
Road Mishap ಬೈಕ್-ಸ್ಕೂಟಿ ಢಿಕ್ಕಿ: ಸಹಸವಾರೆ ವಿದ್ಯಾರ್ಥಿನಿ ಸಾವು
Team Udayavani, Nov 21, 2023, 12:31 AM IST

ಉಡುಪಿ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಸ್ಕೂಟಿ ಹಾಗೂ ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ನ ಹಿಂಬದಿಯಲ್ಲಿದ್ದ ಹಿರಿಯಡಕದ ಸುಶ್ಮಿತಾ (19) ಸಾವನ್ನಪ್ಪಿದ್ದಾರೆ.
ಕಾಯಿನ್ ಸರ್ಕಲ್‌ನಿಂದ ಸಿಂಡಿಕೇಟ್ ಸರ್ಕಲ್‌ಗೆ ಬೈಕ್ ಹಾಗೂ ಸ್ಕೂಟಿ ತೆರಳುತ್ತಿತ್ತು. ಸ್ಕೂಟಿ ಸವಾರ ಸಿಗ್ನಲ್ ನೀಡದೆ ಒಮ್ಮೆಲೇ ಬಲಕ್ಕೆ ತಿರುಗಿಸಿದ ಕಾರಣ ಬೈಕ್ ಸವಾರ ಸ್ಕೂಟಿಗೆ ಢಿಕ್ಕಿ ಹೊಡೆದಿದ್ದಾನೆ.
ಈ ವೇಳೆ ರಸ್ತೆಗೆ ಬಿದ್ದ ಸಹಸವಾರೆ ಸುಶ್ಮಿತಾ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರು ನಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
