ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್‌ಗೆ ಇದೆ ಮನೆ ಮದ್ದು

ವೈದ್ಯರ ಭೇಟಿಯ ನಂತರವೇ ವೈದ್ಯರ ಸಲಹೆಯಂತೆ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಿ.

Team Udayavani, Jan 30, 2023, 5:45 PM IST

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್‌ಗೆ ಇದೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದ ನಡುವೆ ಅನೇಕ ರೋಗಗಳು ಮನುಷ್ಯನನ್ನು ವ್ಯಾಪಿಸುತ್ತಿವೆ. ಅದರಲ್ಲೂ ಮನುಷ್ಯನಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳ ಪೈಕಿ ಮೈಗ್ರೇನ್‌ ಕೂಡ ಒಂದು. ಮೈಗ್ರೇನ್‌ ಅಂದರೆ ತಲೆನೋವಿನ ಮತ್ತೂಂದು ಭಾಗ. ತಲೆಯ ಮಧ್ಯ ಭಾಗದಲ್ಲಿ ನೋವಿದ್ದರೆ ಸಾಮಾನ್ಯ ತಲೆನೋವು ಎಂದರ್ಥ. ಆದರೆ, ಒಮ್ಮೊಮ್ಮೆ ತಲೆಯ ಎಡ, ಮತ್ತೂಮ್ಮೆ ತಲೆಯ ಬಲ ಭಾಗದಲ್ಲಿ ಆಗಾಗ ನೋವು ಕಾಣಿಸಿಕೊಂಡರೆ ಅದು ಮೈಗ್ರೇನ್‌ ತಲೆನೋವು ಎನ್ನಬಹುದು.

ಮೈಗ್ರೇನ್‌ ತಲೆನೋವು ಸಮಯದಲ್ಲಿ ಸಾಮಾನ್ಯವಾಗಿ ಕೆಲವರಿಗೆ ವಾಂತಿ ಬಂದಂತಹ ಅನುಭವವೂ ಆಗುವುದಿದೆ. ಕೆಲವರಿಗೆ ತಲೆಸುತ್ತು ಬರುವುದು, ನಿದ್ದೆ ಮರೀಚಿಕೆಯಾಗುವುದು, ಹೊಟ್ಟೆ ತೊಳೆಸುವಿಕೆ, ವಾಂತಿಯಾಗುವುದು ಇವೆಲ್ಲ ಲಕ್ಷಣಗಳು ಕಂಡುಬರುತ್ತವೆ. ಕೆಲವೊಂದು ಬಾರಿ ವಾಂತಿಯಾದ ಬಳಿಕ ತಲೆನೋವು ಕಡಿಮೆಯಾಗುತ್ತದೆ.

ಮೈಗ್ರೇನ್‌ ಕೆಲವರಿಗೆ ವಂಶಪಾರಂಪರ್ಯವಾಗಿಯೂ ಬರಬಹುದು. ಮೈಗ್ರೇನ್‌ ಬಂದರೆ ನೆಗಡಿಯಂತಹ ದೈಹಿಕ ಚಟುವಟಿಕೆಯಲ್ಲಿಯೂ ತಲೆನೋವು ಹೆಚ್ಚಿಸುತ್ತದೆ. ತಿಂಗಳಿಗೆ ಎರಡು ಬಾರಿ ಬಿಟ್ಟು ಬಿಟ್ಟು ತಲೆನೋವು ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ. ವೈದ್ಯರ ಭೇಟಿಯ ನಂತರವೇ ವೈದ್ಯರ ಸಲಹೆಯಂತೆ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಿ.

ಮೈಗ್ರೇನ್‌ಗೆ ಇದೆ ಮನೆ ಮದ್ದು
ಸಾಮಾನ್ಯ ಕಾಯಿಲೆಗೆ ಆ್ಯಂಟಿಬಯೋಟಿಕ್‌ ಔಷಧ ಸೇವನೆ ಮಾಡುವ ಮುನ್ನ ಮನೆ ಮದ್ದು ಸೇವಿಸುವುದು ಉತ್ತಮ. ಮೈಗ್ರೇನ್‌ ಕಾಯಿಲೆ ಇರುವ ಮಂದಿ ಒಂದು ಚಮಚ ಧನಿಯಾ ಪುಡಿಯನ್ನು ಒಂದು ಲೋಟ ನೀರಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೈಗ್ರೇನ್‌ ನಿವಾರಣೆಯಾಗಬಹುದು. ಕೆಲವರಿಗೆ ಕಫ ಹೆಚ್ಚಾದಾಗ ಮೈಗ್ರೇನ್‌ ಆರಂಭವಾಗುತ್ತದೆ. ಈ ವೇಳೆ ಕಾಲು ಚಮಚ ಲವಂಗ ಎಣ್ಣೆಗೆ ಒಂದು ಚಮಚ ಏಲಕ್ಕಿ ಎಣ್ಣೆ ಬೆರೆಸಿ ಹಣೆಗೆ ಹಚ್ಚಿ ಮಸಾಜ್‌ ಮಾಡಬಹುದಾಗಿದೆ.

ಶುಂಠಿಯ ಬಳಕೆಯಿಂದ ತ್ವರಿತವಾಗಿ ಮೈಗ್ರೇನ್‌ ತಲೆನೋವಿಗೆ ಪರಿಹಾರ ಕಾಣಬಹುದಾಗಿದೆ. ಶುಂಠಿಯು ತಲೆಯಲ್ಲಿರುವ ರಕ್ತನಾಳಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ, ಮೈಗ್ರೇನ್‌ ಸಮಯದಲ್ಲಿ ಉಂಟಾಗುವ ವಾಕರಿಕೆ ಸಮಸ್ಯೆ ದೂರವಾಗುತ್ತದೆ. ದಾಲಿcನ್ನಿ ತುಂಡುಗಳನ್ನು ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್‌ ಮಾಡಿ. ಇದನ್ನು ನಿಮ್ಮ ಹಣೆಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಮಲಗಿಕೊಳ್ಳಿ. ಅನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮೈಗ್ರೇನ್‌ ತಲೆನೋವು ಕಡಿಮೆಯಾಗುತ್ತದೆ. ನಿಮ್ಮ ತಲೆ ಮತ್ತು ಕುತ್ತಿಗೆಯ ಕೆಲವು ಸರಳ ವ್ಯಾಯಾಮಗಳಿಂದ ಸಹ ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ, ವ್ಯಾಯಾಮ ಮಾಡುವ ಮುನ್ನ ಯೋಗ ಶಿಕ್ಷಕರನ್ನು ಭೇಟಿಯಾಗಿ.

ವೈದ್ಯರ ಸಲಹೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ತಲೆ ನೋವು ಸಾಮಾನ್ಯ. ಹಾಗಂತ ತಲೆನೋವು ನಿರ್ಲಕ್ಷಿಸಬಾರದು. ಕೆಲವೊಬ್ಬರಿಗೆ ವಂಶಪಾರಂಪರ್ಯವಾಗಿ ಮೈಗ್ರೇನ್‌ ತಲೆನೋವು ಬರಬಹುದು. ಯಾವುದೇ ಗುಳಿಗೆಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬೇಡಿ.
– ಡಾ| ಹರಿಪ್ರಸಾದ್‌, ವೈದ್ಯರು

– ನವೀನ್‌ ಭಟ್‌, ಇಳಂತಿಲ

ಟಾಪ್ ನ್ಯೂಸ್

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

1-adsa-dsad

ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ

indi-1

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!

bhavana rao is in Gray Games

ಭಾವನಾ ಹೊಸ ಗೇಮ್‌! ಗ್ರೇ ಗೇಮ್ಸ್ ನಲ್ಲಿ ಪೊಲೀಸ್‌ ಆಫೀಸರ್‌

DKShi

ಡಿಕೆಶಿ ವಿರುದ್ಧದ ಸಿಬಿಐ ವಿಚಾರಣೆಗೆ ಎಪ್ರಿಲ್ 6ರವರೆಗೆ ತಡೆ ನೀಡಿ ಹೈಕೋರ್ಟ್ ಆದೇಶ

ಹೊಸ ನಾಯಕರ ಹೋರಾಟ: ಕೆಕೆಆರ್ ಗೆ ಪಂಜಾಬ್ ಸವಾಲು; ಟಾಸ್ ಗೆದ್ದ ನಿತೀಶ್ ರಾಣಾ

ಹೊಸ ನಾಯಕರ ಹೋರಾಟ: ಕೆಕೆಆರ್ ಗೆ ಪಂಜಾಬ್ ಸವಾಲು; ಟಾಸ್ ಗೆದ್ದ ನಿತೀಶ್ ರಾಣಾ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food

ವಾವ್! ಏನ್ ರುಚಿ ಈ ಸಿಗಡಿ ಘೀ ರೋಸ್ಟ್..ಸಿಗಡಿ ತಂದರೆ ಒಮ್ಮೆ ಹೀಗೆ ಮಾಡಿ ನೋಡಿ…

1-wwqeq3

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

web-health

ಎಚ್ಚರ…ಬಿಸಿಲ ಬೇಗೆಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಅಗತ್ಯವಾಗಿ ಈ ಆಹಾರ ಸೇವಿಸಿ

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಬಂಕಾಪುರ: ಕಂದಾಯ ಅಧಿಕಾರಿಗಳ ಕೂಡಿ ಹಾಕಿ ಪ್ರತಿಭಟನೆ

ಬಂಕಾಪುರ: ಕಂದಾಯ ಅಧಿಕಾರಿಗಳ ಕೂಡಿ ಹಾಕಿ ಪ್ರತಿಭಟನೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

1-adsa-dsad

ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ

tdy-19

ಅನುಮತಿಯಿಲ್ಲದೇ ಜಾಹೀರಾತು ಅಂಟಿಸಿದರೆ ಶಿಕ್ಷೆ

indi-1

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ