ಬೆಳ್ತಂಗಡಿ: ಕಾಯಿ ಕೀಳುವ ವೇಳೆ ತಲೆಗೆ ತೆಂಗಿನಕಾಯಿ ಬಿದ್ದು ವ್ಯಕ್ತಿ ಸಾವು
Team Udayavani, Feb 9, 2023, 12:25 AM IST
ಬೆಳ್ತಂಗಡಿ : ಬುಧವಾರ ಕರಂಬಾರು ಕಾಪಿನಡ್ಕದಲ್ಲಿ ತೆಂಗಿನಕಾಯಿ ಕೀಳುವ ಸಂದರ್ಭ ತೆಂಗಿನಕಾಯಿ ತಲೆ ಮೇಲೆ ಬಿದ್ದ ಪರಿಣಾಮ ಕರಂಬಾರು ಗ್ರಾಮದ ಕೆಳ್ಕರ ಕಾಪಿನಡ್ಕ ನಿವಾಸಿ, ಪ್ರಗತಿಪರ ಕೃಷಿಕ ಸತೀಶ್ ರಾವ್ (58) ಮೃತಪಟ್ಟಿದ್ದಾರೆ.
ತಲೆ ಹಾಗೂ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಫಲಕಾರಿಯಾಗಿಲ್ಲ.
ಅವರು ಸಾಮಾಜಿಕವಾಗಿ, ಧಾರ್ಮಿಕವಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಸಹಿತ ಶ್ರೀ ಕೆಳ್ಕರ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಕೆ. ರಾಮಚಂದ್ರ ರಾವ್ ಅವರನ್ನು ಅಗಲಿದ್ದಾರೆ.