
French Open 2023: ಜೊಕೋ-ಕಶನೋವ್ ಕ್ವಾರ್ಟರ್ ಫೈನಲ್
Team Udayavani, Jun 5, 2023, 6:50 AM IST

ಪ್ಯಾರಿಸ್: ರಷ್ಯಾದ ಕರೆನ್ ಕಶನೋವ್ 2023ರ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಆಟಗಾರನಾಗಿ ಮೂಡಿಬಂದರು. ರವಿವಾರ ನಡೆದ 16ರ ಸುತ್ತಿನ ಸ್ಪರ್ಧೆಯಲ್ಲಿ ಅವರು ಇಟಲಿಯ ಲೊರೆಂಜೊ ಸೊನೆಗೊ ಅವರಿಗೆ ಸೋಲುಣಿಸಿದರು.
ರಷ್ಯಾದ 11ನೇ ಶ್ರೇಯಾಂಕದ ಆಟಗಾರ ನಾಗಿರುವ ಕರೆನ್ ಕಶನೋವ್ ಮೊದಲ ಸೆಟ್ ಕಳೆದುಕೊಂಡೂ ಸೊನೆಗೊ ಮೇಲೆ ಸವಾರಿ ಮಾಡಿದರು. ಗೆಲುವಿನ ಅಂತರ 1-6, 6-4, 7-6 (9-7), 6-1.
ಆದರೆ ಕಶನೋವ್ ಅವರ ಕ್ವಾರ್ಟರ್ ಫೈನಲ್ ಸವಾಲು ಸುಲಭದ್ದಲ್ಲ. ಇಲ್ಲಿ ಅವರು ಸೂಪರ್‌ಸ್ಟಾರ್ ಆಟಗಾರ, ಹಾಟ್ ಫೇವರಿಟ್ ಆಗಿರುವ ನೊವಾಕ್ ಜೊಕೋವಿಕ್ ವಿರುದ್ಧ ಆಡಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಜೊಕೋವಿಕ್ ಪೆರುವಿನ ಜುವಾನ್ ಪಾಬ್ಲೊ ವರಿಲ್ಲಸ್ ವಿರುದ್ಧ 6-3, 6-2, 6-2 ಅಂತರದಿಂದ ಗೆದ್ದು ಬಂದರು. ಕೇವಲ ಒಂದು ಗಂಟೆ, 57 ನಿಮಿಷದಲ್ಲಿ ಅವರು ಗೆಲುವು ಸಾರಿದರು.
ಇದು ಜೊಕೋ ಅವರ 17ನೇ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್. ಇದರೊಂದಿಗೆ ಅವರು “ಕ್ಲೇ ಕೋರ್ಟ್ ಕಿಂಗ್” ರಫೆಲ್ ನಡಾಲ್ ಅವರ 16 ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ದಾಖಲೆ ಮುರಿದರು. ರೋಜರ್ ಫೆಡರರ್ 3ನೇ ಸ್ಥಾನದಲ್ಲಿದ್ದಾರೆ (12).
ಜೊಕೋವಿಕ್ ಕಾಣುತ್ತಿರುವ ಸತತ 14ನೇ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಎಂಬುದು ಮತ್ತೂಂದು ದಾಖಲೆ. ರಫೆಲ್ ನಡಾಲ್ ಸತತ 12 ಸಲ ಈ ಸಾಧನೆಗೈದಿದ್ದಾರೆ.
ಹಾಗೆಯೇ ಇದು ಜೊಕೋವಿಕ್ ಎದುರಾಳಿ ಕಶನೋವ್ ಕಾಣುತ್ತಿರುವ ಸತತ 3ನೇ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್. ಇದಕ್ಕೂ ಮುನ್ನ ಕಳೆದ ವರ್ಷದ ಯುಎಸ್ ಓಪನ್, ಈ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಕೂಟದಲ್ಲೂ ಎಂಟರ ಸುತ್ತಿನ ನಂಟು ಬೆಳೆಸಿದ್ದರು.
ಪಾವುಚೆಂಕೋವಾ ಜಯ
ವನಿತಾ ವಿಭಾದದಲ್ಲೂ ರಷ್ಯಾ ಗಮನ ಸೆಳೆಯಿತು. ಇಲ್ಲಿನ ಅನಸ್ತಾಸಿಯಾ ಪಾವುಚೆಂಕೋವಾ ಬೆಲ್ಜಿಯಂನ ಎಲೈಸ್ ಮಾರ್ಟೆನ್ಸ್ ವಿರುದ್ಧ 3 ಸೆಟ್‌ಗಳ ಕಾದಾಟ ನಡೆಸಿ 3-6, 7-6 (7-3), 6-3ರಿಂದ ಗೆದ್ದು ಬಂದರು. ಇವರ ಜಿದ್ದಾಜಿದ್ದಿ ಕಾಳಗ 3 ಗಂಟೆ, 9 ನಿಮಿಷಗಳ ತನಕ ಸಾಗಿತು.
ಆದರೆ ರಷ್ಯದ ಮತ್ತೋರ್ವ ಆಟಗಾರ್ತಿ ಎಲಿನಾ ಅರಾರಟೋವಾ° ಸೋಲನುಭವಿಸಿದರು. ಇವರನ್ನು ಜೆಕ್ ಗಣರಾಜ್ಯದ ಕಾರ್ಲೋನಾ ಮುಖೋವಾ 6-4, 6-3 ಅಂತರದಿಂದ ಹಿಮ್ಮೆಟ್ಟಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ