
ಕರಾವಳಿಯಲ್ಲಿ ಪಕ್ಷಗಳ ಸಮಾವೇಶ-ಯಾತ್ರೆಗಳ ಜಾತ್ರೆ
ಕಾರವಾರ-ಕುಮಟಾದಲ್ಲಿ ಅಭ್ಯರ್ಥಿಗಳು ಯಾರೆಂಬುದೇ ಕುತೂಹಲ
Team Udayavani, Feb 8, 2023, 10:22 AM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಾವು ಏರತೊಡಗಿದ್ದು ರಾಜಕೀಯ ಪಕ್ಷಗಳು ಚುರುಕಾಗಿವೆ. ಕರಾವಳಿಯ ಪ್ರಮುಖ ಕ್ಷೇತ್ರವಾದ ಕಾರವಾರ ಮತ್ತು ಕುಮಟಾದಲ್ಲಿ ರಾಜಕೀಯ ಚಟುವಟಿಕೆಗಳು ಅತ್ಯಂತ ತುರುಸು ಪಡೆದುಕೊಂಡಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣಾ ತಯಾರಿ ಸದ್ದಿಲ್ಲದೆ ನಡೆದಿದೆ.
ಬಿಜೆಪಿ ಮಂಗಳವಾರ ಕಾರವಾರದಲ್ಲಿ ಸಮಾವೇಶ ನಡೆಸಿದ್ದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕಾರ್ಯ ಮಾಡಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಮೇಲೆ ಮಾಜಿ ಶಾಸಕರ ಸತತ ದಾಳಿ ತಡೆಯಲು ಈ ಸಮಾವೇಶ ಸಹಕಾರಿಯಾಗಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಕಾಂಗ್ರೆಸ್ ಪಕ್ಷದಲ್ಲಿರುವ ಸೈಲ್ ಗಟ್ಟಿಯಾಗಿ ಪಕ್ಷದ ಹೆಸರು ಹೇಳದೆ, ವ್ಯಕ್ತಿ ಕೇಂದ್ರಿತ ಪ್ರಚಾರ ನಡೆಸುತ್ತಿದ್ದಾರೆ. ಮತ್ತೂಬ್ಬ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಳೆದ ಶನಿವಾರ ಜೆಡಿಎಸ್ ನಾಯಕರನ್ನು ಭೇಟಿಯಾಗಿ ಪಂಚರತ್ನ ಯಾತ್ರೆಯನ್ನು ಕಾರವಾರಕ್ಕೂ ತರುವ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದೆಯಲ್ಲದೇ ಜೆಡಿಎಸ್ ಅಭ್ಯರ್ಥಿಯಾಗಿ ಕಾರವಾರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಸುಳಿವು ಸಹ ದೊರೆತಿದೆ. ಕಾರವಾರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಬಿಜೆಪಿ ಇಲ್ಲಿ ತನ್ನ ನೆಲೆ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.
ಆನಂದ ಅಸ್ನೋಟಿಕರ್ ಮತ್ತು ಸತೀಶ್ ಸೈಲ್ ಕಣಕ್ಕೆ ಇಳಿದರೆ ತ್ರಿಕೋನ ಸ್ಪರ್ಧೆ ಖಚಿತ. ಕಾಂಗ್ರೆಸ್ ಸಹ ಕೊನೆಯಲ್ಲಿ ಚೈತ್ರಾ ಕೋಠಾರಕರ್ ಎಂಬ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಕೈ ಟಿಕೆಟ್ ಆಕಾಂಕ್ಷಿ ಪಕ್ಷೇತರರಾಗಿ ಸ್ಪರ್ಧಿಸಿದರೆ ಇಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟರೂ ಅಚ್ಚರಿಯೇನಿಲ್ಲ. ಹಾಲಿ ಶಾಸಕಿ ರೂಪಾಲಿ ನಾಯ್ಕ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಕಳೆದ ಆರು ತಿಂಗಳಿಂದ ಬೂತ್ ಮಟ್ಟದಿಂದ ಕಾರ್ಯ ಆರಂಭಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ಕೆಲವು ಕಾಮಗಾರಿಯಾಗಿದ್ದರೂ, ಕೆಲವು ನಿರ್ಮಾಣ ಹಂತದಲ್ಲಿವೆ. ಮತದಾರರ ಎದುರು ಹೆಸರು ಕೆಡಿಸಿಕೊಳ್ಳದ ಕಾರಣ ಬಿಜೆಪಿ ಎಂದಿನ ವಿಶ್ವಾಸದಲ್ಲಿದೆ.
ಫೆ. 8 ಕ್ಕೆ ಪಂಚರತ್ನ ಆಗಮನ:
ಜೆಡಿಎಸ್ ತನ್ನ ಹಳೆಯ ನೆಲೆ ಕುಮಟಾದತ್ತ ಕಣ್ಣು ನೆಟ್ಟಿದೆ. ಕಾಂಗ್ರೆಸ್ ನವೆಂಬರ್‌ನಲ್ಲೇ ಇಲ್ಲಿ ಜಾಗೃತಿ ಸಮಾವೇಶ ಮಾಡಿ ತನ್ನ ಬಲ ಪ್ರದರ್ಶಿಸಿದೆ. ಸಮಾವೇಶದಲ್ಲಿ ಕೈ ನಾಯಕರು ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವರದಿ ಮುಂದಿಟ್ಟು ಬಿಜೆಪಿ ವಿರುದ್ಧ ಗುಟುರು ಹಾಕಿದ್ದರು. ಇದಲ್ಲದೇ ಶೇ.40 ಕಮಿಷನ್ ಇವೇ ಮುಂತಾದ ಅಸ್ತ್ರಗಳನ್ನು ಪ್ರಯೋಗಿಸಲಾಗಿತ್ತು. ಜೆಡಿಎಸ್ ಪಂಚರತ್ನ ಯಾತ್ರೆಯಲ್ಲೂ ಇದೇ ಬಹುತೇಕ ಪುನರಾವರ್ತನೆ ಆಗುವ ಸಾಧ್ಯತೆ ಇದೆ.
ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಕುಮಟಾದಲ್ಲಿ ನೆಲೆ ಇದೆ. ಇದು ಮಾಜಿ ಸಿಎಂ ಕುಮಾರಸ್ವಾಮಿಯವರಿಗೂ ಗೊತ್ತು. ಕಳೆದ ಚುನಾವಣಾ ಸಮಯದಲ್ಲಿ ಬಿಜೆಪಿಯಿಂದ ಸಿಡಿದು ಬಂದು ಶಕ್ತಿ ಪ್ರದರ್ಶಿಸಿದ್ದ ಸೂರಜ್ ನಾಯ್ಕ ಸೋನಿ ಜೆಡಿಎಸ್‌ನಲ್ಲಿ ಇದ್ದು ಪಕ್ಷ ಬಲಪಡಿಸಿದ್ದಾರೆ.ಕುಮಟಾ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸೂರಜ್ ನಾಯ್ಕ ಗುರುತಿಸುವಷ್ಟು ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಅತಿಯಾದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹಾಗೂ ಹಾಲಿ ಬಿಜೆಪಿ ಶಾಸಕರ ಮೇಲೆ ಪಕ್ಷದಲ್ಲಿರುವ ಅಸಮಾಧಾನವನ್ನು ಸೂರಜ್ ಬಳಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನು ಅರಿತೇ ಜೆಡಿಎಸ್ ಗೋಕರ್ಣದಿಂದ ಪಂಚರತ್ನ ಯಾತ್ರೆ ಹಮ್ಮಿಕೊಂಡಿದೆ. ಅಘನಾಶಿನಿ ನದಿ ತೀರದ ಹಳ್ಳಿಗಳಲ್ಲಿ ಸಂಚರಿಸಲಿದೆ. ದೀವಗಿ, ಬರ್ಗಿ , ಹೆಗಡೆ, ಕಾಗಾಲ ಮುಂತಾದ ಹಳ್ಳಿಗಳಲ್ಲಿ ಒಂದು ದಿನ ಹಾಗೂ ಫೆ.9 ರಂದು ಹೊನ್ನಾವರ ತಾಲೂಕಿನ ಕೆಲ ಗ್ರಾಮಗಳಲ್ಲಿ ಸಂಚರಿಸಲಿದೆ. ಕಾಂಗ್ರೆಸ್-ಜೆಡಿಎಸ್‌ಗೆ ಟಕ್ಕರ್ ಕೊಡಲೆಂದೇ ಚಕ್ರವರ್ತಿ ಸೂಲಿಬೆಲೆ ಪದೇ ಪದೇ ಕುಮಟಾಕ್ಕೆ ಆಗಮಿಸಿ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಬಿಜೆಪಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆಯನ್ನು ಕುಮಟಾ ಕ್ಷೇತ್ರಕ್ಕೆ ಅಪ್ಲೆ„ ಮಾಡಿದರೆ , ಕದನ ಕುತೂಹಲ ಏರ್ಪಡುವುದು ಖಚಿತ.
ಕಾಂಗ್ರೆಸ್ ಶಾರದಾ ಶೆಟ್ಟಿ ಅವರನ್ನೇ ಕಣಕ್ಕೆ ಇಳಿಸುತ್ತದೆಯೋ ಅಥವಾ ಯುವ ಶಕ್ತಿಗೆ ಮಣೆ ಹಾಕುತ್ತದೆಯೋ ಕಾದು ನೋಡಬೇಕಿದೆ. ಒಟ್ಟಾರೆ ಕರಾವಳಿಯ ಎರಡು ಪ್ರಮುಖ ಕ್ಷೇತ್ರಗಳಲ್ಲಿ ರಾಜಕೀಯ ಬಿರುಸು ಪಡೆದಿದ್ದು ಸಮಾವೇಷ ಯಾತ್ರೆಯ ಜಾತ್ರೆ ಜೋರಾಗಿದೆ.
ನಾಗರಾಜ್ ಹರಪನಹಳ್ಳಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ
MUST WATCH
ಹೊಸ ಸೇರ್ಪಡೆ

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ