ಡಿವೈಡರ್‌ಗೆ ಕಾರು ಢಿಕ್ಕಿಯಾಗಿ ದಂಪತಿ ದುರ್ಮರಣ, ಚಾಲಕ ಗಂಭೀರ
Team Udayavani, May 4, 2019, 12:01 PM IST
ದಾವಣಗೆರೆ: ನಗರದ ಹೊರವಲಯದರಾಷ್ಟ್ರೀಯ ಹೆದಾದರಿಯ ಹೊಸಕುಂದವಾಡಾ ಬಳಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ ಪರಿಣಾಮ ಬೆಂಗಳೂರು ಮೂಲದ ದಂಪತಿಗಳಿಬ್ಬರು ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ ಅವಘಡ ಶನಿವಾರ ಬೆಳಗ್ಗೆ ಸಂಭವಿಸಿದೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಪ್ರಕಾಶ್ (44)ಮತ್ತುಉಮಾ (40) ಮೃತ ದಂಪತಿಗಳು ಎಂದು ತಿಳಿದು ಬಂದಿದೆ.
ಹರಿಹರದ ಉಕ್ಕಡಗಾತ್ರಿ ಅಜ್ಜಯ್ಯನ ದೇವಾಲಯಕ್ಕೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ.
ದಾವಣಗೆರೆ ದಕ್ಷಿಣ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.