ನ್ಯೂಜಿಲ್ಯಾಂಡಿನ ಮಾಜಿ ಆಲ್ರೌಂಡರ್ ಕ್ರಿಸ್ ಕೇರ್ನ್ಸ್ ಗೆ ಪಾರ್ಶ್ವವಾಯು
Team Udayavani, Aug 28, 2021, 7:40 AM IST
ವೆಲ್ಲಿಂಗ್ಟನ್ : ಸಿಡ್ನಿಯಲ್ಲಿ ನಡೆದ ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ನ್ಯೂಜಿಲ್ಯಾಂಡಿನ ಮಾಜಿ ಆಲ್ರೌಂಡರ್ ಕ್ರಿಸ್ ಕೇರ್ನ್ಸ್ ಇನ್ನೊಂದು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಎರಡೂ ಕಾಲುಗಳು ಪಾರ್ಶ್ವವಾಯುಗೀಡಾಗಿವೆ ಎಂದು ತಿಳಿದು ಬಂದಿದೆ.
“ಸಿಡ್ನಿಯಲ್ಲಿ ನಡೆಸಲಾದ ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕ್ರಿಸ್ ಕೇರ್ನ್ಸ್ ಬೆನ್ನುಮೂಳೆಯಲ್ಲಿ ಪಾರ್ಶ್ವವಾಯು ಸಂಭವಿಸಿತ್ತು. ಇದರ ಪರಿಣಾಮದಿಂದ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ’ ಎಂದು ಕೇರ್ನ್ಸ್ ಕುಟುಂಬದ ಮೂಲಗಳು ತಿಳಿಸಿದೆ.
ಹೃದಯಾಘಾತದ ಬಳಿಕ ಕ್ರಿಸ್ ಕೇರ್ನ್ಸ್ ಬದುಕಿ ಉಳಿದದ್ದೇ ಪವಾಡವಾಗಿತ್ತು. ಆಗ ಅವರಿಗೆ ವೆಂಟಿಲೇಟರ್ ಹಾಗೂ ಇನ್ನಿತರ ಜೀವರಕ್ಷಕ ಪರಿಕರಗಳನ್ನು ಅಳವಡಿಸಲಾಗಿತ್ತು.