ತ್ವಚೆಯ ಸೌಂದರ್ಯಕ್ಕೂ ಉತ್ತಮ…ಒಂದೆಲಗ ಸೊಪ್ಪಿನಲ್ಲಿದೆ ಹಲವು ಔಷಧೀಯ ಗುಣಗಳು..


ಕಾವ್ಯಶ್ರೀ, Feb 7, 2023, 6:45 PM IST

ತ್ವಚೆಯ ಸೌಂದರ್ಯಕ್ಕೂ ಉತ್ತಮ…ಒಂದೆಲಗ ಸೊಪ್ಪಿನಲ್ಲಿದೆ ಹಲವು ಔಷಧೀಯ ಗುಣಗಳು..

ಒಂದೆಲಗ ಎಂಬುದು ಒಂದು ಎಲೆಯುಳ್ಳ ಸಸ್ಯ. ಇದನ್ನು ಬಾಹ್ಮಿ ಎಂದೂ ಕರೆಯಲಾಗುತ್ತದೆ. ತೋಟದಲ್ಲಿ, ಹಿತ್ತಲಿನಲ್ಲಿ… ಹೀಗೆ ನೀರಿನಂಶ ಹೆಚ್ಚಿರುವ ಸ್ಥಳದಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದನ್ನು ಆಹಾರವಾಗಿ ಬಳಸಲಾಗುತ್ತಿದ್ದು, ಆರೋಗ್ಯ ತುಂಬಾ ಪ್ರಯೋಜನಕಾರಿಯಾಗಿದೆ. ನಮ್ಮ ಸುತ್ತಮುತ್ತಲಿನಲ್ಲೇ ಇರುವ ಈ ಗಿಡ ಹಲವಾರು ಆರೋಗ್ಯಪೂರ್ಣ ಗುಣಗಳನ್ನು ಹೊಂದಿದೆ. ಆರೋಗ್ಯಕ್ಕೆ ಮಾತ್ರವಲ್ಲದೇ ಚರ್ಮ, ಕೂದಲಿಗೂ ಇದು ಒಳ್ಳೆಯದು. ಇದರ ಬಗ್ಗೆ ಹೆಚ್ಚಿನ ಮಹತ್ವ ತಿಳಿದುಕೊಳ್ಳೋಣ..

1) ಸಕ್ಕರೆ ಕಾಯಿಲೆ ನಿಯಂತ್ರಣ: ಒಂದೆಲಗ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಮಧುಮೇಹ ಇರುವವರು ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಿಸಬಹುದು.

2) ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿzರೆ ಒಳ್ಳೆಯದು.

3) ಕಣ್ಣಿನ ಆರೋಗ್ಯ: ಒಂದೆಲಗದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ನರಗಳಿಗೆ ತುಂಬಾ ಒಳ್ಳೆಯದು. ದಿನವಿಡಿ ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್ಣು ಉರಿಯುತ್ತಿದ್ದರೆ ಒಂದೆಲಗ ಸಸ್ಯದ ಜ್ಯೂಸ್ ಕುಡಿದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ. ಇದರಲ್ಲಿರುವ ಶೀತದ ಗುಣ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ಸಮತೋಲನದಲ್ಲಿಡಲು ಸಹಕರಿಯಾಗಿದೆ.

4) ಮಲಬದ್ಧತೆ ಸಮಸ್ಯೆಗೆ: ಮಲಬದ್ದತೆ ಸಮಸ್ಯೆಯಿಂದಬಳಲುತ್ತಿರುವವರು ಒಂದೆಲಗ ಸೊಪ್ಪಿನ ಚಟ್ನಿ, ಪಲ್ಯ ಸೇವಿಸುವುದು ಒಳ್ಳೆಯದು.

5) ಜ್ಞಾಪಕ ಶಕ್ತಿ ಹೆಚ್ಚಿಸಲು: ಒಂದೆಲಗದಲ್ಲಿರುವ ವಿಶೇಷ ಪೋಷಕಾಂಶಗಳನ್ನು ಮೆದುಳಿಗೆ ನೀಡುವುದರಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ. ಇದನ್ನು ದಿನನಿತ್ಯ ಸೇವಿಸಿದರೆ ಬುದ್ದಿ ಚುರುಕಾಗುತ್ತದೆ. ಚಿಕ್ಕ ಮಕ್ಕಳಿಗೆ ಖಾಲಿ ಹೊಟ್ಟೆಗೆ ಪ್ರತಿದಿನ ಇದರ ಎರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಒಂದೆಲಗ ರಸಕ್ಕೆ ಸ್ವಲ್ಪ ಹಾಲು ಮತ್ತು ಬೆಲ್ಲ ಸೇರಿಸಿ ಬೆಳಿಗ್ಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮೆದುಳಿಗೆ ಪೋಷಕಾಂಶಗಳು ದೊರೆತು ಏಕಾಗ್ರತೆ ಮತ್ತು ಬುದ್ದಿವಂತಿಕೆ ಹೆಚ್ಚಾಗುತ್ತದೆ.

6) ಚರ್ಮದ ಕಾಂತಿ: ಒಂದೆಲಗ ಸೊಪ್ಪಿನ ರಸ ಸೇವಿಸುವುದರಿಂದ ದೇಹದಲ್ಲಿ ರಕ್ತಪರಿಚಲನೆ ಉತ್ತಮವಾಗುತ್ತದೆ. ರಕ್ತಪರಿಚಲನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮದ ಹೊರಪದರ ಶುದ್ದಗೊಳಿಸಿ ಕಾಂತಿ ಹೊರಹೊಮ್ಮುವಂತೆ ಮಾಡುತ್ತದೆ. ಒಂದೆಲಗ ಸೊಪ್ಪಿನ ಫೆಸ್ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳುವುದರಿಂದ ಮೊಡವೆ, ತುರಿಕೆ ಕಡಿಮೆಯಾಗುತ್ತದೆ.

7) ಕೂದಲಿನ ಆರೋಗ್ಯ: ತಲೆಕೂದಲು ಉದುರುವುದು ತಡೆಯುತ್ತದೆ ಹಾಗೂ ಕೂದಲು ಉತ್ತಮವಾಗಿ ಬೆಳೆಯಲು ಸಹಕಾರಿ. ಒಂದೆಲಗದಲ್ಲಿರುವ ಪೋಷಕಾಂಶಗಳು ಕೂದಲು ಉದುರದೆ ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಒಂದೆಲಗದಿಂದ ತಯಾರಿಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೊದಲು ಹೊಳಪಾಗುವುದರೊಮದಿಗೆ ಸಮೃದ್ಧವಾಗಿ ಬೆಳೆಯುತ್ತದೆ. ಸೀಳು ಕೂದಲು, ತಲೆಹೊಟ್ಟು ಸಮಸ್ಯೆ ನಿವಾರಿಸುವುದರೊಂದಿಗೆ ಒಂದೆಲಗವನ್ನು ತಲೆಗೆ ಹಚ್ಚುವುದರಿಂದ ದೇಹದಲ್ಲಿನ ಉಷ್ಣತೆ ಕಡಿಮೆ ಮಾಡುತ್ತದೆ.

8) ಬ್ಯಾಕ್ಟಿರಿಯಾ ನಿವಾರಣೆ:ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕನ್ನು ನಿವಾರಿಸುತ್ತದೆ. ಈ ಸಸ್ಯವನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿ ಚಿಕಿತ್ಸೆಗೆ ಬಳಸಿಕೊಳ್ಳಬಹುದು.

9) ಬಳಲಿಕೆ ನಿವಾರಣೆಗೆ: ಒಂದೆಲಗ ಸೊಪ್ಪು ಬಳಲಿಕೆ ನಿವಾರಣೆ ಮಾಡಲು ತುಂಬಾ ಸಹಕಾರಿಯಾಗಿದೆ. ಇದನ್ನು ಸೇವಿಸಿದರೆ ನಿಮ್ಮಲ್ಲಿನ ಬಳಲಿಕೆ ದೂರವಾಗಿ ಶಕ್ತಿ ಬರುತ್ತದೆ.

10) ಗಾಯ, ಸುಟ್ಟ ಗಾಯಕ್ಕೆ: ಈ ಸಸ್ಯದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದನ್ನು ಗಾಯ, ಸುಟ್ಟ ಗಾಯ, ಸೋರಿಯಾಸಿಸ್ ಚಿಕಿತ್ಸೆಗೆ ಬಳಸಬಹುದು. ಇದು ಗಾಯ, ಸುಟ್ಟಗಾಯ ಶಮನ ಮಾಡುತ್ತದೆ. ಇದು ಬಾಧಿತ ಜಾಗಕ್ಕೆ ರಕ್ತಸಂಚಾರ ಹೆಚ್ಚಿಸಿ, ಆ್ಯಂಟಿಆಕ್ಸಿಡೆಂಟ್ ಮಟ್ಟ ವೃದ್ಧಿಸುತ್ತದೆ. ನಿಮ್ಮ ಮನೆ ಹಿತ್ತಲಿನಲ್ಲಿ ಆಥವಾ ನೀರು ಜಾಸ್ತಿ ಇರುವ ಪ್ರದೇಶದಲ್ಲಿ ಬಾಹ್ಮಿ ಸಸ್ಯ ನೆಟ್ಟು, ಅದನ್ನು ಉಪಯೋಗಿಸುತ್ತಾ ಆರೋಗ್ಯವಾಗಿರಿ.

– ಕಾವ್ಯಶ್ರೀ

ಟಾಪ್ ನ್ಯೂಸ್

6-desiswara

ನೆರಳಿನಾಸರೆಯಲ್ಲಿ….

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

rani ram

ರಾಣಿ ರಾಂಪಾಲ್‌ರಿಂದ ಹಾಕಿ ಕ್ರೀಡಾಂಗಣ: ‘ರಾಣಿ ಗರ್ಲ್ಸ್‌ ಹಾಕಿ ಟರ್ಫ್‌ʼ ಎಂದು ಮರುನಾಮಕರಣ

ugadi

ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುಗಾದಿ ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

ಯುಗಾದಿ 2023- ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

web-suhan

ಪ್ರೀತಿಯ ಅಜ್ಜನ ಸಾವಿನ ನೋವು…22 ರ ಹರೆಯದಲ್ಲೇ ಸಮಾಜ ಸೇವೆಗಿಳಿದ ಯುವತಿ

ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

anjum chopra

ಭಾರತದ ವನಿತಾ ಕ್ರಿಕೆಟ್‌ಗೆ ಸ್ಟಾರ್‌ ವ್ಯಾಲ್ಯೂ ಕೊಡಿಸಿದ್ದ ಅಂಜುಂ ಚೋಪ್ರಾ

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

6-desiswara

ನೆರಳಿನಾಸರೆಯಲ್ಲಿ….

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.