

Team Udayavani, May 26, 2024, 7:15 AM IST
ಬೆಂಗಳೂರು: ಸಿನೆಮಾ ತಾರೆಗಳು ವರ್ಷಕ್ಕೆ 3-4 ಸಿನೆಮಾ ಮಾಡಬೇಕೆಂದು ಒತ್ತಡ ಹೇರುವಂತಿಲ್ಲ. ಈ ಆಯ್ಕೆ ಅವರವರಿಗೆ ಬಿಟ್ಟದ್ದು ಎಂದು ನಟ-ನಿರ್ದೇಶಕ ರವಿಚಂದ್ರನ್ ಹೇಳಿದ್ದಾರೆ.
ಸಂಕಟದಲ್ಲಿ ಇರುವ ಚಂದನವನಕ್ಕೆ ಸೂಕ್ತ ಪರಿಹಾರ ಹುಡುಕುತ್ತಿ ರುವ ಬೆನ್ನಲ್ಲೇ ರವಿಚಂದ್ರನ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ಮಂದಿರಕ್ಕೆ ಪ್ರೇಕ್ಷಕರು ಬರಬೇಕಾದರೆ ಸ್ಟಾರ್‌ಗಳು ವರ್ಷಕ್ಕೆ 3-4 ಸಿನೆಮಾ ಮಾಡಬೇಕು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, “ಕಾಸು ಕೊಟ್ಟ ತತ್‌ಕ್ಷಣ ಸಿನೆಮಾ ಒಪ್ಪಿಕೊಂಡು ಮಾಡಲು ಸಾಧ್ಯವಿಲ್ಲ. ಕಥೆ ಸಮ್ಮತವಾಗಬೇಕು. ಯಶ್, ದರ್ಶನ್ ವರ್ಷಕ್ಕೆ ಮೂರ್‍ನಾಲ್ಕು ಸಿನೆಮಾ ಮಾಡಿದರೆ ನೀವೇ ಅವರನ್ನು ಎರಡು ವರ್ಷಗಳಲ್ಲಿ ಮನೆ ಕಳುಹಿಸುತ್ತೀರಿ. ಯಾವುದೇ ನಟ ತಮ್ಮದೇ ಆದ ಇಮೇಜ್, ಬ್ರ್ಯಾಂಡ್, ಬಜೆಟ್ ಬಗ್ಗೆ ಯೋಚಿಸುತ್ತಾರೆ. ಹೀಗಿರುವಾಗ ನಾವು ವರ್ಷಕ್ಕೆ 3-4 ಸಿನೆಮಾ ಮಾಡಬೇಕೆಂದು ಒತ್ತಡ ಹಾಕುವಂತಿಲ್ಲ. ಸಿನೆಮಾ ಆಗುವುದು ದುಡ್ಡಿನಿಂದಲ್ಲ, ಒಳ್ಳೆಯ ಕಥೆಯಿಂದ. ಮೊದಲು ಹೀರೋಗಳಿಗೆ ಒಳ್ಳೆಯ ಕಥೆ ರೂಪಿಸಿ ನೀಡಿ’ ಎಂದು ರವಿಚಂದ್ರನ್ ಹೇಳಿದ್ದಾರೆ.
ಕಥೆ ಎಲ್ಲಿಂದ ಬಂದರೇನು?
ಮಲಯಾಳಿ ಸಿನೆಮಾ ಬಗ್ಗೆ ಮಾತನಾಡು ವವರು ಅಲ್ಲಿಯ ಬರಹಗಾರರಿಂದ ಕಥೆ ಬರೆಸಿ ತಂದು ಕನ್ನಡದಲ್ಲಿ ಸಿನೆಮಾ ಮಾಡಲಿ. ಒಳ್ಳೆಯ ಕಥೆ ಎಲ್ಲಿಂದ ಬಂದರೇನಂತೆ ಎಂದು ರವಿಚಂದ್ರನ್ ಪ್ರಶ್ನಿಸಿದರು. ಚಿತ್ರರಂಗದಲ್ಲಿ ಸಮಸ್ಯೆ ಇದೆ ಎನ್ನುತ್ತಾರೆಯೇ ವಿನಾ ಏನು ಸಮಸ್ಯೆ ಇದೆ ಎಂದು ಯಾರೂ ಹೇಳುವುದಿಲ್ಲ ಎಂದರು.
Ad
Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ
ವಿದ್ಯಾರ್ಥಿನಿಯರ ಆತ್ಮಹ*ತ್ಯೆ ಪ್ರಕರಣ; ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ
Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ
RCB: ವಿರಾಟ್ ಕೊಹ್ಲಿ ವಿದೇಶ ಭೇಟಿ ಕಾರಣಕ್ಕೆ ತರಾತುರಿ ವಿಜಯೋತ್ಸವ: ಸಿಐಡಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜತೆ ಸಭೆ ಇಂದಲ್ಲ, ನಾಳೆ
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Kota: ಟಿಲ್ಲರ್‌ನಿಂದ ಟ್ಯಾಕ್ಟರ್ ಕಡೆಗೆ ಮುಖ ಮಾಡಿದ ರೈತರು
Udupi: ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕೃಷಿ ಡ್ರೋನ್ ಪಡೆಯಲು ಅರ್ಜಿ ಆಹ್ವಾನ
Katpadi: ಅಚ್ಚಡ ಸರಕಾರಿ ಶಾಲೆಗೆ ಬೇಕು ಸುರಕ್ಷೆ
Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ
You seem to have an Ad Blocker on.
To continue reading, please turn it off or whitelist Udayavani.