ಈಗ ಡೆಲ್ಟಾ ಪ್ಲಸ್‌ ಅಬ್ಬರ : ಮಹಾರಾಷ್ಟ್ರ, ಕೇರಳ, ಮ.ಪ್ರದೇಶದಲ್ಲಿ ಹೊಸ ರೂಪಾಂತರಿ ಹಾವಳಿ

Team Udayavani, Jun 23, 2021, 8:30 AM IST

ಈಗ ಡೆಲ್ಟಾ ಪ್ಲಸ್‌ ಅಬ್ಬರ : ಮಹಾರಾಷ್ಟ್ರ, ಕೇರಳ, ಮ.ಪ್ರದೇಶದಲ್ಲಿ ಹೊಸ ರೂಪಾಂತರಿ ಹಾವಳಿ

ಹೊಸದಿಲ್ಲಿ: ಎರಡನೇ ಅಲೆಯಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಕೊರೊನಾ ಸೋಂಕಿನ “ಡೆಲ್ಟಾ’ ರೂಪಾಂತ­ರಿಯು ಈಗ ಹೊಸ ಅವತಾರ ತಾಳಿ “ಡೆಲ್ಟಾ ಪ್ಲಸ್‌’ ಎಂಬ ಹೆಸರಿನೊಂದಿಗೆ ವಕ್ಕರಿಸಿದೆ. ಆತಂಕಕಾರಿ ವಿಚಾರವೆಂದರೆ, ಲಸಿಕೆ ಹಾಗೂ ಕೋವಿಡ್‌ನಿಂದಾಗಿ ಮನುಷ್ಯನು ಪಡೆದ ಪ್ರತಿಕಾಯದ ಶಕ್ತಿಯನ್ನೂ ನಾಶ ಮಾಡುವ ಸಾಮರ್ಥ್ಯ ಈ ರೂಪಾಂತರಿಗಿದೆ. ಹೀಗಾಗಿ ಡೆಲ್ಟಾ ಪ್ಲಸ್‌(ಎವೈ.1 ರೂಪಾಂತರಿ ಅಥವಾ ಬಿ.1.617.2.1) ಅನ್ನು ಕೊರೊನಾದ ಅತ್ಯಂತ ಅಪಾಯಕಾರಿ ಸ್ವರೂಪ ಎಂದು ವಿಜ್ಞಾನಿಗಳು ಬಣ್ಣಿಸಿ­ದ್ದಾರೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ಈ ರೂಪಾಂತರಿಯು ಸದ್ದು ಮಾಡಲಾರಂಭಿಸಿದೆ.

ಎಲ್ಲೆಲ್ಲಿ ಎಷ್ಟು?: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ನ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ. ಕೇರಳದಲ್ಲಿ ಪಾಲಕ್ಕಾಡ್‌ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಂದ ಸಂಗ್ರಹಿಸ ಲಾದ ಮಾದರಿಗಳಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಪಾಲಕ್ಕಾಡ್‌ನ‌ಲ್ಲಿ ಇಬ್ಬರಿಗೆ, ಪತ್ತನಂತಿಟ್ಟದಲ್ಲಿ 4 ವರ್ಷದ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಮಧ್ಯ ಪ್ರದೇಶದಲ್ಲಿ ಈಗಾಗಲೇ ಎರಡೂ ಡೋಸ್‌ ಲಸಿಕೆ ಪಡೆದಿರುವ ಮತ್ತು ಕೊರೊನಾ ವಾಸಿಯಾಗಿದ್ದ 65 ವರ್ಷದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್‌ ಕಾಣಿಸಿಕೊಂಡಿದೆ.

ರೋಗ ನಿರೋಧಕ ಶಕ್ತಿಗೇ ಸಡ್ಡು: ಲಸಿಕೆಯಿಂದ ಪಡೆದಿರುವ ಹಾಗೂ ಸೋಂಕಿನಿಂದಾಗಿ ಗಳಿಸಿಕೊಂಡಿ­ರುವ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುವಷ್ಟು ಬಲಶಾಲಿಯಾಗಿದೆ ಡೆಲ್ಟಾ ಪ್ಲಸ್‌. ಈ ರೂಪಾಂತರಿಯು ಅಸಲಿ ಡೆಲ್ಟಾ ರೂಪಾಂತರಿಯ ಎಲ್ಲ ಗುಣವಿಶೇಷಗಳನ್ನೂ ಹೊಂದಿದೆ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಬೀಟಾ ರೂಪಾಂತರಿಯ ಲಕ್ಷಣಗಳನ್ನೂ ಹೊಂದಿದೆ. ಇದರಿಂದಾಗಿಯೇ ಇದು ಹೆಚ್ಚು ಅಪಾಯ­ಕಾರಿ­ಯಾಗಿ ಪರಿಣಮಿಸಿದೆ. ಈ ಹಿಂದೆ ಆಸ್ಟ್ರಾಜೆನೆಕಾ ಲಸಿಕೆಗಳನ್ನು ದ.ಆಫ್ರಿಕಾಗೆ ಒಯ್ದಾಗ, ಇದು ಅಲ್ಲಿರುವ ರೂಪಾಂತರಿಗೆ ಒಗ್ಗುವುದಿಲ್ಲ ಎಂದು ಹೇಳಿ ಲಸಿಕೆಗಳನ್ನು ಅಲ್ಲಿನ ಸರಕಾರ ವಾಪಸ್‌ ಕಳುಹಿಸಿತ್ತು.

3ನೇ ಅಲೆಗೆ ನಂಟು?: ಅದನ್ನು ಈಗಲೇ ಹೇಳಲಾಗದು ಎನ್ನುತ್ತಾರೆ ದೇಶದ ಖ್ಯಾತ ವೈರಾಲಜಿಸ್ಟ್‌ ಪ್ರೊ| ಶಾಹಿದ್‌ ಜಮೀಲ್‌. ಆದರೆ 2ನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಿಸಿದ ವೇಗ ನೋಡಿದರೆ, 3ನೇ ಅಲೆಯಲ್ಲಿ ಡೆಲ್ಟಾ ಪ್ಲಸ್‌ ಕೂಡ ವ್ಯಾಪಿಸುವ ಸಾಧ್ಯತೆಯನ್ನು ತಳ್ಳಿಹಾಕು ವಂತಿಲ್ಲ. ಹೀಗಾಗಿ ನಾವು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

ಕುಡಿಯುವ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

crime (2)

Goaಕ್ಕೆ ಪ್ರವಾಸಕ್ಕೆಂದು ತೆರಳಿದ್ದ ತುಮಕೂರಿನ ಯುವಕ ಆತ್ಮಹತ್ಯೆ

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್‌ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್‌ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Madhya Pradesh: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನಾಲ್ವರು ಸಜೀವ ದಹನ

Tragic: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನವ ವಿವಾಹಿತರು ಸೇರಿ ನಾಲ್ವರು ಸಜೀವ ದಹನ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಕುಡಿಯುವ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು