
ಚಂಡೀಗಢ: ರೈತರ ಜತೆ ಗೋವಿನದ್ದೂ “ಪ್ರತಿಭಟನೆ’
Team Udayavani, Jun 8, 2021, 7:05 AM IST

ಚಂಡೀಗಢ: ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೊಹೊನಾ ಕ್ಷೇತ್ರದ ಶಾಸಕ, ಜನನಾಯಕ ಜನತಾ ಪಾರ್ಟಿಯ ಮುಖಂಡ ದೇವೇಂದ್ರ ಸಿಂಗ್ ಬಬ್ಲಿ ನಿವಾಸದ ಮುಂದೆ ಪ್ರತಿಭಟಿಸಿದ್ದ ರೈತರಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಅಂಥ ಕ್ರಮ ಕೈಗೊಂಡ ಪೊಲೀಸರೇ ಈಗ ಪೇಚಿಗೆ ಸಿಕ್ಕಿದ್ದಾರೆ.
ಎರಡು ಎಕರೆ ಠಾಣೆಯ ಆವರಣದಲ್ಲಿ 60ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಶಾಮಿಯಾನ ಹಾಕಿ ಠಿಕಾಣಿ ಹೂಡಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಅವರ ಗುಂಪಿನಲ್ಲೊಬ್ಬ ರೈತ ಸ್ಥಳಕ್ಕೆ ಮನೆಯಲ್ಲಿದ್ದ ದನವನ್ನೂ ಕರೆತಂದಿದ್ದಾನೆ. ಜತೆಗೆ ಠಾಣೆಯ ಮುಂದೆ ಇದ್ದ ಗೂಟಕ್ಕೆ ಕಟ್ಟಿದ್ದಾನೆ. ಮನೆಯಲ್ಲಿ ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲದ್ದರಿಂದ ಕರೆದುಕೊಂಡು ಬಂದೆ ಎಂದು ಆತ ಹೇಳಿದ್ದಾನೆ.
ದನಕ್ಕೆ ಪಶು ಆಹಾರ, ನೀರು ಕೊಡುವುದು ಪೊಲೀಸರ ಹೊಣೆ. ಹರಿಯಾಣದಲ್ಲಿರುವ ಸರಕಾರ ಗೋವುಗಳನ್ನು ರಕ್ಷಿಸುತ್ತದೆ ಎಂದು ಹೇಳಿಕೊಳ್ಳುತ್ತಿದೆ. ಹೀಗಾಗಿಯೇ ಪವಿತ್ರ ಮತ್ತು ಸಾಧು ಪ್ರಾಣಿಯನ್ನು ಕರೆತಂದಿದ್ದೇವೆ ಎಂದು ಸ್ಥಳದಲ್ಲಿರುವ ರೈತರು ಹೇಳಿದ್ದಾರೆ.
ಪ್ರತಿಭಟನ ನಿರತ ರೈತರಿಗೆ ಸದರ್ ಎಂಬ ಸ್ಥಳದಲ್ಲಿರುವ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಗ್ರಾಮಸ್ಥರು ಊಟ, ಉಪಚಾರ ಪೂರೈಸುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
