
30 ಕೋತಿ ಮೇಲೆ ಲಸಿಕೆ ಪ್ರಯೋಗ? ಎನ್‌ಐವಿಯಲ್ಲಿ ನಡೆಯಲಿದೆ ಟ್ರಯಲ್
Team Udayavani, Jun 4, 2020, 5:30 AM IST

ಸಾಂದರ್ಭಿಕ ಚಿತ್ರ.
ಪುಣೆ: ವೈರಸ್‌ಗೆ ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ವಿವಿಧ ದೇಶಗಳೊಂದಿಗೆ ಭಾರತವೂ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯು ಲಸಿಕೆಯ ಪ್ರಯೋಗಕ್ಕೆ 30 ಕೋತಿಗಳ ಬಳಕೆಗೆ ಅನುಮತಿ ನೀಡಿದೆ.
3 ರಿಂದ 4ರ ವಯೋಮಾನದ 30 ಹೆಣ್ಣು ಕೋತಿಗಳನ್ನು ಪುಣೆಯ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಸದ್ಯದಲ್ಲೇ ಹಸ್ತಾಂತರಿಸಲಾಗುತ್ತದೆ. ಪುಣೆಯ ವಡ ಗಾಂವ್ ಅರಣ್ಯ ಪ್ರದೇಶ ದಿಂದ ಈ ಕೋತಿಗಳನ್ನು ಹಿಡಿದು ತಂದು, ಇವುಗಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮಂಗಗಳನ್ನು ಹಿಡಿಯುವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆಯು ವೈರಾಲಜಿ ಸಂಸ್ಥೆಗೆ ಸಹಾಯ ಮಾಡಲಿದ್ದು, ಸಂಸ್ಥೆಯ ಸಿಬಂದಿಯೇ ಕೋತಿಗಳನ್ನು ಹಿಡಿದು ತರಬೇಕಿದೆ. ಈ ಕುರಿತು ಮಾಹಿತಿ ನೀಡಿ ರುವ ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಥೋಡ್, ಕೋತಿಗಳ ಮೇಲೆ ಲಸಿಕೆಯ ಪ್ರಯೋಗ ನಡೆಸಲು ನಾವು ಅನುಮತಿ ನೀಡಿದ್ದೇವೆ. ಅವುಗಳ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಯಾಗಬಾರದು ಮತ್ತು ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದ್ದೇನೆ. ಜತೆಗೆ, ಈ ಪ್ರಾಜೆಕ್ಟ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬ ಷರತ್ತನ್ನೂ ಹಾಕಲಾಗಿದೆ ಎಂದಿದ್ದಾರೆ.
ದೇಶಾದ್ಯಂತ ಸದ್ಯ 10ಕ್ಕೂ ಹೆಚ್ಚು ಲಸಿಕೆ ಗಳ ಪ್ರಯೋಗ ನಡೆಯುತ್ತಿದೆ. ಮುಂದಿನ 3ರಿಂದ 6 ತಿಂಗಳೊಳಗಾಗಿ ಸುಮಾರು 4 ಲಸಿಕೆಗಳು ಕ್ಲಿನಿಕಲ್ ಪ್ರಯೋಗದ ಹಂತಕ್ಕೆ ತಲುಪಲಿವೆ ಎಂದು ಕಳೆದ ವಾರವಷ್ಟೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goaಕ್ಕೆ ಪ್ರವಾಸಕ್ಕೆಂದು ತೆರಳಿದ್ದ ತುಮಕೂರಿನ ಯುವಕ ಆತ್ಮಹತ್ಯೆ

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Tragic: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನವ ವಿವಾಹಿತರು ಸೇರಿ ನಾಲ್ವರು ಸಜೀವ ದಹನ

Chennai: ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ; ಮಹಿಳೆಗೆ ಕಿರುಕುಳ ನೀಡಿದ ಟೆಕ್ಕಿ ಬಂಧನ

Yamuna; ಈಜಿ ದಾಖಲೆ- ಕೇವಲ 11 ನಿಮಿಷದಲ್ಲಿ ಯಮುನಾ ನದಿಯನ್ನು ದಾಟಿದ ಬಾಲಕಿ!