ಯುವ ಜನರನ್ನು ಕಾಡುವ ಹ್ಯಾಪಿ ಹೈಪೋಕ್ಸಿಯಾ : ಹ್ಯಾಪಿ ಹೈಪೋಕ್ಸಿಯಾ ಎಂದರೇನು?


Team Udayavani, May 14, 2021, 6:50 AM IST

ಯುವ ಜನರನ್ನು ಕಾಡುವ ಹ್ಯಾಪಿ ಹೈಪೋಕ್ಸಿಯಾ : ಹ್ಯಾಪಿ ಹೈಪೋಕ್ಸಿಯಾ ಎಂದರೇನು?

ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ತೀವ್ರವಾದ ರೋಗಲಕ್ಷಣಗಳು ಮತ್ತು ಯುವಜನರ ಸಾವಿನ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ರೋಗಿಯು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲದಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಇಂಥವರಲ್ಲಿ ಇದ್ದಕ್ಕಿದ್ದಂತೆ ಆಮ್ಲಜನಕದ ಮಟ್ಟವು ಕಡಿಮೆಯಾಗಿ ಸ್ಯಾಚುರೇಟೆಡ್‌ ಆಮ್ಲಜನಕದ ಮಟ್ಟವು ಶೇ. 50 ತಲುಪಿರುತ್ತದೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಹ್ಯಾಪಿ ಹೈಪೋಕ್ಸಿಯಾ.

ಈ ಹಂತದಲ್ಲಿ ಶ್ವಾಸಕೋಶಗಳು ಗಂಭೀರ ಹಾನಿಗೆ ತುತ್ತಾಗುತ್ತವೆ. ನೋಡಲು ಸರಿಯಾಗಿಯೇ ಇರುವ ವ್ಯಕ್ತಿ ಇದ್ದಕ್ಕಿದ್ದಂತೆ ಅಪಾಯದ ಸನ್ನಿವೇಶದಲ್ಲಿರುತ್ತಾನೆ. ಅಂಥವರ ದೇಹದಲ್ಲಿ ಆಮ್ಲಜನಕದ ಮಟ್ಟವು ಕಡಿಮೆಯಾಗಿ ಆರೋಗ್ಯದಲ್ಲಿ ಏಕಾಏಕಿ ಸಮಸ್ಯೆ ಅನುಭವಿಸುತ್ತಾರೆ. ಇಂಥ ಸಂದರ್ಭ ಪರೀಕ್ಷೆ ಮಾಡದೇ ಇದ್ದರೆ ಆಮ್ಲಜನಕ ಮಟ್ಟವು ಶೇ. 50 ತಲುಪುವ ಅಪಾಯ ಇದೆ. ಬಳಿಕ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ, ನಿಶ್ಶಕ್ತಿ, ಹೆದರಿಕೆ, ಬೆವರುವುದು, ತಲೆತಿರುಗುವಿಕೆ ಮತ್ತು ಕಣ್ಣುಗಳು ಕಪ್ಪಾಗುವಂಥ ಲಕ್ಷಣಗಳು ಪ್ರಾರಂಭವಾಗುತ್ತವೆ. ಎರಡು ದಿನಗಳ ಹಿಂದೆ ಸಾಮಾನ್ಯವಾಗಿ ಕಾಣುವ ರೋಗಿಯು ಇದ್ದಕ್ಕಿದ್ದಂತೆ ವೆಂಟಿಲೇಟರ್‌ ಚಿಕಿತ್ಸೆಗೆ ತೆರಳಬೇಕಾಗುತ್ತದೆ. ಹಾಗಾದರೆ ಏನಿದು ಹ್ಯಾಪಿ ಹೈಪೋಕ್ಸಿಯಾ? ಇದು ರೋಗಿಗಳ ಸ್ಥಿತಿಗೆ ಹೇಗೆ ತೊಂದರೆಯಾಗುತ್ತಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಹ್ಯಾಪಿ ಹೈಪೋಕ್ಸಿಯಾ ಎಂದರೇನು?
ಇದು ಕೊರೊನಾ ಸೋಂಕಿನ ಹೊಸ ಲಕ್ಷಣವಾಗಿದೆ. ಸಾಂಕ್ರಾಮಿಕವು ಒಂದು ವರ್ಷದ ಮೊದಲೇ ಬಂದಿದ್ದರೂ ಅದರ ಹೊಸ ಹೊಸ ಲಕ್ಷಣಗಳು ಕಾಣಿಸಿಕೊಳ್ಳತ್ತಲೇ ಇವೆ. ಶೀತ, ಜ್ವರ, ಕೆಮ್ಮಿನಿಂದ ಪ್ರಾರಂಭವಾಗುವ ಈ ಸೋಂಕು ತೀವ್ರ ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಅತಿಸಾರ, ರುಚಿಯ ಕೊರತೆ, ರಕ್ತದಲ್ಲಿ ಹೆಪ್ಪುಗಟ್ಟುವಿಕೆ ಮುಂತಾದ ಹಲವು ಹೊಸ ಲಕ್ಷಣಗಳನ್ನು ಸಂಶೋಧಕರು ಗುರುತಿಸಿ¨ªಾರೆ. ಕೋವಿಡ್‌ -19 ಪ್ರೊಟೋಕಾಲ್‌ ಅನ್ನು ಅನುಸರಿಸಿದ ಅನಂತರವೂ ಸೋಂಕುಗಳು ನಿವಾರಣೆಯಾಗುವುದಿಲ್ಲ. ಭಾರತದಲ್ಲಿ ಇದೀಗ ವ್ಯಾಪಿಸಿರುವ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಸೋಂಕಿಗೊಳಗಾಗಿರುವ ಯುವಜನರಲ್ಲಿ ಹೆಚ್ಚಿನವರು ಹೊಸ ರೋಗಲಕ್ಷಣವಾದ ಹ್ಯಾಪಿ ಹೈಪೋಕ್ಸಿಯಾವನ್ನು ಅನುಭವಿಸಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಹೈಪೋಕ್ಸಿಯಾ ಎಂದರೆ ರಕ್ತದಲ್ಲಿನ ಆಮ್ಲಜನಕದ ಮಟ್ಟ ಬಹಳ ಕಡಿಮೆಯಾಗುವುದು. ಆರೋಗ್ಯವಂತ ವ್ಯಕ್ತಿಯ ರಕ್ತದಲ್ಲಿನ ಆಮ್ಲಜನಕದ ಶುದ್ಧತೆಯು ಶೇ.95 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಆದಾಗ್ಯೂ ಕೊರೊನಾ ರೋಗಿಗಳಲ್ಲಿ ಆಮ್ಲಜನಕದ ಶುದ್ಧತೆಯು ಶೇ. 50ಕ್ಕೆ ಇಳಿಕೆಯಾಗುತ್ತದೆ. ಮೂತ್ರಪಿಂಡ, ಮೆದುಳು, ಹೃದಯ ಮತ್ತು ಇತರ ಪ್ರಮುಖ ಅಂಗಗಳು ಹೈಪೋಕ್ಸಿಯಾದಿಂದಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು.

ಹೈಪೋಕ್ಸಿಯಾ ಅನುಭವಿಸುತ್ತಿರುವ ಕೊರೊನಾ ರೋಗಿಗಳು ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಅವರು ಸಾಮಾನ್ಯರಂತೆ ಯಾವುದೇ ರೋಗ ಇಲ್ಲದೇ “ಹ್ಯಾಪಿ’ ಆಗಿದ್ದಾನೆ ಎಂದೇ ಕಂಡುಬರುತ್ತದೆ. ತನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ಎಂದಿನಂತೆ ತೊಡಗುತ್ತಾನೆ. ಆದರೆ ದೇಹದಲ್ಲಿ ವೈರಸ್‌ ಅದರ ಕೆಲಸ ಮಾಡುತ್ತಿರುತ್ತದೆ.

ಯುವಕರಲ್ಲಿಯೇ ಯಾಕೆ?
ಇದಕ್ಕೆ ಎರಡು ಕಾರಣಗಳಿವೆ. ಯುವಕರ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ಎರಡನೆಯದಾಗಿ ಅವರ ಶಕ್ತಿಯು ಇತರ ವಯೋಮಾನದವರಿಗಿಂತ ಹೆಚ್ಚಾಗಿರುತ್ತದೆ. ಸಹಜವಾಗಿಯೇ ಅವರು ಇತರ ಜನರಿಗಿಂತ ಹೆಚ್ಚು ತ್ರಾಣವನ್ನು ಹೊಂದಿರುತ್ತಾರೆ. ವಯಸ್ಸು ಹೆಚ್ಚಿದ್ದರೆ ಆಮ್ಲಜನಕದ ಶುದ್ಧತೆಯ ಪ್ರಮಾಣ ಶೇ. 90ರಿಂದ ಶೇ. 94 ಎಂದು ಭಾವಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಶೇ. 80ರಷ್ಟು ಆಮ್ಲಜನಕ ಶುದ್ಧತೆಯಲ್ಲಿಯೂ ಸಹ ಯುವಕರು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಅವರು ಹೈಪೋಕ್ಸಿಯಾವನ್ನು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳುತ್ತಾರೆ. ಇದು ಯುವಜನರಲ್ಲಿ ಸೋಂಕನ್ನು ಗಂಭೀರ ಲಕ್ಷಣಗಳಾಗಿ ಪರಿವರ್ತಿಸುತ್ತಿದೆ. ಕೊರೊನಾ ಶೇ. 85ರಷ್ಟು ಜನರಲ್ಲಿ ಸೌಮ್ಯವಾಗಿರುತ್ತದೆ. ಶೇ. 15ರಷ್ಟು ಮಧ್ಯಮ ಮತ್ತು ಶೇ. 2ರಷ್ಟು ಜನರಿಗೆ ಮಾತ್ರ ಮಾರಕವಾಗಿರುತ್ತದೆ. ಹೆಚ್ಚಿನ ಯುವಕರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುತ್ತದೆ. ಇದು ಆ ವರ್ಗದವರ ಸಾವಿನ ಸಂಖ್ಯೆಯನ್ನೂ ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸಾಂಕ್ರಾಮಿಕದ ವಿವಿಧ ಹಂತದ ರೋಗಲಕ್ಷಣಗಳ ಬಗ್ಗೆ ಎಚ್ಚರಿಕೆಗಳನ್ನು ನೀಡುವುದು ಬಹಳ ಮುಖ್ಯ.

ಜಾಗೃತಿ ಹೇಗೆ?: ಕೊರೊನಾದ ಹೊಸ ಲಕ್ಷಣಗಳು ಹೊರಬರುತ್ತಿರುವುದರಿಂದ ಮಧ್ಯಮ ಮತ್ತು ತೀವ್ರ ಸಮಸ್ಯೆ ಯಲ್ಲಿರುವ ರೋಗಿಗಳು ಜಾಗೃತರಾಗಿರುವುದು ಆವಶ್ಯಕ. ಅತಿಸಾರ, ಕಾಂಜಂಕ್ಟಿವಿಟಿಸ್‌, ಕೀಲು ನೋವು ಸಹ ಕೊರೊನಾದ ಹೊಸ ಲಕ್ಷಣಗಳಾಗಿವೆ. ಇವುಗಳನ್ನು ರಾಜ್ಯ ಅಥವಾ ಕೇಂದ್ರದ ಆರ್‌ಟಿ- ಪಿಸಿಆರ್‌ ಪರೀಕ್ಷಾ ಪ್ರೊಟೋಕಾಲ್‌ನಲ್ಲಿ ಸೇರಿ ಸಲಾಗಿಲ್ಲ. ರೂಪಾಂತರದ ಕಾರಣ ದಿಂದಾಗಿ ಆರ್‌ಟಿಪಿಸಿಆರ್‌ನಲ್ಲಿ ಸಹ ಹೆಚ್ಚಿನ ರೂಪಾಂತರಿತ ರೂಪಗಳು ಪತ್ತೆಯಾಗುವುದಿಲ್ಲ. ಹೈಪೋ
ಕ್ಸಿಯಾ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸಿ ಹೆಚ್ಚೆಚ್ಚು ಮಾಹಿತಿಗಳನ್ನು ಜನರಿಗೆ ನೀಡಿದರೆ ಜನಜಾಗೃತಿ ಸಾಧ್ಯವಾಗಬಹುದು.

ಗುರುತಿಸುವುದು ಹೇಗೆ?
ಕೊರೊನಾ ರೋಗಿಗಳಿಗೆ ತಮ್ಮ ಆಮ್ಲಜನಕವನ್ನು ನಾಡಿ ಆಕ್ಸಿಮೀಟರ್‌ನಲ್ಲಿ ಪರೀಕ್ಷಿಸಲು ತಜ್ಞರು ಸೂಚಿಸುತ್ತಾರೆ. ಹ್ಯಾಪಿ ಹೈಪೋಕ್ಸಿಯಾದಲ್ಲಿ ತುಟಿಗಳ ಬಣ್ಣವು ಬದಲಾಗಲು ಪ್ರಾರಂಭವಾಗುತ್ತದೆ. ಇದು ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಚರ್ಮವು ಕೆಂಪು / ನೇರಳೆ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಬಿಸಿಲು ಅಥವಾ ಸೆಕೆ ಇಲ್ಲದಿದ್ದರೂ ವ್ಯಾಯಾಮ ಮಾಡದಿದ್ದರೂ ಬೆವರುವಿಕೆ ಮುಂದುವರಿಯುತ್ತದೆ. ಇವು ರಕ್ತದಲ್ಲಿ ಕಡಿಮೆ ಆಮ್ಲಜನಕವಿರುವ ಲಕ್ಷಣಗಳಾಗಿವೆ. ಇದರ ಇನ್ನೊಂದು ಪರೀಕ್ಷೆ ಎಂದರೆ, ಆರು ಮೀಟರ್‌ ನಡಿಗೆ ಮಾಡಬೇಕು. ನಡಿಗೆಗೆ ಮೊದಲು ಆಕ್ಸಿಜನ್‌ ಮಟ್ಟವನ್ನು ಪರೀಕ್ಷಿಸಬೇಕು. 6 ಮೀಟರ್‌ ನಡಿಗೆಯ ಬಳಿಕ ಆಕ್ಸಿಜನ್‌ ಪ್ರಮಾಣ 92ಕ್ಕಿಂತ ಕಡಿಮೆಯಿದ್ದು, ಯಾವುದೇ ಉಸಿರಾಟದ ಏರುಪೇರು ಅರಿವಿಗೆ ಬಾರದಿದ್ದರೆ ಹೈಪೋಕ್ಸಿಯಾ ಇರುವ ಸಾಧ್ಯತೆ ಹೆಚ್ಚು ಎಂದರ್ಥ. ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

ಆಮ್ಲಜನಕದ ಮಟ್ಟ ಹಠಾತ್‌ ಯಾಕೆ ಕಡಿಮೆಯಾಗುತ್ತದೆ?
ಹೆಚ್ಚಿನ ಸಂಶೋಧಕರು ಮತ್ತು ವೈದ್ಯಕೀಯ ತಜ್ಞರ ಪ್ರಕಾರ ಶ್ವಾಸಕೋಶದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುತ್ತದೆ. ಹ್ಯಾಪಿ ಹೈಪೋಕ್ಸಿಯಾಕ್ಕೆ ಇದು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಸೋಂಕು ಇ¨ªಾಗ ದೇಹದಲ್ಲಿ ಉರಿಯೂತ ಹೆಚ್ಚಾಗುತ್ತದೆ. ಇದು ಸೆಲ್ಯುಲಾರ್‌ ಪ್ರೊಟೀನ್‌ ಪ್ರತಿಕ್ರಿಯೆಯನ್ನು ವೇಗಗೊಳಿ ಸುತ್ತದೆ. ಅನಂತರ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊ ಳ್ಳಲು ಪ್ರಾರಂಭಿಸುತ್ತದೆ. ಇದು ಶ್ವಾಸಕೋಶಕ್ಕೆ ಸಾಕಷ್ಟು ಪ್ರಮಾ ಣದ ಆಮ್ಲಜನಕವನ್ನು ಪೂರೈಸುವುದಿಲ್ಲ ಮತ್ತು ರಕ್ತದಲ್ಲಿನ ಆಮ್ಲಜನಕದ ಶುದ್ಧತೆಯನ್ನು ಕಡಿಮೆ ಮಾಡುತ್ತದೆ.

ಆಕ್ಸಿಜನ್‌ ಮಟ್ಟವನ್ನು ಪರೀಕ್ಷಿಸುವುದು ಅಗತ್ಯ
ಹ್ಯಾಪಿ ಹೈಪೋಕ್ಸಿಯಾ ಎಂಬುದು ಯುವ ಜನರಲ್ಲಿ ಅಧಿಕವಾಗಿ ಕಂಡುಬರುತ್ತಿದೆ. ಈ ಸ್ಥಿತಿಯ ಬಗ್ಗೆ ಅರಿವಿಗೆ ಬರುವುದಿಲ್ಲ. ಶೀತ, ಜ್ವರ, ಉಸಿರಾಟದ ಸಮಸ್ಯೆ, ವಾಸನೆ ಗ್ರಹಿಕೆ ಸಮಸ್ಯೆ ಕಂಡು ಬಂದ ತತ್‌ಕ್ಷಣ ಹಾಗೂ ಆಕ್ಸಿಜನ್‌ ಮಟ್ಟ (ಎಸ್‌ಬಿಒ2) 94ಕ್ಕಿಂತ ಕಡಿಮೆಯಾದಾಗ ವೈದ್ಯರ ಬಳಿ ತೆರಳಿ, ಸೂಕ್ತ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
- ಡಾ| ಪ್ರೇಮಾನಂದ ಎ., ಜಿಲ್ಲಾ ವಿಶೇಷಾಧಿಕಾರಿಗಳು, ಉಡುಪಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.