ಗುಜರಾತ್ ನ JCB ಕಾರ್ಖಾನೆಗೆ ಪ್ರಧಾನಿ ಬೋರಿಸ್ ಭೇಟಿ ನೀಡಿದ್ದೇಕೆ? ಬ್ರಿಟನ್ ಸಂಸದರ ಆಕ್ಷೇಪ
ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆಯೇ
Team Udayavani, Apr 30, 2022, 2:25 PM IST
ಲಂಡನ್: ಕಳೆದ ವಾರ ಭಾರತದ ಭೇಟಿಯ ವೇಳೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುಜರಾತ್ ನಲ್ಲಿರುವ ಬ್ರಿಟನ್ ಮೂಲದ ಜೆಸಿಬಿ ಕಾರ್ಖಾನೆಗೆ ಭೇಟಿ ನೀಡಿರುವುದಕ್ಕೆ ಬ್ರಿಟನ್ ನ ಇಬ್ಬರು ಮಹಿಳಾ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು: ಸಿಎಂ ಬೊಮ್ಮಾಯಿ
ಒಂದು ವೇಳೆ ಬ್ರಿಟನ್ ಪ್ರಧಾನಿಯವರು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆಯೇ ಎಂದು ಸಂಸದರು ಪ್ರಶ್ನಿಸಿರುವುದಾಗಿ ವರದಿ ವಿವರಿಸಿದೆ.
ಭಾರತದಲ್ಲಿ ಇತ್ತೀಚೆಗೆ ವಿವಾದಾತ್ಮಕ ಆಸ್ತಿಗಳ ಧ್ವಂಸದ ಪ್ರಕ್ರಿಯೆಯಲ್ಲಿ ಬುಲ್ಡೋಜರ್ ಗಳನ್ನು ಬಳಸಿದ ನಂತರವೂ ಬೋರಿಸ್ ಜಾನ್ಸನ್ ಅವರು ಬುಲ್ಡೋಜರ್ ಕಾರ್ಖಾನೆಗೆ ಭೇಟಿ ನೀಡುವ ಅವಶ್ಯಕತೆ ಏನಿತ್ತು? ಇದು ಬುಲ್ಡೋಜರ್ ಕ್ರಿಯೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದಂತಾಗುತ್ತದೆ ಎಂದು ಬ್ರಿಟನ್ ಸಂಸದರು ಆರೋಪಿಸಿರುವುದಾಗಿ ವರದಿ ತಿಳಿಸಿದೆ.