ಉಡುಪಿ ಹಸುರು ಜಿಲ್ಲೆಯಾಗಿ ಘೋಷಣೆಗೆ ಕ್ಷಣಗಣನೆ


Team Udayavani, Apr 28, 2020, 5:15 AM IST

ಉಡುಪಿ ಹಸುರು ಜಿಲ್ಲೆಯಾಗಿ ಘೋಷಣೆಗೆ ಕ್ಷಣಗಣನೆ

ಉಡುಪಿ: ಕೋವಿಡ್ 19 ಪಾಸಿಟಿವ್‌ ಪ್ರಕರಣಗಳಿಲ್ಲದೆ 28 ದಿನಗಳಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಹಸುರು ವಲಯದ ಪಟ್ಟಿಗೆ ಸೇರ್ಪಡೆಯಾಗಿದೆ. ಆದರೆ ಅಧಿಕೃತ ಘೋಷಣೆಯನ್ನು ರಾಜ್ಯ ಸರಕಾರ ಇನ್ನಷ್ಟೇ ಮಾಡಬೇಕಾಗಿದೆ. ಪ್ರಾಯಃ ಮಂಗಳವಾರ ಅಧಿಕೃತ ಘೋಷಣೆ ಸಾಧ್ಯತೆಗಳಿವೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯದ ನಕಾಶೆ ಹರಿದಾಡುತ್ತಿದ್ದು ಇದರಲ್ಲಿ ಉಡುಪಿ ಜಿಲ್ಲೆ ಹಸುರು ವಲಯದಲ್ಲಿರುವುದು ಕಂಡುಬಂದಿದೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಹಸುರು ಜಿಲ್ಲೆಯಾಗಿ ಸೇರಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದರು.

ಹಸುರು ಜಿಲ್ಲೆಯಾಗಿ ಘೋಷಣೆ ಮಾಡಲು ನಮಗೆ ಎಲ್ಲ ರೀತಿಯ ಅರ್ಹತೆಗಳೂ ಇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ. ಅಧಿಕೃತ ಆದೇಶವನ್ನು ಜಿಲ್ಲಾಡಳಿತ ಮಂಗಳವಾರ ಹೊರಡಿಸಲಿದೆ.

ನಿರ್ಬಂಧ ಮುಂದುವರಿಕೆ
– ಅಂಗಡಿ ಮುಂಗಟ್ಟುಗಳು ಇದುವರೆಗೆ ಇರುವಂತೆ ಬೆಳಗ್ಗೆ 7ರಿಂದ ಬೆಳಗ್ಗೆ 11 ಗಂಟೆವರೆಗೆ ಮಾತ್ರ ತೆರೆದುಕೊಳ್ಳಲು ಅವಕಾಶ.
– ಹೊಟೇಲ್‌ಗ‌ಳು ತೆರೆದುಕೊಳ್ಳ ಬಹುದಾದರೂ ಪಾರ್ಸೆಲ್‌ ಕೊಂಡೊಯ್ಯಲು ಮಾತ್ರ ಅವಕಾಶ.
– ಲಾಡ್ಜ್, ದೇವಸ್ಥಾನ, ಮಾಲ್‌, ಸಿನೆಮಾಗೃಹ, ಶಾಪಿಂಗ್‌ ಕಾಂಪ್ಲೆಕ್ಸ್‌, ಹವಾನಿಯಂತ್ರಿತ ಮಳಿಗೆಗಳು, ಚಿನ್ನಾಭರಣಗಳ ಅಂಗಡಿಗಳು, ಮಲ್ಟಿ ಬ್ರ್ಯಾಂಡೆಡ್‌ ಶಾಪ್‌, ಸೆಲೂನ್‌ ಅಂಗಡಿಗಳು ತೆರೆಯುವಂತಿಲ್ಲ.
– ಯಾವುದೇ ಸಮಾರಂಭಗಳನ್ನು ನಡೆಸುವಂತಿಲ್ಲ.
– ಯಾಂತ್ರೀಕೃತ ಮೀನುಗಾರಿಕೆ ಇಲ್ಲ.

ವಿಶೇಷ ವಿನಾಯಿತಿಗಳು
– ಶಾಪ್ಸ್‌ ಆ್ಯಂಡ್‌ ಎಸ್ಟಾಬ್ಲಿಷ್ಮೆಂಟ್‌ ಆ್ಯಕ್ಟ್ ಪ್ರಕಾರ ಯಾರ್ಯಾರು ಪರವಾನಿಗೆ ಪಡೆದಿರುತ್ತಾರೋ ಅವರಿಗೆ ಅಂಗಡಿ ತೆರೆಯಲು ಅವಕಾಶಗಳಿವೆ. ಆದರೆ ಕೆಲವೊಂದಕ್ಕೆ ನಿರ್ಬಂಧವಿದೆ.
– ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ.
– ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶವಿದ್ದರೂ ಕಾರ್ಮಿಕರ ಸಂಚಾರ ನಿರ್ಬಂಧ.
– ಕೈಗಾರಿಕೆಗಳು ಕಾರ್ಯಾಚರಿಸಲು ಅವಕಾಶವಿದೆ.
– ಮೊಬೈಲ್‌ ರೀಚಾರ್ಜ್‌ ಅಂಗಡಿ ತೆರೆಯಬಹುದು ಮತ್ತು
ಪರವಾನಿಗೆ ಇರುವ ಮೊಬೈಲ್‌ ಶಾಪ್‌ಗ್ಳೂ ತೆರೆಯಬಹುದು.
– ಮರಳುಗಾರಿಕೆ, ಕ್ರಷರ್‌ ಉತ್ಪಾದನೆಗೆ ಅವಕಾಶವಿದೆ.

ನಿರ್ಮಾಣ ಚಟುವಟಿಕೆ ಆರಂಭ
ಉಡುಪಿ ಜಿಲ್ಲೆ ಹಸುರು ವಲಯಕ್ಕೆ ಸಮೀಪಿಸುತ್ತಿರು ವುದರಿಂದ ಮುಂದಿನ ಯೋಜನೆ ಮತ್ತು ಕೆಲವೊಂದು ನಿರ್ಬಂಧಿತ ಚಟುವಟಿಕೆಗಳ ಸಡಿಲಿಕೆ ಕುರಿತು ಶಾಸಕ ಕೆ. ರಘುಪತಿ ಭಟ್‌ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.
ಜಗದೀಶ್‌ ಅವರಲ್ಲಿ ಚರ್ಚಿಸಿದರು.

ಪ್ರಮುಖವಾಗಿ ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿಗಳ ದೈನಂದಿನ ಸಮಸ್ಯೆಯ ಬಗ್ಗೆ ಹಾಗೂ ಅವರ ಆರ್ಥಿಕ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಕಟ್ಟಡ ನಿರ್ಮಾಣವನ್ನು ರಾಜ್ಯ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾಮಗಾರಿ ಗಳನ್ನು ನಿರ್ವಹಿಸುವಂತೆ ರಾಜ್ಯ ಸರಕಾರದ ಆದೇಶ ವಿದ್ದು ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಬೆಳಗ್ಗೆ 11ರ ವರೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳ ಅಂಗಡಿಯಾದ ಹಾರ್ಡ್‌ವೇರ್‌ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪೂರಕ ಸಾಮಗ್ರಿಗಳ ಅಂಗಡಿಯನ್ನು ತೆರೆಯುವ ಬಗ್ಗೆ ತೀರ್ಮಾನಿಸಲಾಯಿತು.

ಉಡುಪಿ ಜಿಲ್ಲೆ : 15 ಮಾದರಿಗಳ ಸಂಗ್ರಹ
ಉಡುಪಿ: ಕೋವಿಡ್ 19 ತಪಾಸಣೆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸೋಮವಾರ 15 ಜನರ ಮಾದರಿಗಳನ್ನು ಸಂಗ್ರಹಿಸ ಲಾಗಿದೆ. ಅವರಲ್ಲಿ ತೀವ್ರ ಉಸಿರಾಟದ ಐವರು, ಕೋವಿಡ್ 19 ಶಂಕಿತರು ಇಬ್ಬರು, ಫ‌ೂÉ é ಜ್ವರ ಲಕ್ಷಣದ 8 ಮಂದಿ ಇದ್ದಾರೆ.

16 ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿವೆ. 40 ಜನರ ವರದಿಗಳು ಇನ್ನಷ್ಟೇ ಬರಬೇಕು. 8 ಮಂದಿ ಐಸೊಲೇಶನ್‌ ವಾರ್ಡ್‌ಗೆ ಸೇರ್ಪಡೆಯಾಗಿದ್ದು ಅವರಲ್ಲಿ 7 ಮಂದಿ ತೀವ್ರ ಉಸಿರಾಟದ ಸಮಸ್ಯೆಯವರು, ಮತ್ತೂಬ್ಬರು ಫ‌ೂÉ é ಜ್ವರ ಲಕ್ಷಣದವರು. 17 ಮಂದಿ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದು ಪ್ರಸ್ತುತ 47 ಮಂದಿ ವಾರ್ಡ್‌ನಲ್ಲಿದ್ದಾರೆ.

11 ಮಂದಿ ಹೆಸರು ನೋಂದಣಿ ಮಾಡಿದ್ದಾರೆ. 36 ಮಂದಿ 28 ದಿನಗಳ, 64 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. 521 ಮಂದಿ ಗೃಹ ನಿಗಾದಲ್ಲಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ಗೆ ಆರು ಮಂದಿ ಸೇರಿದ್ದು ಮೂವರು ಬಿಡುಗಡೆಗೊಂಡಿದ್ದಾರೆ. 27 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.