ಮುಂಬರುವ ಚುನಾವಣೆಗೆ ಎಚ್ಚರಿಕೆಯಿಂದ ಮತ ಹಾಕಿ: ಬಿ.ಕೆ. ಹರಿಪ್ರಸಾದ್
Team Udayavani, Feb 6, 2023, 6:40 AM IST
ಸುಳ್ಯ : ಮುಂದೆ ಬರುವುದು ನಿರ್ಣಾಯಕ ಚುನಾವಣೆ. ಈ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಮುನ್ನುಡಿ ಬರೆಯುವ ಚುನಾವಣೆ. ಆದುದರಿಂದ ಜನರು ಜಾಗೃತರಾಗಿ ಮತದಾನ ಮಾಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಬೆಳ್ಳಾರೆಯಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿ, ಧರ್ಮದ ಹೆಸ ರಲ್ಲಿ ರಾಜಕೀಯ, ಕೊಲೆ ನಡೆ ಯುವ ಕಾರಣ ಕರಾವಳಿ ಜಿಲ್ಲೆಗಳ ಹೆಸರು ಹಾಳಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದ ಅವರು, ಅಭಿವೃದ್ಧಿ ಹಾಗೂ ಶಾಂತಿಯ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತರಾಗಿ ಮತದಾನ ಮಾಡಬೇಕು ಎಂದರು.
ಚರ್ಚೆಗೆ ಬರಲಿ
ಹಿಂದೆ ಕಾಂಗ್ರೆಸ್ ಉಳುವವನೇ ಭೂಮಿಯ ಒಡೆಯ ಕಾನೂನು ತಂದು ಜನರಿಗೆ ಭೂಮಿ ಹಂಚಿತ್ತು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ ನರೇಗಾ ಯೋಜನೆ ಜಾರಿಗೆ ತಂದು ಜನರಿಗೆ ಉದ್ಯೋಗ ನೀಡಿತ್ತು. ಕೊರೊನಾದಂಥ ಸಂಕಷ್ಟ ಕಾಲದಲ್ಲಿ ನರೇಗಾ ಜನರ ಕೈ ಹಿಡಿದಿತ್ತು. ಆದರೆ ಬಿಜೆಪಿ ಸರಕಾರ ಈ ಯೋಜನೆಯ ಕತ್ತು ಹಿಸುಕಿದೆ ಎಂದರು.
ಆರ್.ವಿ. ದೇಶಪಾಂಡೆ ಮಾತನಾಡಿ, ಪಕ್ಷದ ವಿವಿಧ ಯೋಜನೆಗಳ ಕುರಿತು ಮನೆ ಮನೆಗೆ ಹೋಗಿ ಜನರಿಗೆ ಮಾಹಿತಿ ಕೊಡಬೇಕು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಮಾತನಾಡಿದರು.
ದ.ಕ.ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮುಖಂಡರಾದ ಮಧು ಬಂಗಾರಪ್ಪ, ಬಿ. ರಮಾನಾಥ ರೈ, ಮಂಜುನಾಥ ಭಂಡಾರಿ, ಐವನ್ ಡಿ’ ಸೋಜಾ, ಪಿ.ವಿ. ಮೋಹನ್, ಶಕುಂತಳಾ ಶೆಟ್ಟಿ, ಧನಂಜಯ ಅಡ³ಂಗಾಯ, ಭರತ್ ಮುಂಡೋಡಿ, ಟಿ.ಎಂ. ಶಹೀದ್ ತೆಕ್ಕಿಲ್, ಎಚ್.ಎಂ. ನಂದಕುಮಾರ್, ಜಿ. ಕೃಷ್ಣಪ್ಪ, ಪಿ.ಸಿ. ಜಯರಾಮ, ಸುಧೀರ್‌ಕುಮಾರ್ ಶೆಟ್ಟಿ, ಡಾ| ಬಿ. ರಘು, ಸತೀಶ್ ಕೆಡೆಂಜಿ, ಕವಿತಾ ಸನಿಲ್, ಶಾಹುಲ್ ಹಮೀದ್, ಕಾವು ಹೇಮನಾಥ ಶೆಟ್ಟಿ, ಎಸ್. ಸಂಶುದ್ದೀನ್, ಎಂ.ಎಸ್. ಮಹಮ್ಮದ್, ಗೀತಾ ಕೋಲ್ಚಾರ್, ಪ್ರವೀಣಾ ಮರುವಂಜ, ಇಸ್ಮಾಯಿಲ್ ಪಡಿ³ನಂಗಡಿ, ರಾಜೀವಿ ಆರ್. ರೈ, ಲೀಲಾ ಮನಮೋಹನ್, ಪ್ರದೀಪ್ ಕುಮಾರ್ ರೈ ಪಾಂಬಾರು, ಶೀನಪ್ಪ ಗೌಡ, ಹಾಜಿರಾ ಅಬ್ದುಲ್ ಗಫೂರ್, ಲುಕ್ಮಾನ್ ಬಂಟ್ವಾಳ ಮತ್ತಿತರರಿದ್ದರು.
ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ ಸ್ವಾಗತಿಸಿ, ಅಬ್ದುಲ್ ಗಫೂರ್ ಕಲ್ಮಡ್ಕ ವಂದಿಸಿದರು. ಅಶೋಕ್ ಚೂಂತಾರು ಹಾಗೂ ಸಚಿನ್ ರಾಜ್ ಶೆಟ್ಟಿ ನಿರೂಪಿಸಿದರು.
ವನವಾಸದಿಂದ ಮುಕ್ತರಾಗಲು ಶ್ರಮಿಸಿ: ದೇಶಪಾಂಡೆ
ಉಪ್ಪಿನಂಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಾರ್ಯಕರ್ತರು ಶ್ರಮಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಗೆಲುವು ನಮ್ಮದಾಗಲಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ನೆಲ್ಯಾಡಿಯಲ್ಲಿ ರವಿವಾರ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಯ ಕ್ಷೇತ್ರದಲ್ಲಿ 35 ವರ್ಷಗಳಿಂದ ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ವನವಾಸದಿಂದ ಮುಕ್ತರಾಗಬೇಕು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. ಬಿಜೆಪಿ ಸರಕಾರದ ದುರಾಡಳಿತವನ್ನು ತಿಳಿಸಿ ಮತದಾರರ ಮನಸ್ಸು ಗೆಲ್ಲಬೇಕು ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು
ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ