ಗುಡ್ ನೈಟ್ ಲಿಕ್ವಿಡ್ ಕುಡಿದು ಅಸ್ವಸ್ಥಗೊಂಡ ಎರಡು ವರ್ಷದ ಮಗು! ಅಪಾಯದಿಂದ ಪಾರು
Team Udayavani, Oct 11, 2020, 9:27 PM IST
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಗುಡ್ ನೈಟ್ ಲಿಕ್ವಿಡ್ ಕುಡಿದ ಮಗು ತೀವ್ರ ಅಸ್ವಸ್ಥವಾಗಿ ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.
ಮುದ್ದೇಬಿಹಾಳ ಪಟ್ಟಣದ ಆಜಾದ್ ನಗರದ ಮನೆಯಲ್ಲಿ ಸೊಳ್ಳೆಗಳ ನಿಗ್ರಹಕ್ಕಾಗಿ ಹಚ್ಚಿಟ್ಟಿದ್ದ ಗುಡ್ ನೈಟ್ ಲಿಕ್ವಿಡ್ ಕುಡಿದ 2 ವರ್ಷದ ಮಗು ಅರಹಾನ್ ಕವಡಿಮಟ್ಟಿ ತೀವ್ರ ಅಸ್ವಸ್ಥಗೊಂಡಿದೆ.
ಲಿಕ್ವಿಡ್ ಕುಡಿದ ಬಳಿಕ ಮಗು ಉಸಿರಾಟದ ತೊಂದರೆ ಹಾಗೂ ಕೆಮ್ಮಿನಿಂದ ಬಳಸಲಾರಂಭಿಸಿದೆ. ಕೂಡಲೇ 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ ಪೋಷಕರು, ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಸಧ್ಯ ಮಗು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದು ವರೆದಿದೆ.