ಗಂಗೊಳ್ಳಿ: ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ
Team Udayavani, Feb 1, 2023, 9:06 PM IST
ಗಂಗೊಳ್ಳಿ: ಗ್ರಾಹಕರಿಂದ ವಾರದ ಕಂತು ಸಂಗ್ರಹಿಸಿ ಅಧಿಕ ಹಣ ಕೊಡುವುದಾಗಿ ಹೇಳಿದ ಸಂಸ್ಥೆಯೊಂದು ಕೋಟ್ಯಂತರ ರೂ. ವಂಚಿಸಿದೆ.
ಕುಂದಬಾರಂದಾಡಿ ಗ್ರಾಮ ತೊರಳ್ಳಿ ನಡುಮನೆಯ ರತ್ನಾ ಪೊಲೀಸರಿಗೆ ದೂರು ನೀಡಿದ್ದು, ಅವರು ಪದ್ಮಾ ಹೆಗ್ಡೆ ಅವರ ಪದ್ಮಾ ರಾಯಲ್ ಚಾಲೆಂಜ್ ಸ್ಕೀಮ್ ಉದ್ಯಮದಲ್ಲಿ ಸದಸ್ಯರಾಗಿದ್ದರು. ಪದ್ಮಾ ಹೆಗ್ಡೆ ಹಾಗೂ ಮೂಕಾಂಬು ಅವರು ಸೇರಿ ತಮ್ಮ ಉದ್ಯಮದಲ್ಲಿ ನೀವು ಸದಸ್ಯರಾದರೆ ನಿಮ್ಮನ್ನು ಕ್ಯಾಶಿಯರ್ ಆಗಿಸುತ್ತೇವೆ. 2 ಲಕ್ಷ ರೂ. ಡೆಪಾಸಿಟ್ ಇಟ್ಟರೆ, 20 ಸಾವಿರ ರೂ. ಸಂಬಳ ನೀಡುವುದಾಗಿ ನಂಬಿಸಿದ್ದರು. ರತ್ನಾ ಅವರು 2 ಲಕ್ಷ ರೂ. ಡೆಪಾಸಿಟ್ ಇಟ್ಟು ಸಂಸ್ಥೆಗೆ ಗ್ರಾಹಕರನ್ನು ಸೇರುವಂತೆ ಮಾಡಿದರು. ಒಬ್ಬ ಗ್ರಾಹಕರನ್ನು ಸೇರ್ಪಡೆ ಮಾಡಿದರೆ 100 ರೂ. ಕಮಿಷನ್ ನೀಡುವುದಾಗಿ ನಂಬಿಸಿದ್ದರು. ಅದರಂತೆ ರತ್ನಾ 131 ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದರು.
ಅಧಿಕ ಲಾಭ
ಗ್ರಾಹಕರು ವಾರಕ್ಕೆ 500 ರೂ.ನಂತೆ 50 ಕಂತು ಕಟ್ಟಿದಲ್ಲಿ ಅವರಿಗೆ 34ಸಾವಿರ ರೂ. ನೀಡುವುದಾಗಿಯೂ, ವಾರಕ್ಕೆ 950 ರೂ. 50 ಕಂತು ಕಟ್ಟಿದಲ್ಲಿ 68 ಸಾವಿರ ರೂ., ತಿಂಗಳಿಗೆ 1ಸಾವಿರ ರೂ. 12 ಕಂತು ಕಟ್ಟಿದರೆ 17ಸಾವಿರ ರೂ., ತಿಂಗಳಿಗೆ 2 ಸಾವಿರ ರೂ.ನಂತೆ 12 ತಿಂಗಳು ಕಟ್ಟಿದರೆ 34 ಸಾವಿರ ರೂ., 50 ಸಾವಿರ ರೂ.ಒಂದು ವರ್ಷ ಡೆಪಾಸಿಟ್ ಇಟ್ಟರೆ 80ಸಾವಿರ ರೂ ., 1ಲಕ್ಷ ರೂ. ಒಂದು ವರ್ಷ ಡೆಪಾಸಿಟ್ ಇಟ್ಟರೆ 1.60 ಲಕ್ಷ ರೂ.ಕೊಡುವುದಾಗಿ ಹೇಳಿದ್ದರು.
ಕಚೇರಿಗೆ ಜಮೆ
ಕೆಲವು ಗ್ರಾಹಕರಲ್ಲಿ ವಾರಕ್ಕೆ 500 ರೂ., ಕೆಲವು ಗ್ರಾಹಕರಲ್ಲಿ 1 ಸಾವಿರ ರೂ. ಸಂಗ್ರಹಿಸುತ್ತಿದ್ದು, ಹಣವನ್ನು ಬಗ್ವಾಡಿಯಲ್ಲಿರುವ ಪದ್ಮಾ ಹೆಗ್ಡೆ ಅವರ ಕಚೇರಿಯಲ್ಲಿ ಪದ್ಮಾ ಹೆಗ್ಡೆ, ಸೆಲ್ವಾರಾಜ, ಪದ್ಮಾ ಹೆಗ್ಡೆ ಅವರ ಪುತ್ರ ದಿಶಾಂತ್ ಹೆಗ್ಡೆ, ಪುತ್ರಿ ಸುಹಾನಿ ಹೆಗ್ಡೆ ಅವರು ಸಹಿ ಹಾಕಿ ಹಣ ಸ್ವೀಕರಿಸುತ್ತಿದ್ದರು. ರತ್ನಾ ಅವರು ಗ್ರಾಹಕರಿಂದ ಹಣ ಸಂಗ್ರಹಿಸುವ ಬಗ್ಗೆ ಪದ್ಮಾ ಹೆಗ್ಡೆ ಅವರು ನೀಡಿದ ಕಾರ್ಡ್‌ಗೆ ಹಣ ಸ್ವೀಕರಿಸಿದ ಬಗ್ಗೆ ಸಹಿ ಹಾಕುತ್ತಿದ್ದರು. ಸಂಸ್ಥೆಗೆ ಗ್ರಾಹಕರಿಂದ ಹಣ ಡೆಪಾಸಿಟ್ ಇರಿಸಿಕೊಂಡು ಅವರಿಗೆ ಕರಾರು ಪತ್ರ ನೀಡುತ್ತಿದ್ದರು.
ವಂಚನೆ
ಸುಜಾತಾ ಹಾಗೂ ಅವರ ಗ್ರಾಹಕರಿಗೆ 24.05 ಲಕ್ಷ ರೂ., ಸುಭಾಷ ಹಾಗೂ ಅವರ ಗ್ರಾಹಕರಿಗೆ 5,92,500 ರೂ., ಭಾಗ್ಯಶ್ರೀ ಹಾಗೂ ಅವರ ಗ್ರಾಹಕರಿಗೆ 7,87,500 ರೂ., ಯಶೋದಾ ಹಾಗೂ ಅವರ ಗ್ರಾಹಕರಿಗೆ 9.12 ಲಕ್ಷ ರೂ., ರೇವತಿ ಹಾಗೂ ಅವರ ಗ್ರಾಹಕರಿಗೆ 4,05,800 ರೂ., ದೀಪಾ ಹಾಗೂ ಅವರ ಗ್ರಾಹಕರಿಗೆ 3.94 ಲಕ್ಷ ರೂ., ರಾಘವೇಂದ್ರ ಪೂಜಾರಿ ಹಾಗೂ ಅವರ ಗ್ರಾಹಕರಿಗೆ 11,00,515 ರೂ., ಭಾರತಿ ಹಾಗೂ ಅವರ ಗ್ರಾಹಕರಿಗೆ 2.14 ಲಕ್ಷ ರೂ., ಸರೋಜಾ ಹಾಗೂ ಅವರ ಗ್ರಾಹಕರಿಗೆ 3.90 ಲಕ್ಷ ರೂ., ಸವಿತಾ ಹಾಗೂ ಅವರ ಗ್ರಾಹಕರಿಗೆ 76,300 ರೂ., ಸುಶೀಲಾ ಹಾಗೂ ಅವರ ಗ್ರಾಹಕರಿಗೆ 2.50 ಲಕ್ಷ ರೂ. ಒಟ್ಟು 1,07,60,615 ರೂ. ಸಂಗ್ರಹಿಸಿ ಮರಳಿ ನೀಡಿಲ್ಲ.
ಶಾಲೆಗೂ ವಂಚನೆ
2022 ನೇ ಸಾಲಿನ ಜೂನ್ ತಿಂಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಬಾರಂದಾಡಿ ಶಾಲೆಯನ್ನು 5 ವರ್ಷಗಳವರೆಗೆ ದತ್ತು ಪಡೆದು 6 ಜನ ಗೌರವ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾರನ್ನು ನೇಮಿಸಿ ಸಂಬಳ ಕೊಡುವುದಾಗಿ ಹೇಳಿದ್ದು, ಶಾಲಾ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದಾಗಿ ಹೇಳಿ ಮಕ್ಕಳಿಗೂ ಮೂಲ ಸೌಕರ್ಯವನ್ನು ಒದಗಿಸದೇ, ಶಿಕ್ಷಕರಿಗೆ ಹಾಗೂ ಆಯಾಗಳಿಗೆ ಸಂಬಳ ಕೊಡದೇ ನಂಬಿಸಿ ಮೋಸ ಮಾಡಿದ್ದಾರೆ. , ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಹಿಂದಿರುಗಿಸಬೇಕಾದ ಹಣವನ್ನು ನೀಡದೇ ಅವರ ಕಚೇರಿಗಳನ್ನು ಬಂದ್ ಮಾಡಿ ಸದಸ್ಯರು ಹಾಗೂ ಗ್ರಾಹಕರಿಗೆ ನಂಬಿಸಿ ಮೋಸ ಮಾಡಿದ್ದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ
ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…
ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು
ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ