
World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ
ಬೆಟ್ಟದ ಮೇಲೆ ನಿಂತರೆ ಸ್ವರ್ಗದ ಮೇಲೆ ನಿಂತಂತೆ ಅನುಭವವಾಗುತ್ತದೆ.
Team Udayavani, Sep 27, 2023, 3:00 PM IST

Travel is an invest in yourself ಹೆಚ್ಚು ಹೆಚ್ಚು ಜ್ಞಾನ ಮತ್ತು ಅನುಭವವನ್ನು ಪಡೆಯಲು ಇಡೀ ಪ್ರಪಂಚವನ್ನು ಪ್ರಯಾಣಿಸುವವರು ಬಹಳಷ್ಟು ಜನ ಇದ್ದಾರೆ ಹೊಸ ಸ್ಥಳವನ್ನು ಅನ್ವೇಷಿಸಲು ಮತ್ತು ಅದರ ವೈಶಿಷ್ಟತೆಯ ಬಗ್ಗೆ ತಿಳಿದುಕೊಳ್ಳಲು ಹಲವಾರು ಜನ ಪ್ರವಾಸವನ್ನು ಕೈಗೊಳ್ಳುತ್ತಾರೆ.
ನಾನು ಇವತ್ತು ಸಕಲೇಶಪುರದಲ್ಲಿರುವ ಒಂದು ಸುಂದರವಾದ ದೇವಾಲಯದ ಬಗ್ಗೆ ಪರಿಚಯಿಸುತ್ತೇನೆ. ಇದು ಸಕಲೇಶಪುರದಿಂದ ಸುಮಾರು 37 ಕೀ. ಮೀ ದೂರದಲ್ಲಿದೆ. ಇಲ್ಲಿ ಬೆಟ್ಟದ ಬೈರವೇಶ್ವರ ಎಂಬ ಪುರಾತನವಾದ ದೇವಾಲಯವಿದೆ ಈ ದೇವಸ್ಥಾನದಲ್ಲಿ ಕಾಲಭೈರವೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ ಸುಂದರ ಪಶ್ಚಿಮ ಘಟ್ಟಗಳ ಮಧ್ಯೆ ನೆಲೆ ನಿಂತಿರುವ ಮತ್ತು ಶಾಂತವಾದ ಭೂ ದೃಶ್ಯದ ವಿಹಂಗಮ ನೋಟವನ್ನು ನೋಡಲೇಬೇಕು ಈ ಸ್ಥಳವು ಸಕಲೇಶಪುರದ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ ಈ ದೇವಸ್ಥಾನವು ಲವ್ ಮಾಕ್ಟೇಲ್ 2 ಸಿನಿಮಾದ ನಂತರ ಅತಿ ಹೆಚ್ಚು ಪ್ರಸಿದ್ಧಿಯಾಗಿದೆ.
ದೇವಾಲಯದಿಂದ ಒಂದು ಕೀ.ಮೀ ದೂರದಲ್ಲಿ ಒಂದು ಸುಂದರವಾದ ಗುಡ್ಡವಿದೆ ಅದುವೇ ಪಾಂಡವರ ಬೆಟ್ಟ. ಇದೊಂದು ಸುಂದರವಾದ ಮತ್ತು ಸುತ್ತಲೂ ಮಂಜಿನಿಂದ ಆವೃತವಾದ ಬೆಟ್ಟಗಳನ್ನು ವೀಕ್ಷಿಸಬಹುದು ಬೆಟ್ಟದ ಮೇಲೆ ನಿಂತರೆ ಸ್ವರ್ಗದ ಮೇಲೆ ನಿಂತಂತೆ ಅನುಭವವಾಗುತ್ತದೆ. ಮಳೆಗಾಲದ ಸಮಯದಲ್ಲಿ ಇಂತಹ ಪ್ರದೇಶಗಳನ್ನು ಭೇಟಿ ನೀಡುವುದು ಒಂದು ಉತ್ತಮ. ನೀವು ನಿಮ್ಮ ಕುಟುಂಬ ಅಥವಾ ಗೆಳೆಯರೊಂದಿಗೆ ಹೋಗಿ ಒಳ್ಳೆಯ ಸಮಯವನ್ನು ಕಳೆದು ಬನ್ನಿ.
*ಯೋಗಿತಾ ಎಸ್. ಡಿ. ಎಮ್ ಕಾಲೇಜು ಉಜಿರೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Winter Assembly session ವಿಳಂಬ ಆರಂಭ: ಬೆಳಗಾವಿ ಕಲಾಪಕ್ಕೆ ಮೊದಲ ದಿನವೇ ಆರು ಸಚಿವರು ಗೈರು

Now Government ಕಸರತ್ತು: ಮುಖ್ಯಮಂತ್ರಿ ಹುದ್ದೆಗೆ ನಡೆದಿದೆ ಬಿರುಸಿನ ಪೈಪೋಟಿ

Election result: ಷೇರು ಪೇಟೆಯಲ್ಲಿ ಕೇಸರಿ ಹಬ್ಬ

Armed Forces ಗಳಲ್ಲಿ ಮಹಿಳೆಯರಿಗೆ ಆದ್ಯತೆ: ನೌಕಾಪಡೆ ದಿನಾಚರಣೆಯಲ್ಲಿ ಪ್ರಧಾನಿ ಮೋದಿ

PSI Exam ಜ. 23ಕ್ಕೆ ಮುಂದೂಡಿಕೆ: ಸಚಿವ ಡಾ| ಪರಮೇಶ್ವರ್