ಚಿನ್ನದ ಬ್ರೇಸ್‌ಲೆಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ
Team Udayavani, Feb 1, 2023, 9:50 PM IST
ಪಡುಬಿದ್ರಿ: ಪ್ರವಾಸ ನಿಮಿತ್ತ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ಗೆ ಸುಳ್ಯದಿಂದ ಜ. 31ರಂದು ಬಂದಿದ್ದ ಮಹಿಳೆಯೋರ್ವರ ಚಿನ್ನದ ಬ್ರೇಸ್‌ಲೆಟ್‌ಅನ್ನು ಪೊಲೀಸ್ ಠಾಣೆಗೆ ಹಿಂತಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದ ಅಲ್ಲಿನ ಹಾಗೂ ಹೋಂಗಾರ್ಡ್ ಸಿಬಂದಿಗಳನ್ನು ಪಡುಬಿದ್ರಿ ಪಿಎಸ್‌ಐ ಪುರುಷೋತ್ತಮ್ ಅಭಿನಂದಿಸಿದ್ದಾರೆ.
ಸುಳ್ಯ ವಾಸಿ ಸರಿತಾ ಅವರು ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ತಮ್ಮ ಬೆಲೆಬಾಳುವ ಚಿನ್ನದ ಬ್ರೇಸ್‌ಲೆಟ್ ಅನ್ನು ಕಳೆದುಕೊಂಡಿದ್ದರು. ಅವರು ಅಲ್ಲಿ ಅದನ್ನು ಅದೆಷ್ಟು ಹುಡುಕಾಡಿದರೂ ಸಿಗಲೇ ಇಲ್ಲ. ಆ ಬಳಿಕ ಅವರು ವಾಪಾಸು ತೆರಳಿದ್ದಾರೆ. ಅದೇ ಬ್ರೇಸ್‌ಲೆಟ್ ಬ್ಲೂ ಫ್ಲ್ಯಾಗ್ ಬೀಚಿನ ಸಿಬಂದಿ ಕಿರಣ್‌ರಾಜ್ ಮತ್ತು ಗೃಹರಕ್ಷಕ ಸಿಬಂದಿ ದಿನೇಶ್ ಅವರಿಗೆ ಸಿಕ್ಕಿದ್ದು ಆ ಕೂಡಲೇ ಅದನ್ನು ಪಡುಬಿದ್ರಿ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ. ಠಾಣಾ ಪಿಎಸ್‌ಐ ಪುರುಷೋತ್ತಮ್ ಅವರು ಅದನ್ನು ಸರಿತಾ ಅವರಿಗೆ ತಲುಪಿಸುವ ವ್ಯವಸ್ಥೆಗೊಳಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು
ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ