ್ರವಾಸೋ ದ್ಯಮ ಮಾಡುತ್ತಿದ್ದಾರೆ ಎಂದರು.
ರೈತರ ಸಾಲಮನ್ನಾಕ್ಕೆ ಹಿಂದೇಟು
ದೇಶದಲ್ಲಿ ಬಂಡವಾಳಶಾಹಿಗಳ 10 ಲಕ್ಷ ಕೋ.ರೂ.ಗೂ ಅಧಿಕ ಸಾಲವನ್ನು ಮನ್ನಾ ಮಾಡಲಾಗಿದೆ. ಆದರೆ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರ ತನ್ನ ಹಿಂಬಾಲಕರಿಗೆ ಮಾತ್ರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುತ್ತಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಅಭಿವೃದ್ಧಿ ಮಾನದಂಡಗಳನ್ನು ಜನರ ಮುಂದಿಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಪ್ರಸ್ತುತ ಅವೆಲ್ಲ ವನ್ನೂ ಮರೆತುಬಿಟ್ಟಿದೆ. ಜಿಲ್ಲೆಯ
ಜನಪ್ರತಿನಿಧಿಗಳು ಉತ್ಸವಗಳನ್ನು ಆಯೋಜಿಸಿ ಹಣ ವಸೂಲು ಮಾಡುತ್ತಿದ್ದಾರೆ. ಇದು ಮುಂದು ವರಿದರೆ ದೇಶ ಅಧಃಪತನದತ್ತ ಸಾಗಲಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೇರಳ ಶಾಸಕ ರೋಝಿ ಜಾನ್, ಪ್ರಮುಖರಾದ ಇಸ್ಮಾಯಿಲ್ ಆತ್ರಾಡಿ, ಸಂತೋಷ್ ಕುಲಾಲ್, ಗೀತಾ ವಾಗೆÛ, ನವೀನ್ ಸಾಲ್ಯಾನ್, ಹರೀಶ್ ಹೆಗ್ಡೆ, ಬಾಬಣ್ಣ ನಾಯಕ್, ಸಂತೋಷ್ ಕುಲಾಲ್, ನವೀನ್ ಸಾಲ್ಯಾನ್ ಉಪಸ್ಥಿತರಿದ್ದರು.