
ಔಷಧಗಳನ್ನು ಬಿಟ್ಟುಬಿಡಬೇಡಿ…ಮಧುಮೇಹಿಗಳ ಆರೋಗ್ಯದ ಗುಟ್ಟು
ಕಾವ್ಯಶ್ರೀ, Jan 10, 2023, 5:40 PM IST

ಮಧುಮೇಹ, ಇದು ಇತ್ತಿಚೀನ ದಿನಗಳಲ್ಲಿ ಎಲ್ಲರಲ್ಲೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಪ್ರಪಂಚದಾದ್ಯಂತ ಸುಮಾರು 400 ಮಿಲಿಯನ್ ಜನರು ಈ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದು ವರದಿಯ ಅಂಕಿಅಂಶ ತಿಳಿಸಿದೆ. ಇದನ್ನು ಸಕ್ಕರೆ ಕಾಯಿಲೆ, ಡಯಾಬಿಟೀಸ್, ಶುಗರ್ ಎಂದು ಕೂಡಾ ಹೇಳಲಾಗುತ್ತದೆ.
ರಕ್ತದಲ್ಲಿ ಗ್ಲುಕೋಸ್ ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದಕ್ಕೆ ಡಯಾಬಿಟೀಸ್ ಎನ್ನುತ್ತಾರೆ. ದೇಶದಲ್ಲಿ ಅತ್ಯಧಿಕ ಪ್ರಚಲಿತದಲ್ಲಿರುವ ದೀರ್ಘಕಾಲಿಕ ಕಾಯಿಲೆಗಳ ಪಟ್ಟಿಗೆ ಮಧುಮೇಹವೂ ಸೇರಿದೆ. ಹಾಗಾಗಿ, ಅದರ ನಿರ್ವಹಣೆ, ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.
ಹಸಿವಾಗುವುದು, ದೃಷ್ಟಿ ಮಂಜಾಗುವಿಕೆ, ತೂಕ ಇಳಿಯುವಿಕೆ, ಬೆವರು, ಸುಸ್ತು, ಗಾಯ ಬೇಗ ವಾಸಿಯಾಗದಿರುವುದು, ಪದೇ ಪದೇ ಮೂತ್ರವಿಸರ್ಜನೆ, ಅತಿಯಾಗಿ ಬಾಯಾರಿಕೆಯಾಗುವುದು, (ಬಾಯಾರಿಕೆ ಕೇವಲ ಮಧುಮೇಹದ ಲಕ್ಷಣ ಮಾತ್ರ ಅಲ್ಲ) ಮಧುಮೇಹದ ಸಾಮಾನ್ಯ ರೋಗ ಲಕ್ಷಣಗಳು.
ವ್ಯಾಯಾಮ, ಆಹಾರ ಪದ್ಥತಿ, ಸರಿಯಾಗಿ ನಿದ್ರಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ. ಮಧುಮೇಹವಿರಲಿ, ಇಲ್ಲದಿರಲಿ ಸಮತೋಲನ ಆಹಾರದ ಮೇಲೆ ಹೆಚ್ಚು ಗಮನ ವಹಿಸುವ ಅಗತ್ಯ ಇದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ವ್ಯಾಯಾಮ: ದೈಹಿಕ ವ್ಯಾಯಾಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂದಿನ ದಿನಗಳಲ್ಲಿ ವ್ಯಾಯಾಮ ಪ್ರತಿಯೊಬ್ಬರಿಗೂ ಅಗತ್ಯ. ಬಿಡುವಿಲ್ಲದ ಮತ್ತು ಒತ್ತಡದ ಜೀವನದಲ್ಲಿ ನಿತ್ಯ ಒಂದು ಗಂಟೆ ವ್ಯಾಯಾಮ ಮಾಡುವುದು ಒಳ್ಳೆಯ ಅಭ್ಯಾಸ. ಇದರಿಂದ ನಾವು ಮಧುಮೇಹವನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಲು ಸಹಾಯವಾಗುತ್ತದೆ.
ದೈಹಿಕ ವ್ಯಾಯಾಮವಿಲ್ಲದೆ ಹೆಚ್ಚು ದೇಹ ಬೆಳೆಸಿಕೊಂಡು ಕೊಬ್ಬು ಹೆಚ್ಚಾಗುತ್ತದೆ. ಇದು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿಸುತ್ತದೆ. ಅದನ್ನು ತಡೆಗಟ್ಟಲು, ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅಗತ್ಯ.
ಔಷಧಗಳನ್ನು ಬಿಟ್ಟುಬಿಡಬೇಡಿ:
ಮಧುಮೇಹಿಗಳು ಆಹಾರ ಕ್ರಮ ಅನುಸರಿಸುವುದರೊಂದಿಗೆ ಅವರಿಗೆ ವೈದ್ಯರು ಪರೀಕ್ಷಿಸಿ ನೀಡಿದ ಔಷಧಿಗಳನ್ನು ತಪ್ಪದೇ ಸೇವಿಸಬೇಕು.
ಆಹಾರ ಪದ್ಥತಿ:
ಆರೋಗ್ಯಕರ ಆಹಾರ: ಮಧುಮೇಹ ಸಮಸ್ಯೆ ಇರುವವರು ಆಹಾರ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಆಹಾರ ಕ್ರಮ ಉತ್ತಮವಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ.
ಸಂಸ್ಕರಿಸಿದ ಉತ್ಪನ್ನಗಳಾದ ನೂಡಲ್ಸ್, ಬಿಳಿ ಅಕ್ಕಿ, ಬಿಳಿ ಬ್ರೆಡ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಆದ್ದರಿಂದ ಅಂತಹ ಆಹಾರಗಳಿಂದ ದೂರವಿರುವುದು ಉತ್ತಮ.
ಮಧುಮೇಹ ನಿಯಂತ್ರಿಸಲು ಮನೆ ಮದ್ದು ಕೂಡ ಉಪಯೋಗಿಸಬಹುದು. ಅವುಗಳೆಂದರೆ…
ಹಾಗಲಕಾಯಿ ಜ್ಯೂಸ್: ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಗಲಕಾಯಿ ಜ್ಯೂಸ್ ಸೇವಿಸಿದರೆ ಮಧುಮೇಹ ತಡೆಗಟ್ಟಬಹುದು. ಹಾಗಲಕಾಯಿ ಕಹಿ ಇರುವುದರಿಂದ ಕೆಲವರಿಗೆ ಇದರ ಹಸಿ ಸೇವನೆ ಕಷ್ಟವಾದರೆ ಜ್ಯೂಸ್ ಸೇವಿಸುವ ಬದಲು ಪಲ್ಯ ಅಥವಾ ಸಾರು ಮಾಡಿ ಸೇವಿಸಬಹುದು. ಇದನ್ನು ಪ್ರತಿ ನಿತ್ಯ ಆಹಾರದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಕೂಡ ಒಳ್ಳೆಯದು.
ಮೆಂತ್ಯೆ ಕಾಳು: ರಾತ್ರಿಯ ಸಮಯದಲ್ಲಿ ಒಂದು ಚಮಚ ಮೆಂತ್ಯೆಯನ್ನು ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ನೆನೆಸಿಟ್ಟ ಮೆಂತ್ಯೆ ಮತ್ತು ಅದರ ನೀರನ್ನು ಸೇವಿಸಬೇಕು. ಇದರಲ್ಲಿ ಹೀರಿಕೊಳ್ಳುವಂತಹ ನಾರಿನಾಂಶವಿದೆ ಮತ್ತು ಜೀರ್ಣಕ್ರಿಯೆ ಹಾಗೂ ಕಾರ್ಬೋಹೈಡ್ರೇಟ್ಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಪರಿಣಾಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿತಂತ್ರಿಸುತ್ತದೆ.
ಒಣ ಹಣ್ಣು:
ಒಣ ಹಣ್ಣುಗಳಲ್ಲಿ ಉನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಗಳು ಇವೆ. ಇದು ತಾಜಾ ಹಣ್ಣುಗಳಲ್ಲಿ ಸಿಗುವುದಕ್ಕಿಂತಲೂ ಹೆಚ್ಚಾಗಿರುತ್ತದೆ. ಇದರ ಸಿಪ್ಪೆ ತೆಗೆದು ಸೇವನೆ ಮಾಡಿದರೆ ನಾರಿನಾಂಶ ಕಡಿಮೆ ಇರುವುದು ಮತ್ತು ಸಕ್ಕರೆ ಮಟ್ಟವು ಹೆಚ್ಚಾಗಿರುವುದು. ಎರಡು ಚಮಚ ಒಣದ್ರಾಕ್ಷಿಯಲ್ಲಿ 100 ಕ್ಯಾಲರಿ, 23 ಗ್ರಾಂ ಕಾರ್ಬ್ಸ್ ಮತ್ತು 18 ಗ್ರಾಂ ಸಕ್ಕರೆ ಇದೆ. ಒಂದು ಕಪ್ ತಾಜಾ ದ್ರಾಕ್ಷಿಯಲ್ಲಿ 62 ಕ್ಯಾಲರಿ, 16 ಗ್ರಾಂ ಕಾರ್ಬ್ಸ್ ಮತ್ತು 15 ಗ್ರಾಂ ಸಕ್ಕರೆ ಇದೆ ಎನ್ನುತ್ತಾರೆ ವೈದ್ಯರು.
ಬಾದಾಮಿಯಲ್ಲಿ ಹೆಚ್ಚು ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಪೋಸ್ಪರಸ್, ಕಬ್ಬಿನಾಂಶ ಮತ್ತು ಏಕಪರ್ಯಾಪ್ತ ಕೊಬ್ಬಿನಾಂಶವಿದೆ. ಬಾದಾಮಿ ಸೇವನೆ ಮಾಡುವ ಪರಿಣಾಮವಾಗಿ ಗ್ಲೈಸೆಮಿಕ್ ಇಂಡೆಕ್ಸ್ ತಗ್ಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆಯಾಗದಂತೆ ತಡೆಯುತ್ತದೆ.
ನೆಲ್ಲಿಕಾಯಿ, ಬೆಳ್ಳುಳ್ಳಿ, ಪಾಲಕ್ ಸೊಪ್ಪುಗಳನ್ನು ನಮ್ಮ ದೈನಂದಿನ ಆಹಾರದೊಂದಿಗೆ ಸೇವಿಸದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ.
–ಕಾವ್ಯಶ್ರೀ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beauty Tips: ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು….

Non-vegetarian Recipes; ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್…

Health Tips: ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಈ ಲೋಷನ್ ಬಳಸಿ..

Fort;ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗದ ಜಂಜೀರಾ ಕೋಟೆ ಬಗ್ಗೆ ಗೊತ್ತಾ?

‘ಮತ್ತದೇ ಬೇಸರ, ಮತ್ತೆ ಸಂಜೆ…’ ಒದ್ದೆ ಮೈದಾನದಲ್ಲಿ ಜಾರಿ ಬಿತ್ತು RCB ಟ್ರೋಫಿ ಕನಸು