ಕಮಿಷನರ್ ದಾಳಿ ವೇಳೆ ಪಬ್‌ನಿಂದ ಕೆಳಬಿದ್ದ ಜೋಡಿ ಸಾವು
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಪಬ್‌ನಲ್ಲಿ ರಾತ್ರಿ ನಡೆದ ಅವಘಡ ...
Team Udayavani, Jun 22, 2019, 9:23 AM IST
ಬೆಂಗಳೂರು: ನರಗದ ಚರ್ಚ್ ಸ್ಟ್ರೀಟ್‌ನಲ್ಲಿರುವ ಪಬ್‌ವೊಂದರ 3 ನೇ ಮಹಡಿಯಿಂದ ಕೆಳ ಬಿದ್ದು ಡೇಟಿಂಗ್ ಮಾಡುತ್ತಿದ್ದ ಜೋಡಿಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಈ ಅವಘಡ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ನೈಟ್ ರೌಂಡ್ಸ್‌ಗಾಗಿ ತೆರಳಿದ್ದ ವೇಳೆ ಅವರ ಸಮ್ಮುಖದಲ್ಲೇ ನಡೆದಿದೆ.
ಮೃತ ಜೋಡಿ ಪವನ್ ಹಾಗೂ ವೇದಾ ಎನ್ನುವರಾಗಿದ್ದಾರೆ. ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ದಾಳಿ ನಡೆಸಿದ್ದ ವೇಳೆ ಜೋಡಿ ಕಟ್ಟಡದ 3 ನೇ ಮಹಡಿಯಿಂದ ಆಯತಪ್ಪಿ ಕೆಳ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪವನ್ ಹಾಗೂ ವೇದಾ ಇಬ್ಬರಿಗೂ ವಿವಾಹವಾಗಿದ್ದು ಪತ್ನಿ ಮತ್ತು ಪತಿಯಿಂದ ದೂರವಾಗಿದ್ದ ಇಬ್ಬರು ಡೇಟಿಂಗ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.
ಪವನ್ ಪ್ರತಿಷ್ಠಿತ ಪತ್ರಿಕೆಯೊಂದರ ಮಾರ್ಕೆಟಿಂಗ್ ವಿಭಾಗದ ಉದ್ಯೋಗಿಯಾಗಿದ್ದು, ವೇದಾ ಐಟಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕೆಳಬಿದ್ದ ಹೊಡೆತಕ್ಕೆ ಇಬ್ಬರ ತಲೆಯಿಂದ ರಕ್ತ ಸ್ರಾವವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇಬ್ಬರು ಕೆಳ ಬೀಳುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಬ್‌ನ ಕಿಟಕಿಯಿಂದ ಇಬ್ಬರು ಕೆಳ ಬಿದ್ದಿರುವುದಾಗಿ ತಿಳಿದು ಬಂದಿದೆ.ಪಬ್‌ನಲ್ಲಿ ಸುರಕ್ಷತೆಗೆ ಗಮನ ಹರಿಸದ ಕಾರಣದಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕಮಿಷನರ್ ದಾಳಿ
ನಗರದಲ್ಲಿ ಕೆಲ ಪಬ್‌ಗಳನ್ನು ಅನುಮತಿಯಿಲ್ಲದೆ ನಡೆಸಲಾಗುತ್ತಿದೆ ಮತ್ತು ಡಿಜೆ ಬಳಸಿ ಶಬ್ಧ ಮಾಲಿನ್ಯ ಮಾಡಲಾಗುತ್ತಿದೆ ಎನ್ನುವ ದೂರಿನನ್ವಯ ಹೈಕೋರ್ಟ್ ಆದೇಶದ ಮೇರೆಗೆ ಕಮಿಷನರ್ ನಗರದಲ್ಲಿ ಪಬ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು.