
ಚಾಮರಾಜನಗರ: ಸಾಲ ತೀರಿಸಲಾಗದೇ ಮಗನನ್ನೇ ಮಾರಿದ ತಂದೆ
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಬಸವ ಮಾಹಿತಿ ನೀಡಿದ್ದಾನೆ.
Team Udayavani, Sep 21, 2022, 12:50 PM IST

ಚಾಮರಾಜನಗರ: ಹೃದಯದ ಕಾಯಿಲೆಯಿದ್ದ ಹೆಂಡತಿಯ ಚಿಕಿತ್ಸೆಗಾಗಿ ಹಾಗೂ ತಾನು ಮಾಡಿದ್ದ ಸಾಲಗಳನ್ನು ತೀರಿಸಲು 20 ದಿನಗಳ ಗಂಡು ಮಗುವನ್ನೇ ತಂದೆಯೋರ್ವ ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ನಗರದ ಹೋಟೆಲ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬಸವ ಎಂಬಾತ ಮಗುವನ್ನು ಬೆಂಗಳೂರಿನ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದು ಆತನನ್ನು ಬಂಧಿಸಿರುವ ಪೊಲೀಸರು ಮಗುವನ್ನು ಕೊಂಡಿರುವ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಮಗುವಿನ ತಾಯಿ ಸ್ವಾಧಾರ ಕೇಂದ್ರದಲ್ಲಿರಲು ಒಪ್ಪದ ಕಾರಣ ಆಕೆಯ ಪೋಷಕರ ಜತೆಯಲ್ಲಿದ್ದಾಳೆ.
ನಗರದ ಹೋಟೆಲ್ ಕಾರ್ಮಿಕ ಬಸವ ಹಾಗೂ ಆತನ ಪತ್ನಿ ನಾಗವೇಣಿಗೆ 7 ವರ್ಷದ ಗಂಡು ಮಗುವಿದ್ದು, 25 ದಿನಗಳ ಹಿಂದೆ ಇನ್ನೊಂದು ಮಗು ಜನಿಸಿತ್ತು. ಬಡತನ, ಸಾಲದ ಹೊರೆ, ಹೆಂಡತಿಯ ಹೃದಯದ ಕಾಯಿಲೆ ಕಾರಣ, ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಮಗುವನ್ನು ಸಾಕುವ ಶಕ್ತಿ ನನಗಿರಲಿಲ್ಲ.
ಹಣದ ಸಮಸ್ಯೆ ಕುರಿತು ನನ್ನ ಸಹ ಕಾರ್ಮಿಕ ಖಾಸಿಂ ಎಂಬುವವನ ಬಳಿ ಹೇಳಿಕೊಂಡಿದ್ದೆ. ಮಗುವನ್ನು ಮಾರಾಟ ಮಾಡಲು ಸಿದ್ದವಿದ್ದೇನೆ. ಯಾರಾದರೂ ಇದ್ದರೆ ಹೇಳು ಎಂದಿದ್ದೆ. ಆದರೆ, ನನ್ನ ಬಲವಂತಕ್ಕೆ ಮಣಿದು ಮಗು ಅಗತ್ಯ ಇದ್ದ ಬೆಂಗಳೂರು ಮೂಲದವರಿಗೆ ಮಗುವನ್ನು ಕೊಡಿಸಿದ. ಅವರ ಬಳಿ 50 ಸಾವಿರ ರೂ. ಪಡೆದಿದ್ದೇನೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಬಸವ ಮಾಹಿತಿ ನೀಡಿದ್ದಾನೆ. ಪತ್ನಿ ನಾಗವೇಣಿ ಮಗುವನ್ನು ಕೊಡಲು ನಿರಾಕರಿಸಿದ್ದಾಳೆ. ಅನಿವಾರ್ಯವಾಗಿ ಖಾಲಿ ಪೇಪರ್ ಮೇಲೆ ಆಕೆ ಸಹಿ ಪಡೆದು ಮಗುವನ್ನು ಮಾರಾಟ ಮಾಡಲಾಗಿದೆ. ಈ ವಿಚಾರವಾಗಿ ನಾಗವೇಣಿಯು ಹೇಳಿಕೆ ದಾಖಲಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರಳಿ ವಿಜಯ್

ಸಲಿಂಗ ವಿವಾಹ : ಅರ್ಜಿಗಳ ಸಮೂಹ ಸುಪ್ರೀಂಗೆ ಸಲ್ಲಿಸಿದ ದೆಹಲಿ ಹೈಕೋರ್ಟ್

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ