ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು
Team Udayavani, Jan 26, 2022, 8:24 PM IST
ಬೆಂಗಳೂರು ; ತಮ್ಮಿಂದ ಚಿನ್ನ ಪಡೆದು ಹಣ ನೀಡುವಂತೆ ಹೇಳಿ ಮನೆಗೆ ಕರೆಸಿಕೊಂಡು ವ್ಯಕ್ತಿಯನ್ನು ಕೊಲೆ ಮಾಡಿ ಶವವನ್ನು ಮೂಟೆಕಟ್ಟಿ ಕೆರೆಗೆ ಎಸೆದಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ತಾಲ್ಲೂಕಿನ ಅರಕೆರೆ ಹೋಬಳಿ ಮೆಸನಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಉತ್ತರಿ ಗ್ರಾಮ ಮುನಿರಾಜು ಬಂಧಿತ ಆರೋಪಿಗಳಾಗಿದ್ದಾರೆ. ಬನಶಂಕರಿ 2ನೇ ಹಂತದ ಸೆರೆಬಂಡೆಪಾಳ್ಯದ ನಿವಾಸಿ ದಿವಾಕರ್ ಎಂಬುವವರು ನಗರದ ಎಸ್‌ಎಸ್‌ಆರ್ ಗೋಲ್ಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆ ವತಿಯಿಂದ ಯಾರಿಗೆ ಹಣದ ಅವಶ್ಯಕತೆ ಇದೆಯೋ ಅವರಿಂದ ಚಿನ್ನ ಪಡೆದು ಹಣ ನೀಡಲಾಗುತ್ತದೆ.
ದುಂದುವೆಚ್ಚಕ್ಕಾಗಿ ಹಣದ ಅವಶ್ಯಕತೆ ಇದ್ದುದರಿಂದ ಆರೋಪಿಗಳು ಗೂಗಲ್‌ನಲ್ಲಿ ಸರ್ಚ್ ಮಾಡಿ ಎಸ್‌ಎಸ್‌ಆರ್ ಗೋಲ್ಡ್ ಕಂಪನಿ ನಂಬರ್ ತೆಗೆದುಕೊಂಡು ಜ.19ರಂದು ಕರೆ ಮಾಡಿದ್ದರು. ತಮ್ಮ ಬಳಿ 65ರಿಂದ 70 ಗ್ರಾಂ ಚಿನ್ನವಿದೆ. ಹಣದ ಅವಶ್ಯಕತೆ ಇರುವುದರಿಂದ ನೀವು ಬಂದು ಹಣ ಕೊಟ್ಟು ಚಿನ್ನವನ್ನು ತೆಗೆದುಕೊಂಡು ಹೋಗಿ ಎಂದು ತಿಳಿಸಿ ಸುಂಕದಕಟ್ಟೆ ಬಳಿ ಇರುವ ತಮ್ಮ ಮನೆಗೆ ಆರೋಪಿಗಳು ದಿವಾಕರ್ ಅವರನ್ನು ಜ.20ರಂದು ಕರೆಸಿಕೊಂಡಿದ್ದರು.
ಬೈಕ್‌ನಲ್ಲಿ ದಿವಾಕರ್ ಅವರ ಮನೆಗೆ ಬಂದಿದ್ದರು. ಈ ಮೊದಲೇ ಮುನಿರಾಜು ಮತ್ತು ಒಬ್ಬ ಮಹಿಳೆ ಮನೆಯಲ್ಲಿದ್ದರು. ಈ ಮೂವರು ಸೇರಿ ದಿವಾಕರ್ ಅವರ ಕತ್ತು ಹಿಸುಕಿ ಕೊಲೆ ಮಾಡಿ ಅವರ ಬಳಿ ಇದ್ದ 5 ಲಕ್ಷ ರೂ. ಹಣವನ್ನು ತೆಗೆದುಕೊಂಡು ಮೃತ ದೇಹವನ್ನು ಚೀಲದಲ್ಲಿ ತುಂಬಿಸಿದ್ದರು. ಸಾಕ್ಷ್ಯ ನಾಶ ಮಾಡುವ ದುರುದ್ದೇಶದಿಂದ ದ್ವಿಚಕ್ರ ವಾಹನವನ್ನು ಮಾಗಡಿ ರಸ್ತೆಯಲ್ಲಿರುವ ಹೊನ್ನಾಪುರ ಕೆರೆಯಲ್ಲಿ ಎಸೆದಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ
ದಿವಾಕರ್ ಸುಂಕದಕಟ್ಟೆಗೆ ಹೋಗುವುದಕ್ಕೂ ಮುನ್ನ ತಮ್ಮ ಪತ್ನಿಯನ್ನು ಜೆ.ಪಿ. ನಗರದ ಆದಿತ್ಯ ಗ್ಲೋಬಲ್ ಕಚೇರಿ ಬಳಿ ಬಿಟ್ಟು ಹೋಗಿದ್ದರು. ತಮ್ಮ ಪತಿ ವಾಪಸ್ ಬಾರದಿದ್ದರಿಂದ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಮೊಬೈಲ್ ಕರೆಗಳ ವಿವರ ಪಡೆದು ಪರಿಶೀಲಿಸಿದ್ದು, ಜ.20ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುಂಕದಕಟ್ಟೆಯ ಹೊಯ್ಸಳ ನಗರದಲ್ಲಿ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿತ್ತು. ದಿವಾಕರ್ ನಂಬರಿಗೆ ಬಂದಿರುವ ಒಳ ಹಾಗೂ ಹೊರ ಕರೆಗಳ ಮಾಹಿತಿಯನ್ನು ಆಧರಿಸಿ ಅನುಮಾನಾಸ್ಪದ ವ್ಯಕ್ತಿಗಳಾದ ಮಂಜುನಾಥ್ ಮತ್ತು ಮುನಿರಾಜು ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ಅವಶ್ಯಕತೆ ಇದ್ದುದರಿಂದ ಚಿನ್ನ ಕೊಡುವುದಾಗಿ ಹೇಳಿ ಕರೆಸಿಕೊಂಡು ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?
ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು
ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್ ಮಿತ್ರ’ರು
ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್
ಲಂಡನ್: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಡಾ.ಅಶ್ವತ್ಥನಾರಾಯಣ್