Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

ಹೆಡ್‌ಫೋನ್‌ ನುಡಿಮುತ್ತನ್ನು ಹೇಳುವೆ ಕೇಳುವಿರಾ...

Team Udayavani, Sep 23, 2023, 5:16 PM IST

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

ಈಗೀಗ ಎಲ್ಲರ ಬದುಕಿನಲ್ಲು ಬಿಡುವಿನ ಸಮಯವೆನ್ನುವುದೇ ಇಲ್ಲ. ಯಾವಾಗ ನೋಡಿದರೂ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿಯೇ ಇರುತ್ತಾರೆ. ಬೆಳಗ್ಗಿನ ಪತ್ರಿಕೆಯನ್ನೂ ಸಾವಧಾನದಿಂದ ಓದಲೂ ಕೆಲವರಿಗೆ ತಾಳ್ಮೆ, ಸಮಯವಿರುವುದಿಲ್ಲ. ಶಾಲಾ ದಿನಗಳ ಸಮಯದಲ್ಲಿ ಶಿಕ್ಷಕರು ಪ್ರತೀ ದಿನ ತರಗತಿಯ ಬೋರ್ಡಿನ ಮೇಲೆ ಗಾದೆ ಮಾತುಗಳನ್ನೋ ಅಥವಾ ನುಡಿಮುತ್ತುಗಳನ್ನೋ ಬರೆಯಲು ಹೇಳುತ್ತಿದ್ದರು. ದಿನವೂ ಒಬ್ಬೊಬ್ಬರ ಸರದಿ ಇರುತ್ತಿತ್ತು. ಅಲ್ಲದೇ ಪರೀಕ್ಷೆಗಳಲ್ಲೂ ನುಡಿಮುತ್ತುಗಳನ್ನು, ಗಾದೆಮಾತುಗಳನ್ನು ಅರ್ಥ ಸಹಿತವಾಗಿ ಬರೆಯಲೂ ಇರುತ್ತಿತ್ತು. ನುಡಿಮುತ್ತು, ಗಾದೆ ಮಾತುಗಳು ಜೀವನದ ಪಾಠವನ್ನು ಒಂದೇ ಸಾಲಿನಲ್ಲಿ ಹೇಳಿ ಬಿಡುತ್ತವೆ. ಪತ್ರಿಕೆಗಳಲ್ಲೂ ದಿನವೂ ಇಂತಹ ಸಾಲುಗಳು ನಮಗೆ ಕಾಣಸಿಗುತ್ತವೆ. ಆದರೆ ಇದನ್ನು ಗಮನಿಸಿ ಓದುವವರು ಕಡಿಮೆಯೇ. ಯಾರಾದರೂ ಇಂತಹ ಜೀವನದ ನುಡಿಮುತ್ತುಗಳನ್ನು ಹೇಳಿದರೇ ಕೇಳಿಸಿಕೊಳ್ಳುವವರು ಇಲ್ಲ…..ಯಾಕೆಂದರೆ ಎಲ್ಲರ ಕಿವಿ ಪರದೆಗಳು ಹೆಡ್‌ಫೋನ್‌, ಇಯರ್‌ಫೋನ್‌ಗಳಿಂದ ಮುಚ್ಚಿಬಿಟ್ಟಿವೆ…. ಹಾಗಾಗಿ ಇದು ಹೆಡ್‌ಫೋನ್‌ ನುಡಿಮುತ್ತುಗಳ ಕಾಲ.

ಈ ಬಾರಿಯ ಬರಹವು ಮುತ್ತುಗಳ ಬಗ್ಗೆ. ಕೇವಲ ನುಡಿಮುತ್ತುಗಳ ಬಗ್ಗೆ ಮಾತ್ರ. ನುಡಿಮುತ್ತುಗಳನ್ನು ಸುಮ್ಮನೆ ಹಂಚಲಾಗದು. ಹಾಗಾಗಿ ಕಿವಿಯಲ್ಲೇ ಹೇಳುತ್ತೇನೆ. ಕಿವಿಯಲ್ಲಿ ಎಂದರೆ ಇವು ನುಡಿಮುತ್ತುಗಳೋ? ಅಥವಾ ಕಿವಿಮಾತುಗಳೋ?

ಸಾಮಾನ್ಯವಾಗಿ ಇಂಥಾ ನುಡಿ ಮುತ್ತುಗಳು ಪತ್ರಿಕೆಯ ಒಂದು ಪುಟದ ಬಲಭಾಗದ ಕೊನೆಯಲ್ಲಿರುತ್ತದೆ. ಹೆಚ್ಚಿನ ವೇಳೆ ಇದನ್ನು ಓದದೇ ಮುಂದೆ ಸಾಗುವವರೇ ಹೆಚ್ಚು. ಓದುವ ಆಸಕ್ತಿ ಉಳ್ಳವರು ಓದುತ್ತಾರೆ. ಅರ್ಥೈಸಿಕೊಳ್ಳುವವರು ಅರ್ಥವನ್ನೂ ಮಾಡಿಕೊಳ್ಳಬಹುದು. ಶಾಲಾ ಶಿಕ್ಷಕರು ಇದರಲ್ಲಿ ಆಯ್ದವನ್ನು ಗುರುತಿಸಿ ಶಾಲೆಯ ಬೋರ್ಡ್‌ ಮೇಲೆ ಬರೆಯಲೂಬಹುದು. ಕೆಲವರು ಇದನ್ನು ತಮ್ಮ ಇಮೇಲ್‌ ಸಹಿಯಲ್ಲೂ ಹಾಕಿಕೊಳ್ಳಬಹುದು. ಎಲ್ಲೋ ಒಂದು ಮೂಲೆಯಲ್ಲಿ, ಯಾರೋ ಒಬ್ಬರ ಮೇಲೆ ಈ ಪದಗಳು ಪ್ರಭಾವವು ಬೀರಬಹುದು ಕೂಡ. ಇಷ್ಟೆಲ್ಲ ಕಥೆಗಳು ಈ ನುಡಿಮುತ್ತುಗಳಿಗೆ ಇರುವುದರಿಂದ ಕೊಂಚ ಖಾಸಿಗಿಯಾಗಿಯೇ ಕಿವಿಯಲ್ಲಿ ಹೇಳಿಬಿಡುತ್ತೇನೆ, ಹಾಗಾಗಿ…

ಕೇಳ್ರಪ್ಪೋ ಕೇಳ್ರಿ, ಹೆಡ್‌ಫೋನ್‌ ನುಡಿಮುತ್ತುಗಳನ್ನ ಕೇಳ್ರಿ. ಇದೇನಿದು ಕಿವಿಮಾತು ಅಲ್ಲ, ನುಡಿಮುತ್ತೂ ಅಲ್ಲ ಬದಲಿಗೆ ಹೆಡ್‌ ಫೋನ್‌ ಮಾತೇ? ಹೌದು ಮತ್ತೆ, ಇಂದಿನ ಕಿವಿಗಳಿಗೆ ಬಿಡುವೆಲ್ಲಿದೆ? ಒಂದು ಕಾಲದಲ್ಲಿ “ಒಂದೊಳ್ಳೆ ಮಾತು ಹೇಳಿದರೆ, ಈ ಕಿವಿಯಲ್ಲಿ ಕೇಳ್ತೀರಿ, ಆ ಕಿವಿಯಲ್ಲಿ ಬಿಡುತ್ತೀರಿ’ ಅಂತ ಬೈಸಿಕೊಂಡಿದ್ದು ಇದೆ. ಆದರೆ ಇಂದಿನ ಕಿವಿಗಳು ಹಾಗಲ್ಲ. ಒಂದು ಕಿವಿಯೊಳಗೆ ಹೋದರೆ ತಾನೇ, ಇನ್ನೊಂದು ಕಿವಿಯಿಂದ ಆಚೆ ಹೊರಗೆ ಬರಲು?

ಇಂದಿನ ಕಿವಿಗಳಿಗೆ ಬಿಡುವಿಲ್ಲ. ಹಿತವಚನ ಕಿವಿಯೊಳಗೆ ಹೋಗಲು ಅಡ್ಡಿ ಬರುವುದೇ Earphoneಗಳು ಮತ್ತು Headphoneಗಳು. ಇಂದಿನ ಮೊಬೈಲ್‌ ಫೋನ್‌ಗಳು, ಪಾಡ್‌ಗಳು ಮೊದಲಾದವು ಕಿವಿಗಳನ್ನು ಬಹಳ ಬ್ಯುಸಿ ಇಟ್ಟಿರುತ್ತದೆ. ನಡೆದಾಡುವಾಗ, ಟ್ರೆಡ್ಮಿಲ್‌ ಮೇಲೆ ಓಡುವಾಗ, ಸೈಕ್ಲಿಂಗ್‌ ಮಾಡುವಾಗ, ಯಾವುದೇ ರೀತಿಯ ವಾಹನಗಳಲ್ಲಿ ಪ್ರಯಾಣ ಮಾಡುವಾಗ, ಮತ್ತೂ ಕೆಲವೊಮ್ಮೆ ಎರಡು ಚಕ್ರದ ಗಾಡಿ ಓಡಿಸುವಾಗ ಅಥವಾ ಕಾರು ಓಡಿಸುವಾಗಲೂ ಕೂಡಾ. ತಾವೇ ಗಾಡಿ ಚಲಾಯಿಸುವಾಗ Earphone ಬಳಸುವುದು ಅಪಾಯ ಎಂದು ಅರಿತೂ ಬಳಸುವವರಿಗೆ ಕಿವಿ ಮಾತು ಹೇಳುವುದಾದರೂ ಹೇಗೆ? ಮೊದಲಿಗೆ ಮತ್ತೊ ಬ್ಬರ ಮಾತು ಬೇಕಿಲ್ಲ ಎಂದೇ ತಾನೇ ಅವರು Earphone ಬಳಸೋದು? ಯಾವುದೋ ಒಂದು ಸಾಧನದಿಂದ ಹೊರಟ ಒಂದೆಳೆ ದಾರ ಅನಂತರ ಎರಡಾಗಿ ಸೀಳಿ ಎರಡೂ ಕಿವಿಗಳ ಒಳ ನುಗ್ಗಿ ಕೂತು ಅಥವಾ ಕಿವಿಗಳನ್ನು ಅಪ್ಪಿ ಹಿಡಿದು ಅವರನ್ನು ಕೆಪ್ಪರನ್ನಾಗಿಸಿರಲು, ನಾನು ಕಿವಿ ಮಾತು ಅಂದ್ರೆ ಕಿವಿ ಕೇಳಿಸಬೇಕಲ್ಲ?

ಕೆಲವೊಮ್ಮೆ podcast, ಹಲವೊಮ್ಮೆ ಮೀಟಿಂಗ್ಸ್‌, ಇನ್ನು ಕೆಲವೊಮ್ಮೆ Online trainings ಇತ್ಯಾದಿ ಸನ್ನಿವೇಶಗಳಲ್ಲೂ Earphone ಅಥವಾ Headphoneಗಳನ್ನೂ ಬಳಸಲಾಗುತ್ತದೆ. ಹಾಡು ಅಥವಾ ಮಾತುಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲೂ Earphone ಅನ್ನು ಬಳಸಲಾಗುತ್ತದೆ. ಒಂದಷ್ಟು ಸನ್ನಿವೇಶಗಳ ಬಗೆಗಿನ ಕಿವಿಮಾತುಗಳನ್ನು ಎರಡೂ ಕಿವಿಗಳಿಂದ ಸಾಗಿ ಬಹುಷಃ ಸೀದಾ ಮೇಲೇರಿ ಬುದ್ಧಿಯಲ್ಲಿ ಸೇರುವ ಅಥವಾ ಕಿವಿಗಳಿಂದ ಕೊಂಚ ಕೆಳಕ್ಕಿಳಿದು ನೇರವಾಗಿ ಹೃದಯದೊಳಗೆ ಇಳಿಸುವ ಯತ್ನ ಮಾಡುವಾ. ಹಾಗಾಗಿ ಕೇಳ್ರಪ್ಪೋ ಕೇಳ್ರೀ, ಇಯರ್‌ ಫೋನ್‌ ಅಥವಾ ಹೆಡ್‌ ಫೋನ್‌ ನುಡಿ ಮಾತುಗಳನ್ನ ಕೇಳ್ರೀ !!

1. ಕಂಪ್ಯೂಟರ್‌ ಮುಂದೆ ಕೂತು ಕೆಲಸ ಮಾಡುವಾಗ ಕನಿಷ್ಟ ಪಕ್ಷ ಎರಡು ಘಂಟೆಗೊಮ್ಮೆ ಎದ್ದು ಕಾಲುಗಳ ಝಾಡಿಸಿ. ಗೆದ್ದಲು ಹಿಡಿದಿದ್ದರೆ ಉದುರೀತು. ಜೇಡ ತನ್ನ ಬಲೆ ಕಟ್ಟಿದ್ರೆ ಬೇರೆಡೆ ಹೊರಟೀತು. ವೆಬ್‌ ನೋಡ್ತಾ ಕೂತಿರುವ ಜನರಿಗೆ ಜೇಡ ವೆಬ್‌ ಕಟ್ಟಿದ್ರೂ ಗೊತ್ತಾಗೋಲ್ಲ !
ಅಂತರಾತ್ಮದ ಮಾತು ಏನಪ್ಪಾ ಅಂದ್ರೆ ಕಾಲು ಝಾಡಿಸುವಾಗ ರಕ್ತಸಂಚಾರ ಉಂಟಾಗಿ ಜೋಮು ಹಿಡಿಯುವ ಸಂಭವನೀಯತೆ ಕಡಿಮೆಯಾಗುತ್ತದೆ. ಸಂಚಾರ ನಿಂತಾಗಲೇ ಬೇಡದ್ದು ಗೂಡು ಕಟ್ಟೋದು. ಜೋಮು ಬೇಡದ್ದು. ಒಲ್ಲದ್ದನ್ನು ಝಾಡಿಸಿ ತೆಗೆಯುವುದು ಉತ್ತಮ. ಕಚೇರಿಗಳಲ್ಲಿ, ನೀವು ಒಪ್ಪವಾಗಿದ್ದರೂ ಅನ್ನದಾತರಿಗೆ ನೀವು ಒಲ್ಲದವರಾದರೆ ಅವರೇ ಝಾಡಿಸುತ್ತಾರೆ! ನೀವಾಗ ಉದುರಲೇಬೇಕು. ಗೆದ್ದಲು ಹಿಡಿಯುವುದು ಯಾವಾಗ ಎಂದರೆ ಬಳಕೆಯಾಗದ ಸ್ಥಳದಲ್ಲಿ. ತಲೆಯು ಬೇಡದ ಗೂಡಾಗದಿರಲಿ. ಅಲ್ಲಿ ಕಟ್ಟುವ ಗೂಡಿನಲ್ಲಿ ಒಳಿತು ಬಂದು ಕೂರದು. ಜೇಡ ಬಲೆ ಕಟ್ಟಿದರೆ ಅಲ್ಲಿ ಸೇರೋದು ಬರೀ ಕೀಟಗಳೇ ತಾನೇ? ಹಾಗೆಯೇ ಇದೂ ಸಹ.

2. ತಗ್ಗಿ ಬಗ್ಗಿ ನೆಡೆದರೂ ಹುಷಾರಾಗಿ ನೆಡೀಬೇಕು. ದೇವನ ಮುಂದೆ ಬಾಗದ ತಲೆ ಕ್ಷೌರಿಕನಿಗೆ ಬಾಗುತ್ತೆ. ಕ್ಷೌರಕ್ಕೂ ಬಾಗದ ತಲೆ ಹೆಂಡತಿಗೆ ಬಾಗುತ್ತೆ. ಹೀಗೂ ಬಾಗದ ತಲೆ, ಸ್ಮಾರ್ಟ್‌ ಫೋನ್‌ ಮುಂದೆ ಖಂಡಿತ ಬಾಗಿಯೇ ಬಾಗುತ್ತೆ !
ಅಂತರಾತ್ಮದ ಮಾತು ಏನಂದ್ರೆ, ತಲೆ ಬಾಗುವುದು ತಪ್ಪೇನಿಲ್ಲ. ತಲೆ ಬಾಗಿಸದೇ ಇದ್ದಲ್ಲಿ ತಲೆ ಹಾಗೇ ಗಟ್ಟಿಯಾಗಿ ನಿಂತುಬಿಡಬಹುದು. ಕುತ್ತಿಗೆಯ ನರ ಸೆಟೆದು ನಿಂತೀತು. ಇದೇ ಸನ್ನಿವೇಶವು ಕೆಲಸವನ್ನೇ ಮಾಡದ ಕೈಕಾಲುಗಳಿಗೂ ಅನ್ವಯ. ಓಡದ ಬುದ್ಧಿಗೂ ಇದು ಅನ್ವಯಿಸಬಹುದು. ಪುಸ್ತಕ ಓದುವಾಗ, ದಿನಪತ್ರಿಕೆ ಓದುವಾಗ, ವಾರಪತ್ರಿಕೆಗಳನ್ನು ಓದುವಾಗ ಹೀಗೆ ಎಲ್ಲ ಸಂದರ್ಭಗಳಲ್ಲೂ ತಾಳೆ ಬಾಗಿಸುವುದೇ ಆಗಿರುವಾಗ ಮೊಬೈಲ್‌ ಮುಂದೆ ತಲೆ ಬಾಗುವುದು ಎಂದ ಕೂಡಲೇ ತಪ್ಪು ಎಂದೇಕೆ ಅನ್ನುತ್ತಾರೋ? ತಲೆಬಾಗಿಸುವುದು ಶರಣಾಗತಿಗೂ ಆಗಬಹುದು, ಭಕ್ತಿಪೂರ್ವಕವಾಗಿಯೂ ಇರಬಹುದು, ಗೌರವ ಸೂಚಕವೂ ಆಗಬಹುದು. ತಲೆ ಬಾಗಿಸುವುದೇ ಆಗಿದ್ದಲ್ಲಿ ಸೂಕ್ತ ಆಯ್ಕೆ ಮಾಡಿ.

3. ಬಾಗಿದರೆ ಬೆನ್ನು ತುಳೀತಾರೆ, ಬಿದ್ದರೆ ಹೊಸಕಿ ಹಾಕುತ್ತಾರೆ.
ನಿಮ್ಮ ಮೊಬೈಲ್‌ ಕೆಳಗೇನಾದರೂ ಬಿದ್ದರೆ ಅದನ್ನೆತ್ತಿಕೊಳ್ಳುವ ಮುನ್ನ ಆಚೆ ಈಚೆ ಒಮ್ಮೆ ನೋಡಿ. ನಿಮ್ಮ ಡೇಟಾ ಅಥವಾ ಮೊಬೈಲಿನಲ್ಲಿ ಶೇಖರಣೆಯಾಗಿರುವ ಚಿತ್ರಗಳು ಚೆಲ್ಲಾ ಪಿಲ್ಲಿಯಾಗಿರಬಹುದು ಅಂತಲ್ಲಾ ಹೇಳಿದ್ದು. ಮೆಸೇಜ್‌ ಮಾಡಿಕೊಂಡೇ ನೆಡೆದಾಡೋ ಭೂತಗಳು, ಮೊಬೈಲಲ್ಲಿ ಮಾತನಾಡಿಕೊಂಡೇ ಓಡಾಡುವ ಚರಜೀವಿಗಳು ಇರುತ್ತಾರೆ. ಈ ಎರಡೂ ಪಂಗಡಕ್ಕೂ ಸುತ್ತಲ ಅರಿವಿರುವುದಿಲ್ಲ. ಫೋನೆತ್ತಿಕೊಳ್ಳಲು ಬಾಗಿದ ನಿಮ್ಮ ಬೆನ್ನನ್ನು ತುಳಿಯಬಹುದು ಅಥವಾ ಬಲಿಯನ್ನು ಪಾತಾಳಕ್ಕೆ ಒತ್ತಿದಂತೆ ನಿಮ್ಮ ತಲೆಯನ್ನೇ ಒತ್ತಿಬಿಡಬಹುದು. ಹೀಗೂ ಅಲ್ಲದೇ, ಕೆಳಕ್ಕೆ ಬಾಗಿದ ನಿಮ್ಮನ್ನು ಎಡವಿ ತಾವು ಬಿದ್ದು ತಮ್ಮ ಮೊಬೈಲ್‌ ಬೀಳಿಸಿಕೊಂಡದಲ್ಲಿ ನಿಮ್ಮನ್ನೇ ತದುಕಿದರೆ ಕಷ್ಟ.

4. ಟೆಕ್ಕಿ ಜನರೇ, ಕಷ್ಟಪಟ್ಟು ಕೆಲಸವನ್ನು, ಮಾಡಬೇಡಿ. ಇಷ್ಟಪಟ್ಟು, ಜಾಣ್ಮೆಯಿಂದ ಕೆಲಸ ಮಾಡಿ !
ನೀವೇನೂ ಬಾವಿ ತೆಗೆಯಲು ಮಣ್ಣು ಅಗೆಯುತ್ತಿಲ್ಲ, ಮೀನುಗಳ ಮಾರುಕಟ್ಟೆಯಲ್ಲಿ ಮಲಗಿಲ್ಲ. ಕೂತಿರೋದು ಎಸಿ ರೂಮಿನಲ್ಲಿ. ಇಪ್ಪತ್ತನಾಲ್ಕು ಘಂಟೆ ಸತತವಾಗಿ ದುಡಿದರೂ ಒಂದು ಹನಿ ಬೆವರು ಕಾಣಿಸೋಲ್ಲ. ಹೀಗಿದ್ದ ಮೇಲೆ ಕಷ್ಟ ಎಲ್ಲಿಂದ ಬಂತು? ದಿನ ಬೆಳಗಾದರೆ ಬರೋ ಸಂಕಟಗಳನ್ನ ಜಾಣ್ಮೆಯಿಂದ ಎದುರಿಸಿ. ಕೆಲಸವನ್ನು ಇಷ್ಟಪಟ್ಟು ಮಾಡಿ.

5. ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಸರ್ವಕಾಲಿಕ ಶ್ರೇಷ್ಠ ಮಾತು.
ನೀವು ಒಂದು ಕಟ್ಟಡದ Basementನಲ್ಲಿ ಕಾರು ಪಾರ್ಕ್‌ ಮಾಡಿ, ಲಿಫ್ಟ್ ನಲ್ಲಿ ಎಷ್ಟನೆಯದೋ ಮಹಡಿಯ ನಿಮ್ಮ ಕಚೇರಿಗೆ ತಲುಪಿದರೂ ಸಂಜೆಗೆ ಕೆಳಗೆ ಬರಲೇಬೇಕು. . Flightನಲ್ಲೇ ಪ್ರಾಣ ಹೋದರೂ ನೇರವಾಗಿ ಅಲ್ಲಿಂದಲೇ ಸ್ವರ್ಗಕ್ಕೆ ಹೋಗೋದಿಲ್ಲ. ಮೂರು ಮಹಡಿ ಮೇಲೆ ಕಾರು ನಿಲ್ಲಿಸಿದ್ದರೂ ಬೀದಿಗೆ ಬರೋ ಸಮಯ ಬಂದಾಗ ಕಾರು, ಕಾಲು ಎಲ್ಲ ಕೆಳಗೆ ಇಳಿದೇ ಇಳಿಯುತ್ತೆ. ಸದಾಕಾಲ ಮೇಲೇ ಇರಲು ಸಾಧ್ಯವಿಲ್ಲ !

ಇವು ನನ್ನ ಅಂತರಾತ್ಮದ ಪಿಸು ಮಾತುಗಳು ಅಷ್ಟೇ! ದಿನನಿತ್ಯದಲ್ಲಿ ಉತ್ತಮ ಜೀವನಕ್ಕಾಗಿ ಸೂತ್ರಗಳು ಎಂಬಂತೆ ಹರಿದಾಡುವ ನುಡಿಗಳಂತೆ ಈ ನುಡಿಗಳು ನನ್ನವು. ಸದ್ಯಕ್ಕೆ ಒಂದೈದು ಮಾತುಗಳನ್ನು ಇಟ್ಟುಕೊಂಡಿರಿ. ಇಷ್ಟವಾದಲ್ಲಿ ಮತ್ತಷ್ಟು ಕಿವಿಮಾತುಗಳನ್ನು ಮುಂದೆ ಹೇಳ್ತೀನಿ…

– ಶ್ರೀನಾಥ್‌ ಭಲ್ಲೆ, ರಿಚ್ಮಂಡ್

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.