Bangladesh ರಾಜಕೀಯ ವಿಪ್ಲವ: ಮಹಿಳಾ ಅಧಿಕಾರ ಶಾಹಿಯಲ್ಲಿ ನಲುಗಿ ಹೇೂಯಿತೇ ಬಾಂಗ್ಲಾದೇಶ ?

ಭಾರತದ ಪಾತ್ರವಿತ್ತು ಅನ್ನುವ ಅಪವಾದವನ್ನು ಪಾಕಿಸ್ತಾನ ಭಾರತದ ಮೇಲೆ ಹಾಕಿದ್ದು ಇದೆ.

Team Udayavani, Aug 10, 2024, 6:18 PM IST

Bangladesh ರಾಜಕೀಯ ವಿಪ್ಲವ: ಮಹಿಳಾ ಅಧಿಕಾರ ಶಾಹಿಯಲ್ಲಿ ನಲುಗಿ ಹೇೂಯಿತೇ ಬಾಂಗ್ಲಾದೇಶ ?

ಬಾಂಗ್ಲಾದೇಶದ ರಾಜಕೀಯವೇ ಒಂದು ವಿಚಿತ್ರವಾದ ಬೆಳವಣಿಗೆ.1971ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಕೂಡ ಇದರ ಭಾರವನ್ನು ತಕ್ಕಮಟ್ಟಿಗೆ ಭಾರತವು ಹೊರ ಬೇಕಾಯಿತು. ಭಾರತದ ಜೊತೆ ಹೆಚ್ಚು ಗಡಿಯನ್ನು ಹಂಚಿಕೊಂಡಿರುವ ದೇಶವೆಂದರೆ ಅದು ಬಾಂಗ್ಲಾದೇಶ ಅನ್ನುವುದರಲ್ಲಿ ಎರಡು ಮಾತಿಲ್ಲ. ಬಾಂಗ್ಲಾದೇಶದ ನಿರಾಶ್ರಿತರಿಗೆ ಆಸರೆ ಕೊಡ ಬೇಕಾದ ಪರಿಸ್ಥಿತಿ ಅಂದು ಭಾರತಕ್ಕೂ ಬಂದಿತ್ತು. ಭಾರತವನ್ನು ಮುಂದೆ ಕೂಡಾ ಕಾಡಿದ್ದು ಇದೇ ವಲಸಿಗರ ನುಸುಳುವಿಕೆಯ ಸಮಸ್ಯೆ ಅಂದರೂ ತಪ್ಪಾಗಲಾರದು. ಅಂತೂ ಪಾಕಿಸ್ತಾನ ಬಾಂಗ್ಲಾ ವಿಭಜನೆಯಿಂದಾಗಿ ಪಾಕಿಸ್ತಾನದ ಶಕ್ತಿ ಬಹಳಷ್ಟು ಕುಂದಿದ್ದಂತೂ ನಿಜ.ಈ ವಿಭಜನೆಯ ಹಿಂದೆ ಭಾರತದ ಪಾತ್ರವಿತ್ತು ಅನ್ನುವ ಅಪವಾದವನ್ನು ಪಾಕಿಸ್ತಾನ ಭಾರತದ ಮೇಲೆ ಹಾಕಿದ್ದು ಇದೆ.

ಅದು ಏನೇ ಆಗಲಿ ಬಾಂಗ್ಲಾದೇಶ ಒಂದು ಸರ್ವ ಸ್ವತಂತ್ರ ದೇಶವಾಗಿ ಸ್ವಲ್ಪ ಕಾಲವಾದರೂ ನೆಮ್ಮದಿ ಬದುಕು ಕಂಡಿದ್ದು ಸತ್ಯ. ಆದರೆ ಈಗ ಇದೇ ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಅರಾಜಕತೆ ಬಂದಿರುವುದು ಕೂಡಾ ಭಾರತದ ಮೇಲೆ ಇನ್ನೊಂದಿಷ್ಟು ಸವಾಲು ತಂದು ಹಾಕಿರುವುದಂತೂ ಸತ್ಯ .

ಬಾಂಗ್ಲಾದೇಶದ ರಾಜಕೀಯ ಇತಿಹಾಸ ನೇೂಡಿದಾಗ ಅದೊಂದು ವಿಚಿತ್ರವಾದ ವ್ಯವಸ್ಥೆ ಅನ್ನುವುದು ಎದ್ದು ಕಾಣುವಂತಿದೆ. ಪಾಕಿಸ್ತಾನದ ರಾಜಕೀಯ ಡೊಂಬರಾಟಕ್ಕೂ ಬಾಂಗ್ಲಾದೇಶದ ರಾಜಕೀಯಕ್ಕೂ ಹೆಚ್ಚೇನೂ ವ್ಯತ್ಯಾಸ ಕಾಣುವುದಿಲ್ಲ. ಯಾಕೆಂದರೆ ಎರಡು ದೇಶದಲ್ಲಿ ಹರಿಯುವ ರಕ್ತದ ಗುಣ ಒಂದೇ ಅನ್ನುವ ಕಾರಣವಿರಬಹುದೊ ಏನೋ ಗೊತ್ತಿಲ್ಲ. ಹೇಳಿ ಕೊಳ್ಳಲು ಎರಡು ದೇಶಗಳಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಎಲ್ಲವೂ ಇದೆ ಆದರೆ ಅಧಿಕಾರ ಬದಲಾಗಬೇಕಾದರೆ ಕೊಲೆ ಸುಲಿಗೆ ದೇಶ ಭ್ರಷ್ಟ ರಾಗಿ ಓಡಿ ಹೇೂಗುವ ಪರಿಸ್ಥಿತಿ ಮತ್ತೆ ಮಿಲಿಟರಿ ಆಡಳಿತ …ಇಂತಹ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ವಾಗಿಯೇ ಮತ್ತೊಂದು ಸರ್ಕಾರ ಸ್ಥಾಪನೆ ಮಾಡಬೇಕಾದ ಪರಿಸ್ಥಿತಿ ಕಾಣುವಂತಾಗಿದೆ.

ಇದೇ ಬಾಂಗ್ಲಾದೇಶವನ್ನು ಸುಮಾರು ಮೂರು ದಶಕಗಳ ಕಾಲ ಆಡಳಿತ ನಡೆಸಿದ್ದು ಇಬ್ಬರು ಪ್ರಮುಖ ಮಹಿಳಾ ಮಣಿಗಳು ಅನ್ನುವುದನ್ನು ನಾವು ಪ್ರಮುಖವಾಗಿ ಗಮನಿಸ ಬಹುದು. ಇಂದಿಗೂ ಬಾಂಗ್ಲಾದೇಶದಲ್ಲಿ ಒಂದು ಪ್ರಚಲಿತವಾದ ಮಾತಿದೆ.””Batting of Begums” ಬೇಗಂ ಅಂದರೆ “ಹೈ ಪ್ರೇೂಪೈಲ್ ಮುಸ್ಲಿಂ ಲೇಡಿ” ಅಂದರ್ಥ. ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದವರು ಬೇಗಂ ಖಲಿದಾ ಜಿಯಾ (1991) ಈಕೆ ಪ್ರಧಾನಿಯಾಗಿದ್ದುಕೂಡಾ ಇವರ ಪತಿ ಜಿಯುಾರ್ ರೆಹಮಾನ್ ಅಧ್ಯಕ್ಷರಾಗಿದ್ದವರು ಇವರ ಹತ್ಯೆಯ ಅನಂತರ ಇವರೇ1978ರಲ್ಲಿ ಕಟ್ಟಿದ ಬಾಂಗ್ಲಾ ರಾಷ್ಟ್ರೀಯ ಪಕ್ಷದಿಂದ (ಬಿ.ಎನ್.ಪಿ)..ಅದೇ ರೀತಿಯಲ್ಲಿ ಈಗ ಹದಿನೈದು ವರುಷಗಳ ಕಾಲ ದೇಶದ ಪ್ರಧಾನಿಯಾಗಿದ್ದು ಹುದ್ದೆ ತೊರೆದು ದೇಶದಿಂದ ಪಲಾಯನಗೈದ ಶೇಖ್ ಹಸೀನಾ ಕೂಡಾ ಇವರ ತಂದೆ ಮುಜಿಬುರ್ ರೆಹಮಾನ್ ದೇಶದ ಮೊದಲ ಅಧ್ಯಕ್ಷರಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ರಾಷ್ಟ್ರ ಪಿತ ಅನ್ನಿಸಿಕೊಂಡವರ ಮಗಳು.

ಇದೇ ಹಸೀನಾ ಕೂಡಾ ಅವರ ತಂದೆಯ ಹತ್ಯೆಯ ಅನಂತರ(1975) ಅವರೇ ಸ್ಥಾಪನೆ ಮಾಡಿದ ರಾಜಕೀಯ ಪಕ್ಷ ಆವಾಮಿ ಲೀಗ್ ಮೂಲಕ 1996ರಲ್ಲಿ ಪ್ರಧಾನಿ ಪಟ್ಟದ ಅಧಿಕಾರಕ್ಕೆ ಏರಿದವರು. ಅಂತೂ ಬಾಂಗ್ಲಾದೇಶದಲ್ಲಿ ಕೂಡಾ ಅಧಿಕಾರ ಹಸ್ತಾಂತರ ರಕ್ತದ ಹಾನದಿಂದಲೇ ನಡೆದಿದೆ ಬಿಟ್ಟರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿಲ್ಲ ಅನ್ನುವುದನ್ನು ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಮುಖವಾಗಿ ಗಮನಿಸ ಬೇಕಾಗಿದೆ.

ಈ ಹಸೀನಾ ತಮ್ಮ ಹದಿನೈದು ವರುಷಗಳ ಕಾಲದ ಆಡಳಿತದಲ್ಲಿ ಸಾಕಷ್ಟು ಆಥಿ೯ಕ ಸುಧಾರಣೆ ತಂದಿದ್ದಾರೆ ಅನ್ನುವುದು ಸತ್ಯ. ಭಾರತದ ಜೊತೆ ಕೂಡಾ ಉತ್ತಮ ಬಾಂಧವ್ಯ ಇಟ್ಟು ಕೊಂಡಿದ್ದರು ಅನ್ನುವುದು ನಿಜ.ನೀರು ಹಂಚಿಕೆಯ ಸಮಸ್ಯೆ ಗ್ರಾಮಗಳ ವಿಲೀನ ಪ್ರಕಿಯೇ ನಿರಾಶ್ರಿತರ ಸಮಸ್ಯೆ ಇತ್ಯಾದಿ.ಈ ಉತ್ತಮ ಸಂಬಂಧವನ್ನು ಕಂಡು ಹೊಟ್ಟೆ ಉರಿಸಿಕೊಂಡವರಲ್ಲಿ ದೇಶದ ಒಳಗಿನ ಮೂಲ ಭೂತವಾದಿಗಳು ಇದ್ದಾರೆ ಇದರ ಜೊತೆಗೆ ಪಾಕಿಸ್ತಾನ ಮತ್ತು ಚೀನಾ ಕೂಡಾ ಸೇರಿಕೊಂಡಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ವಿಶ್ವದ ದೊಡ್ಡಣ್ಣ ಅನ್ನಿಸಿಕೊಂಡ ಅಮೇರಿಕಾದವರಿಗೂ ಹಸೀನಾರವರನ್ನು ಕಂಡರೆ ಅಷ್ಟಕಟ್ಟೆ.ಇದಕ್ಕೂ ಒಂದು ಕಾರಣವಿದೆ..ಈ ಅಮೇರಿಕಾದವರಿಗೆ ಬೇರೆಯವರ ಮನೆಯ ಬಾಗಿಲಲ್ಲಿ ತಳವೂರುವ ಅಭ್ಯಾಸ ಆದರೆ ಈ ಹಸೀನಾ ಅದಕ್ಕೆ ಅವಕಾಶ ಮಾಡಿಕೊಡಲೇ ಇಲ್ಲ.ಹಾಗಾಗಿ ಈ ಅಮ್ಮನ ಮೇಲೆ ಈ ದೊಡ್ಡಣ್ಣನಿಗೆ ಸ್ವಲ್ಪ ಮನಸ್ತಾಪ.ಹಾಗಾಗಿಯೇ ಈ ಅಮ್ಮನಿಗೆ ಬ್ರಿಟನ್ ಗೆ ಹೇೂಗುವ ದಾರಿಗೆ ಅಡ್ಡಗಾಲು ಹಾಕುವ ಸಾಧ್ಯತೆಯೂ ಇದೆ.

ಹಸೀನಾ ಅವರು ತಮ್ಮ ಸುದೀರ್ಘವಾದ ಆಡಳಿತದ ಕಾಲದಲ್ಲಿ ಭ್ರಷ್ಟಾಚಾರ ಸ್ವಜನ ಪಕ್ಷಪಾತ ವಿಪಕ್ಷದವರನ್ನು ಅನ್ಯಾಯದ ರೀತಿಯಲ್ಲಿ ತುಳಿದಿದ್ದಾರೆ, ಮೀಸಲಾತಿ ವಿಚಾರದಲ್ಲಿ ಕಠಿಣ ನಿರ್ಧಾರ ಇವೆಲ್ಲವೂ ಅವರ ಮೇಲಿನ ಅಪವಾದದ ಮಾತುಗಳು ಗಟ್ಟಿಯಾಗಿಕೇಳಿ ಬಂದಿದೆ.

ತಮ್ಮ ಆಡಳಿತದ ಕಾಲದಲ್ಲಿ ಭಾರತದ ಜೊತೆಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಬಂದ ಹಸೀನಾರವರ ಪ್ರಾಣಕ್ಕೆ ಸಂಚಕಾರ ಬರುವ ಹೊತ್ತಿನಲ್ಲಿ ಅಧಿಕಾರ ತೊರೆದು ದೇಶದಿಂದ ಪಲಾಯನಗೈದ ಸಂದರ್ಭದಲ್ಲಿ ಹಸೀನಾವರಿಗೆ ಭಾರತ ತಾತ್ಕಾಲಿಕವಾಗಿ ರಕ್ಷಣೆ ನೀಡಿದ್ದು, ಇದು ಭಾರತದ ತೇೂರಿದ ಸೌಜನ್ಯ ನಡೆ ಎಂದೇ ಭಾವಿಸ ಬೇಕು. |ಮುಂದಿನ ದಿನಗಳಲ್ಲಿ ನಮ್ಮ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳು ಆಗ ಬಹುದು ಅನ್ನುವುದನ್ನು ನಾವು ಅತ್ಯಂತ ಜಾಗುಾರುಕತೆಯಿಂದ ಗಮನಿಸಲೇ ಬೇಕು. ಇಂದಿನ ಆ ದೇಶದ ಅತಂತ್ರ ಪರಿಸ್ಥಿತಿಯನ್ನು ಪಾಕಿಸ್ತಾನ, ಚೀನಾ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಇಂದಿನ ಅರಾಜಕತೆಯ ಪರಿಸ್ಥಿತಿಯಿಂದಾಗಿ ಇನ್ನಷ್ಟು ಮಂದಿ ಭಾರತದ ಕಡೆ ವಲಸಿಗರಾಗಿ ನುಗ್ಗುವ ಸ್ಥಿತಿ ಬರ ಬಹುದು..ಈ ಕಡೆಗೂ ಕೇಂದ್ರ ಹೆಚ್ಚಿನ ಗಮನ ಹರಿಸಬೇಕು.

ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಆರೇೂಗ್ಯ ಉತ್ತಮವಾಗಿದ್ದರೆ ನಮಗೂ ನೆಮ್ಮದಿಯಿಂದ ನಿದ್ರೆ ಮಾಡ ಬಹುದು ಇಲ್ಲದಿದ್ದರೆ ಇನ್ನೊಂದು ಪಾಕಿಸ್ತಾನದ ದಾಯಾದಿಗಳು ಅಲ್ಲಿ ಹುಟ್ಟಿಕೊಂಡರು ಆಶ್ಚರ್ಯ ಪಡ ಬೇಕಾಗಿಲ್ಲ. ದೇಶದ ಒಳಗೂ ಕೂಡಾ ಇಂತಹ ರಾಷ್ಟ್ರ ವಿರೇೂಧಿ ಘಟನೆಗಳು ನಡೆಯದ ಹಾಗೆಹೆಚ್ಚಿನ ಕಾಳಜಿವಹಿಸಿ ಸಮಚಿತ್ತದಿಂದ ಆಡಳಿತ ನಡೆದಬೇಕಾದ ಅನಿವಾರ್ಯತೆ ನಮ್ಮ ಸರ್ಕಾರಗಳಮುಂದಿದೆ.

ವಿಶ್ಲೇಷಣೆ :ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

CM–LG

BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ..  ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

BBK11: ಬಿಗ್‌ ಬಾಸ್‌ ಮನೆಯಲ್ಲಿ ದೆವ್ವಗಳ ಕಾಟ.. ಸ್ಪರ್ಧಿಗಳಿಗೆ ಶುರುವಾಯಿತು ಭೀತಿ

Charmady: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isrel netanyahu

Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ

Godfather of Artificial Intelligence and the Nobel Prize in Physics for tw

Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್‌ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್‌ ಪ್ರಶಸ್ತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

Karachi Airport: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ssa

Brahmavar; ಹಾವಂಜೆ ಕೋಳಿ ಅಂಕಕ್ಕೆ ಪೊಲೀಸರ ದಾಳಿ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

CM–LG

BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?

fraudd

Kundapura: ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.