
Actor: ಶೂಟಿಂಗ್ ದುರಂತದಲ್ಲಿ 30 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ತಮಿಳು ನಟ ಬಾಬು ವಿಧಿವಶ
Team Udayavani, Sep 22, 2023, 1:42 PM IST

ಚೆನ್ನೈ: ತಮಿಳು ಚಿತ್ರರಂಗದ ನಟ, ಎನ್ ಉಯಿರ್ ತೋಜ್ಹನ್ ಸಿನಿಮಾ ಖ್ಯಾತಿಯ ಬಾಬು (60ವರ್ಷ) ಅವರು ದೀರ್ಘಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ನಟ ಬಾಬು ಅವರು ಕಳೆದ 30 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:INDvsAUS; ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಐದು ಬದಲಾವಣೆ
ನಟ ಬಾಬು ಅವರ ನಿಧನವಾಗಿರುವುದನ್ನು ನಿರ್ದೇಶಕ ಭಾರತಿರಾಜಾ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಖಚಿತಪಡಿಸಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಬಾಬು ದೊಡ್ಡ ಸ್ಟಾರ್ ನಟನಾಗಿ ಬೆಳೆಯುವ ಅವಕಾಶವಿತ್ತು. ಆದರೆ ದುರಾದೃಷ್ಟ ಎಂಬಂತೆ ಸಿನಿಮಾ ಸೆಟ್ ನಲ್ಲಿ ನಡೆದ ದುರಂತದಿಂದಾಗಿ ಮೂರು ದಶಕಗಳ ಕಾಲ ಹಾಸಿಗೆ ಹಿಡಿಯುವಂತಾಗಿತ್ತು. ಎನ್ ಉಯಿರ್ ತೋಜ್ಹನ್ ನಟ ಬಾಬು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 18 ವರದಿಯಂತೆ, ಬಾಬು ಅವರು ಆಸ್ಪತ್ರೆಯಲ್ಲಿದ್ದಾಗ ನಿರ್ದೇಶಕ ಭಾರತಿರಾಜಾ ಅವರು ಭೇಟಿ ನೀಡಿ ಆರ್ಥಿಕ ನೆರವು ನೀಡಿದ್ದರು. 1990ರಲ್ಲಿ ಭಾರತೀರಾಜಾ ಅವರ ಎನ್ ಉಯಿರ್ ತೋಜ್ಹನ್ ಸಿನಿಮಾದಲ್ಲಿ ಹೀರೋ ಪಾತ್ರ ಮಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ನಂತರ 1991ರಲ್ಲಿ ಪೆರುಮ್ ಪುಲ್ಲಿ, ತಾಯಮ್ಮಾ ಪೊನ್ನುಕ್ಕೂ ಸೇಥಿ ವಂದಾಚು ಸಿನಿಮಾದಲ್ಲಿ ಅಭಿನಯಿಸಿದ್ದರು. ಏತನ್ಮಧ್ಯೆ ಮನಸಾರ ವಾಲ್ತುಂಗಳೆನ್ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆಕ್ಷನ್ ಸೀನ್ ನ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಬಾಬು ಅವರು ಹೈಜಂಪ್ ಮಾಡಬೇಕಿತ್ತು. ಅದಕ್ಕೆ ಡ್ಯೂಪ್ ಬಳಸುವಂತೆ ನಿರ್ದೇಶಕರು ಸೂಚಿಸಿದ್ದರು. ಆದರೆ ಬಾಬು ಅವರು ತಾನೇ ಸ್ಟಂಟ್ ಮಾಡುವುದಾಗಿ ಹೇಳಿದ್ದರು. ಸ್ಟಂಟ್ ವೇಳೆ ನೆಲಕ್ಕಪ್ಪಳಿಸಿದ್ದ ಪರಿಣಾಮ ಬಾಬು ಅವರ ಬೆನ್ನುಹುರಿ ಹುಡಿಯಾಗಿತ್ತು. ಇದರ ಪರಿಣಾಮ 30 ವರ್ಷಗಳ ಕಾಲ ಹಾಸಿಗೆಯಲ್ಲಿ ಇರುವಂತಾಗಿತ್ತು ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Big B: ಸೊಸೆ ಐಶ್ವರ್ಯಾರನ್ನು ಅನ್‌ಫಾಲೋ ಮಾಡಿದ ಬಿಗ್‌ಬಿ?

Lakshmika Sajeevan: ಹಠಾತ್ ಹೃದಯಾಘಾತ; 24 ರ ಹರೆಯದಲ್ಲಿ ಖ್ಯಾತ ನಟಿ ಕೊನೆಯುಸಿರು

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ