
ವಿಶೇಷ ಅನುದಾನಕ್ಕೆ ಸಿಎಂ ಪತ್ರ
5,495 ಕೋಟಿ ರೂ. ನೀಡುವಂತೆ ಮನವಿ; ವಿತ್ತ ಸಚಿವೆಗೆ ಮುಖ್ಯಮಂತ್ರಿ ದೂರ ವಾಣಿ ಕರೆ
Team Udayavani, Feb 8, 2020, 6:44 AM IST

ಬೆಂಗಳೂರು: ಕೇಂದ್ರ ಸರಕಾರವು ರಾಜ್ಯಕ್ಕೆ 5,495 ಕೋ.ರೂ. ವಿಶೇಷ ಅನುದಾನ ನೀಡಲು ನಿರಾಕರಿಸಿರುವುದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ವಿಶೇಷ ಅನುದಾನ ನೀಡಲು ಒಪ್ಪಿಗೆ ನೀಡುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ ಅವರೊಂದಿಗೆ ದೂರವಾಣಿ ಸಂಭಾಷಣೆಯನ್ನೂ ನಡೆಸಿರುವ ಬಿಎಸ್‌ವೈ, ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಶೀಘ್ರ ಒಪ್ಪಿಗೆ ದೊರೆಯದಿದ್ದರೆ ತಮ್ಮ ಉದ್ದೇಶಿತ ದಿಲ್ಲಿ ಪ್ರವಾಸದ ವೇಳೆ ಖುದ್ದಾಗಿ ಅವರನ್ನು ಭೇಟಿಯಾಗಿ ಕೋರಿಕೆ ಸಲ್ಲಿಸುವ ಚಿಂತನೆ ಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಬಿಎಸ್‌ವೈ ತಮ್ಮ ದೂರವಾಣಿ ಸಂಭಾಷಣೆಯ ಸಂದರ್ಭ ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ವಿಶೇಷ ಅನುದಾನ ನೀಡಿ ಆರ್ಥಿಕ ಸಹಕಾರ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಎನ್.ಕೆ. ಸಿಂಗ್ ಅವರೊಂದಿಗೂ ಮಾತುಕತೆ ನಡೆಸಿ, ರಾಜ್ಯಕ್ಕೆ ಕೊರತೆಯಾಗಲಿರುವ ಮೊತ್ತವನ್ನು ವಿಶೇಷ ಅನುದಾನ ರೂಪದಲ್ಲಿ ನೀಡುವ ಬಗ್ಗೆ ಮರು ಶಿಫಾರಸು ಮಾಡುವಂತೆಯೂ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಸತ್ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಯಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರೀಯ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನಕ್ಕಾಗಿ ಪತ್ರಿಸುವ ಮೂಲಕ ಅನುದಾನ ಪಡೆಯುವ ಕಸರತ್ತನ್ನು ಸಿಎಂ ನಡೆಸಿದ್ದಾರೆ. ಇದಕ್ಕೆ ಕೇಂದ್ರ ಮತ್ತು ಆಯೋಗ ಯಾವ ರೀತಿ ಸ್ಪಂದಿಸ ಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಕೇಂದ್ರ ತಿರಸ್ಕಾರ
2020-21ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ಮೊತ್ತ ತೀರಾ ಕಡಿಮೆ. ಹೀಗಾಗಿ ಆಯೋಗವು ಕೊರತೆಯಾಗಲಿರುವ ಮೊತ್ತವನ್ನು ವಿಶೇಷ ಅನುದಾನ ರೂಪದಲ್ಲಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಇದನ್ನು ತಿರಸ್ಕರಿಸಿ, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಸೂಚಿಸಿದೆ.
ವರದಿ ಪ್ರಕಟಿಸಿದ್ದ “ಉದಯವಾಣಿ’
ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂಬ ಆಯೋಗದ ಶಿಫಾರಸನ್ನು ಕೇಂದ್ರವು ತಿರಸ್ಕರಿಸಿ ಪುನರ್ ಪರಿಶೀಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ವಿಶೇಷ ಅನುದಾನ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿರುವ ಬಗ್ಗೆ “ಉದಯವಾಣಿ’ ಫೆ. 5ರಂದು ವಿಶೇಷ ವರದಿ ಪ್ರಕಟಿಸಿತ್ತು.
- ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Railways: ಗಾಲಿಕುರ್ಚಿ ಬಳಸುವವರಿಗೆ ರೈಲಿನಲ್ಲಿ ರ್‍ಯಾಂಪ್

ಮೋದಿ OBC ಅಸ್ತ್ರ: ಒಬಿಸಿಯಾಗಿದ್ದಕ್ಕೇ ನನ್ನ ಕಂಡರೆ ಕಾಂಗ್ರೆಸ್‌ಗೆ ದ್ವೇಷ

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು