
ಮುಂಬಯಿ ಉದ್ಯಮಿಯ ಶವ ಶಾಂಭವಿ ನದಿಯಲ್ಲಿ ಪತ್ತೆ
Team Udayavani, Apr 2, 2023, 5:30 AM IST

ಕಾರ್ಕಳ:ಮುಂಬಯಿನಲ್ಲಿ ಉದ್ಯಮಿಯಾಗಿರುವ ಮುಂಡ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ (68)ಸಪಳಿಗರವರ ಶವ ಮುಂಡ್ಕೂರಿನ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.
ಮುಂಬಾಯಿಯಲ್ಲಿ ಹೊಟೇಲು ಕೆಲಸ ಮಾಡಿಕೊಂಡಿದ್ದ ಅವರು , ವಿಪರೀತ ಮದ್ಯಪಾನ ಮಾಡುತ್ತಿದ್ದರು. ತನ್ನ ತಮ್ಮನ ಆನಾರೋಗ್ಯದ ಬಗ್ಗೆ ಊರಿಗೆ ಬಂದು ಊರಿನಲ್ಲಿದ್ದರು.
ಊರಿಗೆ ಬಂದ ಬಳಿಕ ವಿಪರೀತ ಮದ್ಯಪಾನ ಮಾಡುತ್ತಿ ಅವರು ಮಾ.29ರಂದು ರಾತ್ರಿ 9ಕ್ಕೆ ತಮ್ಮ ಮನೆಯಿಂದ ಮದ್ಯಪಾನ ಮಾಡಲು ಮುಂಡ್ಕೂರಿಗೆ ನಡೆದುಕೊಂಡು ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ರಮೇಶ ಸಪಳಿಗ ಇವರ ಮೃತ ದೇಹ ಮಾ.31ರಂದು ಗಂಟೆಗೆ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಾಗಬನದ ಸಮೀಪ ಹರಿಯುವ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿರುತ್ತದೆ.
ರಮೇಶ್ ಸಪಳಿಗ ಇವರು ವಿಪರೀತ ಮದ್ಯಪಾನ ಮಾಡುವ ಕುಡಿಯುವ ಚಟವನ್ನು ಹೊಂದಿದ್ದು, ಅವರು ಮದ್ಯಪಾನ ಸೇವನೆ ಮಾಡಿ ನಡೆದುಕೊಂಡು ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಯಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Bagalkote ಅ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

Google 25 ವರ್ಷಗಳ ಸಂಭ್ರಮ: ಬಾಡಿಗೆ ಗ್ಯಾರೇಜ್ ನಲ್ಲಿ ಹುಟ್ಟಿಕೊಂಡಿದ್ದ ಸಂಸ್ಥೆ!

AAP: ಲೋಕಸಭೆ ಚುನಾವಣೆ – ಗೋವಾದಲ್ಲಿ ನೂತನ ಕಾರ್ಯಕಾರಿ ಸಮಿತಿ ಪ್ರಕಟಿಸಿದ ಆಪ್

Cauvery Water; ಕಾಂಗ್ರೆಸ್ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

September 29 ರಂದು ಕರ್ನಾಟಕ ಬಂದ್ ; ನೂರಾರು ಸಂಘಟನೆಗಳ ಬೆಂಬಲ